Malenadu Mitra
ರಾಜ್ಯ ಶಿವಮೊಗ್ಗ

ಖೇಲೋ ಇಂಡಿಯಾಕ್ಕಾಗಿ ಸ್ಥಳೀಯರ ಖೇಲ್ ಖತಂ ಎಷ್ಟು ಸರಿ ?

ಶಿವಮೊಗ್ಗದ ಆಡಳಿತ ಚುಕ್ಕಾಣಿ ಹಿಡಿದವರ ಎಲ್ಲಾ ಪ್ಲಾನ್‍ಗಳೂ ಅಂದು ಕೊಂಡಂತೆ ಆದರೆ ಮಲೆನಾಡಿನ ಕಿರೀಟಪ್ರಾಯವಾದ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣ ಮತ್ತು ಅದರ ಸುತ್ತಣ 30 ಎಕರೆ ಪ್ರದೇಶ ಖೇಲೋ ಇಂಡಿಯಾ ಪ್ರಾಜೆಕ್ಟ್‍ನಲ್ಲಿ ಸೇರಿಹೋಗಲಿದೆ.
ಖೇಲೋ ಇಂಡಿಯಾ ಯೋಜನೆಯಡಿ ಕೋಟ್ಯಂತರ, ಸಿಂಥೆಟೆಕ್ಟಿ ರೂ. ಅನುದಾನ ಶಿವಮೊಗ್ಗಕ್ಕೆ ಬರುವುದು ಸಂತೋಷದ ಸಂಗತಿಯೇ ಆದರೆ ಇಂತಹ ವಿಶಾಲ ಮಲೆನಾಡಿನಲ್ಲಿ ಅದಕ್ಕೊಂದು ಜಾಗ ಬೇರೆಲ್ಲೂ ಸಿಗಲಿಲ್ಲವೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಶಿವಮೊಗ್ಗ ಸಹ್ಯಾದ್ರಿ ಕ್ರೀಡಾಂಗಣ ಕುವೆಂಪು ವಿವಿ ಅಧೀನದಲ್ಲಿದ್ದು, ಇಲ್ಲಿನ ಎಲ್ಲಾ ಕ್ರೀಡಾ ಚಟುವಟಿಕೆಗಳಿಗೆ ಕೇಂದ್ರಸ್ಥಳವಾಗಲಿದೆ. ಅಲ್ಲಿ ಇನ್ನೂ ಮೂಲಭೂತ ಸೌಕರ್ಯಕ್ರಗಳು ಆಗಬೇಕಿದೆ. ಸಹ್ಯಾದ್ರಿ ಕ್ಯಾಂಪಸ್‍ನಲ್ಲಿ ಮೂರು ಕಾಲೇಜುಗಳಿಂದ 6500 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ. ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಲಾಗಾಯ್ತಿನಿಂದ ಇರುವ ಕ್ರೀಡಾಂಗಣ ಬೇಡವೇ ಎಂಬುದು ಕ್ರೀಡಾ ಪ್ರೇಮಿಗಳ ಪ್ರಶ್ನೆಯಾಗಿದೆ.

ಖೇಲೋ ಇಂಡಿಯಾ ಪ್ರಾಜೆಕ್ಟ್ ಏನು ?

ಸಹ್ಯಾದ್ರಿ ಕಾಲೇಜಿನ ವಿಶಾಲವಾದ ಕ್ಯಾಂಪಸ್ ನಲ್ಲಿ ಸಾಯಿ ಹಾಗು ಖೆಲೋ ಇಂಡಿಯಾವತಿಯಿಂದ ಸ್ಪೋರ್ಟ್ಸ್ ಹಬ್ ನಿರ್ಮಾಣ ಮಾಡುವುದು ಉದ್ದೇಶಿತ ಯೋಜನೆ ಇದಕ್ಕಾಗಿ 30 ಎಕರೆ ಜಾಗ ಮೀಸಲಾಗಿಟ್ಟಿದ್ದುಇಲ್ಲಿ ವಿವಿಧ ಕ್ರೀಡಾ ಸಂಕೀರ್ಣ,ಕ್ರೀಡಾಂಗಣಗಳು ತಲೆ ಎತ್ತಲಿವೆ. ಡರ್ಟ್ ಟ್ರಾಕ್ ಸೇರಿದಂತೆ ವಿವಿಧ ಅಥ್ಲೆಟಿಕ್ ಕ್ರೀಡೆಗಳ ಅಭ್ಯಾಸ ನಡೆಯುತ್ತೆ.ಕ್ರೀಡಾಂಗಣ ಮುಭಾಂಗವಿರುವ ಸಹ್ಯಾದ್ರಿ ವಾಣಿಜ್ಯ ಕಾಲೇಜು ಕ್ರೀಡಾ ಹಾಸ್ಟೆಲ್ ಆಗಿ ಪರಿವರ್ತನೆಯಾಗುತ್ತೆ. ಮೂರು ಒಳಾಂಗಣ ಕ್ರೀಡಾಂಗಣ,ಸ್ವಿಮ್ಮಿಂಗ್ ಫೂಲ್,ಹಾಕಿ ಸ್ಟೇಡಿಯಂ,ಲಾನ್ ಟೆನ್ನಿಸ್, ಬಿಲ್ಲುಗಾರಿಕೆ,ರೈಫಲ್ ಶೂಟಿಂಗ್ ಸೇರಿದಂತೆಒಂದು ದೊಡ್ಡ ಕ್ರೀಡಾ ಸಮುಚ್ಛಯವೇ ನಿರ್ಮಾಣವಾಗಲಿದೆ. ಸಹ್ಯಾದ್ರಿ ವಿಜ್ಞಾನ,ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಿಂಭಾಗದ ಸಂಪೂರ್ಣ ಪ್ರದೇಶ ಸಾಯಿ ಪಾಲಾಗಲದೆ. ದೇಶದ ಮೂಲೆ ಮೂಲೆಗಳಲ್ಲಿರುವ ಕ್ರೀಡಾಪಟುಗಳು ಇಲ್ಲಿ ತರಬೇತಿ ಪಡೆಯಲಿದ್ದಾರೆ.

ನಿರ್ಬಂಧಿತ ಪ್ರದೇಶ


ದೇಶ ಪ್ರತಿನಿಧಿಸುವ ಕ್ರಿಡಾಪಟುಗಳು ಅಭ್ಯಾಸ ನಡೆಸುವ ಜಾಗವೆಂದರೆ ಅಲ್ಲಅದರದ್ದೇ ಆದ ನಿಯಮಾವಳಿಗಳಿರುತ್ತವೆ, ಮಾತ್ರವಲ್ಲದೆ ಭದ್ರತೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತೆ.ಹೀಗಾಗಿ ಮೂವತ್ತು ಎಕರೆ ಪ್ರದೇಶಕ್ಕೆ ನೂರು ಸೆಕ್ಯುರಿಟಿ ಗಾರ್ಡ್ ಗಳು ಹಾಗು ನಾಲ್ಕು ಗನ್ ಮನ್ ಗಳು ಕಣ್ಗಾವಲಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ ಗೆ ಆಪತ್ತು

ಸಾಯಿ ಮತ್ತು ಖೋಲೋ ಇಂಡಿಯಾ ಪ್ರಾಜೆಕ್ಟ್‍ನಿಂದ ಅದೆಷ್ಟು ಉದ್ಯೋಗ ಸೃಷ್ಟಿಯಾಗುತ್ತೊ, ಕ್ರೀಡಾಂಗಣ ಸುತ್ತಲ ಭೂಮಿಗೆ ಅದೆಷ್ಟು ಬೆಲೆ ಬರುತ್ತೊ ಗೊತ್ತಿಲ್ಲ. ಆದರೆ ನಗರದ ಒಳಗೆ ಇದು ನಿಮಾರ್ಣವಾಗುವುದರಿಂದ ಸಹ್ಯಾದ್ರಿ ಕಾಲೇಜು ಕ್ಯಾಂಪಡ್ ತನ್ನತನ ಕಳೆದುಕೊಳ್ಳುತ್ತದೆ. ಅಲ್ಲಿನ ಪಾರಿಸರಿಕ ವಾತವಾರಣ ಇನ್ನಿಲ್ಲವಾಗುತ್ತದೆ. ಸ್ಥಳೀಯರಿಗೆ ಇಲ್ಲಿ ನಿಷೇಧ ಇರುವುದರಿಂದ ಕಾಲೇಜಿನ 6500 ವಿದ್ಯಾರ್ಥಕ್ರೀಡಾ ಚಟುವಟಿಕೆ, ಸ್ಥಳೀಯರ ವಾಯುವಿಹಾರ ಇತ್ಯಾದಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.

ಕಾಲೇಜುಗಳ ವಿರೊಧ


ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳ ಹಂತದಲ್ಲಿ ಈಗಾಗಲೇ ಸಭೆಗಳು ನಡೆದಿವೆ. ಆದರೆ ಸಹ್ಯಾದ್ರಿ ಕ್ಯಾಂಪಸ್‍ನ ಮೂರೂ ಕಾಲೇಜುಗಳ ಆಡಳಿತ ವರ್ಗ ಸರಕಾರದ ನಿರ್ಣಯಕ್ಕೆ ವಿರೋಧ ವ್ಯಕ್ತ ಮಾಡಿದೆ. ಸೋಮವಾರ ಸಭೆ ಸೇರಿದ್ದ ಕಾಲೇಜಿನ ಪ್ರಾಚಾರ್ಯರು ಹಾಗೂ ಅಧ್ಯಾಪಕರುಗಳ ಸಮೂಹ ಈ ವಿಚಾರವನ್ನು ಮೊದಲು ವಿಶ್ವವಿದ್ಯಾಲಯದ ಕುಲಪತಿಗಳ ಗಮನಕ್ಕೆ ತರಲು ನಿರ್ಣಯ ಕೈಗೊಳ್ಳಲಾಗಿದೆ.

ದೊಡ್ಡ ಪ್ರಾಜೆಕ್ಟ್ ಕೈ ತಪ್ಪುವುದು ಬೇಡ:


ಕೇಂದ್ರ ಸರಕಾರ ದೊಡ್ಡ ಪ್ರಾಜೆಕ್ಟ್ ಒಂದು ಜಿಲ್ಲೆಯ ಕೈತಪ್ಪುವುದು ಬೇಡ ಆದರೆ ಅದು ಸಹ್ಯಾದ್ರಿ ಕಾಲೇಜು ಆವರಣಕ್ಕೆ ಬೇಡವೇ ಬೇಡ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ನಗರದ ಹೊರವಲಯದಲ್ಲಿ ಎಲ್ಲಾದರೂ ಜಾಗ ಗುರುತಿಸಿ ಈ ಯೋಜನೆ ಜಾರಿಯಾಗಲಿ. ಖೇಲೋ ಇಂಡಿಯಾದ ಅನುದಾನದಿಂದ ಶಿವಮೊಗ್ಗವನ್ನು ಕ್ರೀಡಾ ಕ್ಷೇತ್ರದಲ್ಲೂ ಎತ್ತರಕ್ಕೆ ಕೊಡೊಯ್ಯುವ ಜರೂರತ್ತು ಇದೆ. ಆದರೆ ನಮ್ಮ ಮಕ್ಕಳಿಗೆ ಅನಾನುಕೂಲ ಮಾಡಿ ಸಹ್ಯಾದ್ರಿ ಕ್ರೀಡಾಂಗಣ ಮತ್ತು ಸುತ್ತಲ ಜಾಗ ಕಸಿದು ಕೊಳ್ಳುವುದು ಬೇಡ ಅಭಿಪ್ರಾಯ ಜನರಲ್ಲಿದೆ. ಈ ದಿಸೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕಿದೆ.

ನೆಹರೂ ಕ್ರೀಡಾಂಗಣದ ಕತೆ ಏನಾಗಿದೆ ?


ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ನೆಹರೂ ಕ್ರೀಡಾಂಗಣದಲ್ಲಿ ಸಿಂಥೆಟೆಕ್ ಟ್ರ್ಯಾಕ್ ಹೆಸರಿನಲ್ಲಿ ಮಾಡಿದ್ದ ಕಾಮಗಾರಿಯಿಂದ ಇಡೀ ಕ್ರೀಡಾಂಗಣಕ್ಕೇ ಅಂಗವೈಕಲ್ಯ ಪ್ರಾಪ್ತಿಯಾಗಿದೆ. ಈ ಟ್ರ್ಯಾಕ್ ಆದ ಮೇಲೆ ಎಷ್ಟು ಮಂದಿ ಅಥ್ಲೀಟುಗಳ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟ ಪ್ರತಿನಿಧಿಸಿದ್ದಾರೆ ಎಂಬುದು ಪ್ರಶ್ನಾರ್ಹವಾಗಿದೆ. ಕ್ರೀಡಾಂಗಣದ ಹೊರಾಂಗಣವೂ ಕ್ರೀಡೆಗಿಂತ ಅನ್ಯ ಉದ್ದೇಶಕ್ಕೇ ಹೆಚ್ಚು ಬಳಕೆಯಾಗುತ್ತಿದೆ. ಒಳಾಂಗಣದ ಉದ್ದೇಶವೂ ಸಾರ್ಥಕ್ಯ ಕಾಣುತ್ತಿಲ್ಲ. ಜಿಲ್ಲೆಯ ಪ್ರಮುಖ ಉತ್ಸವಗಳಿಗೂ ಸರಿಯಾದ ಜಾಗ ಇಲ್ಲವಾಗಿದೆ. ಇದೇ ಸಾಲಿಗೆ ಸಹ್ಯಾದ್ರಿ ಕ್ರೀಡಾಂಗಣವೂ ಸೇರುವುದು ಬೇಡ ಎಂಬುದು ಹೆಸರು ಹೇಳಲಿಚ್ಚಿಸದ ಕ್ರೀಡಾ ತರಬೇತದಾರರೊಬ್ಬರ ಅಭಿಪ್ರಾಯ.

Ad Widget

Related posts

ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಗ್ರಾಮಾಂತರದಲ್ಲಿ ಕೃಷಿ ಭೂಮಿ, ಶಿವಮೊಗ್ಗ ನಗರದಲ್ಲಿ ವಾಸದ ಮನೆಗಳಿಗೆ ನುಗ್ಗಿದ ನೀರು

Malenadu Mirror Desk

ಬಿಜೆಪಿ ಸಭೆಯೂ..ರಂಗಾದ ನಗರವೂ..

Malenadu Mirror Desk

ಶಿವಮೊಗ್ಗದಲ್ಲಿ 20 ಸಾವು, 705ಮಂದಿ ಡಿಸ್ಚಾರ್ಜ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.