ಹೊಸನಗರ ತಾಲೂಕಿನ ಹೊಸನಗರ ಹಾಗೂ ರಿಪ್ಪನ್ ಪೇಟೆಯ :ಎಪಿಎಂಸಿಯ ಭತ್ತ ಖರೀದಿ ಕೇಂದ್ರದಲ್ಲಿ ರೈತರಿಂದ ಕೇಂದ್ರ ಸರಕಾರವು ಕಳೆದ ಬಾರಿ ಖರೀದಿಸಿದ ಭತ್ತದ ಬೆಂಬಲ ಬೆಲೆÀ ೧೮೦೦ ರೂಪಾಯಿಗಳನ್ನು ಹಣವನ್ನು ಪಾವತಿ ಮಾಡಿದ್ದು ,ರಾಜ್ಯ ಸರಕಾರ ಪ್ರೋತ್ಸಾಹ ಧನ ೨೦೦ ರೂಪಾಯಿಗಳನ್ನು ನೀಡುತ್ತವೆ ಎಂದು ಘೋಷಣೆ ಮಾಡಿದ್ದರೂ ಈವರೆಗೂ ಪಾವತಿ ಮಾಡಿರುವುದಿಲ್ಲ . ಕೂಡಲೇ ಹಣ ಪಾವತಿ ಮಾಡುವಂತೆ ಹೊಸನಗರ ತಾಲೂಕ್ ಎಪಿಎಂಸಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಈಶ್ವರಪ್ಪ ಗೌಡ ಸರಕಾರಕ್ಕೆ ಒತ್ತಾಯಿಸಿದ್ದಾರೆ,
ಶನಿವಾರ ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸನಗರ ತಾಲೂಕಿನ ಹೊಸನಗರ ಹಾಗೂ ರಿಪ್ಪನ್‌ಪೇಟೆಯ ಭತ್ತ ಖರೀದಿ ೩೦೦ ಕ್ಕೂ ಅಧಿಕ ರೈತರುಗಳಿಂದ ೭೭೭೬ ಕ್ವಿಂಟಾಲ್ ಭತ್ತ ಖರೀಧಿ ಮಾಡಿದ್ದು . ಕೇಂದ್ರ ಸರಕಾರದ ಹಣ ಪಾವತಿಯಾಗಿದೆ ಆದರೆ ರಾಜ್ಯ ಸರಕಾರದ ಪ್ರೋತ್ಸಾಹ ಧನ ೨೦೦ ರೂಪಾಯಿ ಹಣವನ್ನು ಇದುವರೆಗೂ ಪಾವತಿಮಾಡಿರುವುದಿಲ್ಲ. ಈಗಾಲೇ ಭತ್ತ ಬೆಳೆೆದ ರೈತರುಗಳು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದು ಭತ್ತವನ್ನೇ ಬೆಳೆಯಬಾರದು ಎಂಬ ಮನೋಸ್ಥಿತಿಯಲ್ಲಿದ್ದಾರೆ. ಈ ಕೂಡಲೇ ರಾಜ್ಯ ಸರಕಾರ ಭತ್ತದ ಬೆಂಬಲ ಬೆಲೆಯ ಪ್ರೋತ್ಸಾಹ ಧನದ ಬಾಕಿ ಹಣವನ್ನು ಸಂದಾಯಮಾಡುವAತೆ ಒತ್ತಾಯಿಸಿದ್ದಾರೆ.
ಬೆಂಬಲ ಬೆಲೆಯ ಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹ: ಹೊಸನಗರ ತಾಲೂಕಿನಲ್ಲಿ ಈ ಬಾರಿ ರೈತರು ಸಾವಿರಾರು ಕ್ವಿಂಟಾಲ್ ಜೋಳವನ್ನು ಬೆಳೆದಿದ್ದು. ಈಗಾಲೇ ಜೋಳ ಕಟಾವು ಮುಗಿದಿದ್ದು ಈಗಿನ ಮಾರುಕಟ್ಟೆಯ ದರದಲ್ಲಿ ಜೋಳ ಮಾರಾಟಮಾಡಿದರೆ ಸಾಕಷ್ಟು ನಷ್ಟವನ್ನು ಅನುಭವಿಸ ಬೇಕಾಗುತ್ತದೆ.ಈಗಾಗಲೇ ತಾಲೂಕಿನ ರೈತರುಗಳು ಕೊರೊನಾ ಲಾಕ್ ಡೌನ್,ಅತೀವೃಷ್ಟಿ ಮತ್ತು ಶುಂಠಿ ಬೆಳೆಗೆ ಬಂದ ಕೊಳೆರೋಗದಿಂದ ತತ್ತರಿಸಿ ಹೋಗಿದ್ದಾರೆ. ಈ ಕೂಡಲೇ ರಾಜ್ಯ ಸರಕಾರ ಹೊಸನಗರ ತಾಲೂಕಿನ ಎಪಿಎಂಸಿ ಕೇಂದ್ರದಲ್ಲಿ ಬೆಂಬಲ ಬೆಲೆಯ ಜೋಳ ಖರೀದಿ ಕೇಂದ್ರವನ್ನು ತೆರೆವಂತೆ ಆಗ್ರಹಿಸಿದ್ದಾರೆ.
previous post


