Malenadu Mitra
ರಾಜ್ಯಶಿವಮೊಗ್ಗ

ಪದ್ಮಶ್ರೀ ಹೆಚ್.ಆರ್.ಕೇಶವಮೂರ್ತಿ ಇನ್ನಿಲ್ಲ

ಶಿವಮೊಗ್ಗ,ಡಿ.21: ಹಿರಿಯ ಗಮಕ ಕಲಾವಿದ ಪದ್ಮಶ್ರೀ ಪುರಸ್ಕೃತ  ಹೊಸಹಳ್ಳಿ ಆರ್. ಕೇಶವಮೂರ್ತಿ(88) ಅವರು ಬುಧವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಆರೋಗ್ಯವಂತರಾಗಿ ಚಟುವಟಿಕೆಯಿಂದಲೇ ಇದ್ದ ಅವರು ಮಧ್ಯಾಹ್ನ ಊಟ ಮುಗಿಸಿ ವಿಶ್ರಾಂತಿಗೆ ಹೋಗುವಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಹಠಾತ್ ಹೃದಯಘಾತವಾಗಿದ್ದ ಕಾರಣ ಕುಸಿದು ಬಿದ್ದಿದ್ದ ಅವರು ಮತ್ತೆ ಮೇಲೇಳಲಿಲ್ಲ. ಮೃತರು ಪತ್ನಿ ರಾಜೇಶ್ವರಿ ಮತ್ತು ಮಗಳ ಉಷಾ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಗಮಕ ಕಲೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಮತ್ತು ಆ ಕಲೆಯನ್ನು ಮತ್ತೂರು ಕೃಷ್ಣಮೂರ್ತಿ ಅವರೊಂದಿಗೆ ಸೇರಿ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಕೇಶವಮೂರ್ತಿ ಅವರದಾಗಿತ್ತು. ಹೊಸಹಳ್ಳಿಯಲ್ಲಿಯೇ ಹುಟ್ಟಿ ಬೆಳೆದಿದ್ದ ಅವರು ಗಮಕ ಕಲೆಯ ಮೂಲಕ ದೇಶಮಟ್ಟದಲ್ಲಿ ಹೆಸರು ಮಾಡಿದ್ದರು. ಇತ್ತೀಚೆಗಷ್ಟೆ ಹೊಸಹಳ್ಳಿ ಗ್ರಾಮಸ್ಥರು ಅವರಿಗೆ ನಾಗರೀಕ ಸನ್ಮಾನ ಮಾಡಿ ಗೌರವಿಸಿತ್ತು.  ಕಳೆದ ಮಾರ್ಚ್ ತಿಂಗಳಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.

ಪಪದ್ಮಶ್ರೀ ಪಡೆದ ಸಂದರ್ಭ
Ad Widget

Related posts

ಶರಾವತಿ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರವೇ ಟಾಸ್ಕ್ ಫೋರ್ಸ್ : ರೈತರೊಂದಿಗಿನ ಸಭೆಯಲ್ಲಿ ಸಿಎಸ್ ಭರವಸೆ

Malenadu Mirror Desk

ಹನಸವಾಡಿ ವಸತಿ ಶಾಲೆ 70 ಮಕ್ಕಳು ಅಸ್ವಸ್ಥ ಯೋಗಥಾನ್‌ನಲ್ಲಿ ನೀಡಿದ್ದ ಎಳ್ಳು-ಬೆಲ್ಲವೇ ಮಕ್ಕಳ ಆರೋಗ್ಯಕ್ಕೆ ಮುಳುವಾಯಿತೆ?

Malenadu Mirror Desk

ಮಲೆನಾಡಿನ ಕಾಲು ಸಂಕಕ್ಕೆ ಕೇಂದ್ರದಿಂದ ನೆರವು: ಸಂಸದ ರಾಘವೇಂದ್ರ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.