Malenadu Mitra
ರಾಜ್ಯಶಿವಮೊಗ್ಗ

ಶಿಕ್ಷಕರ ಸಾಹಿತ್ಯ ಪರಿಷತ್‌ನಿಂದ ಅರ್ಥಪೂರ್ಣ ಮಹಿಳಾದಿನಾಚರಣೆ, ಸಾಧಕಿಯರಿಗೆ ಗೌರವ ಸಮರ್ಪಣೆ

ಶಿವಮೊಗ್ಗ : ಸಾಧಕಿಯರು ಮಹಿಳೆಯರಿಗೆ ಸ್ಫೂರ್ತಿಯಾಗಬೇಕು. ನಮ್ಮ ಸುತ್ತಲಿನ ಸಾಧಕಿಯರ ಚರಿತ್ರೆಯನ್ನು ನಮ್ಮ ಪೀಳಿಗೆಗೆ ತಿಳಿಸಿದರೆ ಮಾತ್ರ ಮತ್ತಷ್ಟು ಪ್ರತಿಭೆಗಳು ಹುಟ್ಟುತ್ತವೆ ಎಂದು ಬೆಂಗಳೂರಿನ ಡಿ ದೇವರಾಜ್ ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕಿ ಪ್ರೊ. ಅನುರಾಧ ಪಾಟೀಲ್ ಅಭಿಪ್ರಾಯಪಟ್ಟರು.
ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ಹಾಗೂ ಶಿವಮೊಗ್ಗ ಜಿಲ್ಲಾ ಶಿಕ್ಷಕರ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶಿವಮೊಗ್ಗ ಸ್ಕೌಟ್‌ಭವನದಲ್ಲಿ ನಡೆದ “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಸನ್ಮಾನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀಯುತ ಶಿವಕುಮಾರ್ ಮಾತನಾಡಿ, ಶಿವಮೊಗ್ಗ ಕವಿಗಳ ತವರೂರು, ಸಾಹಿತಿಗಳಿಗೆ ಅನುಕೂಲಕರ ವಾತಾವರಣ ಇಲ್ಲಿ ಅಗಾಧವಾಗಿದೆ. ಎಲ್ಲಾ ಶಿಕ್ಷಕರನ್ನೂ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸುವ ಕಾರ್ಯ ನಡೆಯಬೇಕಿದೆ ಎಂದರು.
ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಅನಿತಾ ಕೃಷ್ಣ ಆಶಯದ ಭಾಷಣಮಾಡಿ, ಶಿಕ್ಷಕರಿಗೆ ಭಾಷಾ ಪ್ರೌಢಿಮೆ ಇರುತ್ತದೆ. ಅದನ್ನು ಸದುಪಯೋಪಡಿಸಿಕೊಳ್ಳಲು ಸಾಹಿತ್ಯ ರಚನೆಯಲ್ಲೂ ತೊಡಗಿಕೊಳ್ಳಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ರಾಜ್ಯ ಮಟ್ಟದ ಸ್ಪೂರ್ತಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನುರಾಧ ಪಾಟೀಲ್,ರಜಿಯಾ, ಸಾವಿತ್ರಿ, ಜ್ಯೋತಿ ಸೋಮಶೇಖರ್, ಸವಿತಾ, ಲತಾ ರಾಜ್‌ಕುಮಾರ್, ಬನಶಂಕರಿ, ಸುಮತಿ ಜಿ, ಡಾ. ತ್ರಿವೇಣಿ, ಡಾ. ಮಂಜುಳಾ ಎನ್ ಆರ್, ಸಿಸ್ಟರ್ ಎಲಿಸ್ ಲೂರ್ಗ್, ಮೇರಿ ಡಿ ಸೋಜ, ಚಂದ್ರಕಾಂತಿ, ಕೋಕಿಲಾ ಅವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಅರಳೀಹಳ್ಳಿ ಅಣ್ಣಪ್ಪ, ರಂಗನಾಥ ಕ ನಾ ದೇವರಹಳ್ಳಿ, ವಾಗೀಶ್ ಆರಾಧ್ಯ, ಹಸನ್ ಬೆಳ್ಳಿಗನೂಡು, ನಾಗರತ್ನ, ಸುಜಾತ ಬಸವರಾಜ್, ಸಾವಿತ್ರಮ್ಮ ಎಂ. ಜಿ. , ಉಮಾಪತಿ ಗಂಗಾರಾಮ್, ಬಸವನಗೌಡ, ಚನ್ನಬಸಪ್ಪ ನ್ಯಾಮತಿ ತಮ್ಮ ಕವನ ವಾಚಿಸಿ ಗಮನ ಸೆಳೆದರು. ಡಾ||ಗಾಯಿತ್ರಿ ಹಾಗೂ ಖಜಾನೆ ಇಲಾಖೆ ಉಪನಿರ್ದೇಶಕಿ ಸಾವಿತ್ರಿ ಇವರು ಭಾಗವಹಿಸಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಪರಿಷತ್ತಿನ ಗೌರವ ಸಲಹೆಗಾರರಾದ ಮಂಜುಳಾ ಎನ್.ಆರ್.ಪ್ರಾರ್ಥಿಸಿದರು. ಗೌರವಾಧ್ಯಕ್ಷ ನಾಗರಾಜ್ ಸ್ವಾಗತಿಸಿದರು. ಕೋರಿದರು. ಜ್ಯೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಅಪೇಕ್ಷಾ ಮಂಜುನಾಥ್ ಸರ್ವರಿಗೂ ವಂದಿಸಿ ಅಭಿನಂದಿಸಿದರು.

ನಮಗೆ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಹಿಳೆಯ ಏಳ್ಗೆಗೆ ಶ್ರಮಿಸುತ್ತಾ, ಅನೇಕ ಕಟ್ಟುಪಾಡುಗಳನ್ನು ತೊಲಗಿಸಲು ಶ್ರಮಿಸಿದ ಸಾವಿತ್ರಿಬಾಯಿ ಪುಲೆರವರು ಸ್ಪೂರ್ತಿಯಾಗಬೇಕು ಎಲ್ಲಾ ಮಹಿಳೆಯರಿಗೆ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಅವರ ತಾಯಿ ಈಗಿನ ಸಮಾಜಕ್ಕೆ ದೊಡ್ಡ ಸ್ಪೂರ್ತಿ

-ಎಂ. ಗುರುಮೂರ್ತಿ, ಡಿಎಸ್‌ಎಸ್ ರಾಜ್ಯ ಸಂಚಾಲಕ

Ad Widget

Related posts

ಯುವ ಮೋರ್ಚಾ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

Malenadu Mirror Desk

ಸೇವೆ ಮತ್ತು ಸಮರ್ಪಣಾ ಅಭಿಯಾನ

Malenadu Mirror Desk

ಸಾಂಕ್ರಾಮಿಕ ರೋಗ ನಿರ್ವಹಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು : ಡಿಡಿಪಿಐ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.