Malenadu Mitra
ರಾಜ್ಯಶಿವಮೊಗ್ಗ

ಐಲೆಟ್ಸ್ ಆಸ್ಪತ್ರೆಯಲ್ಲಿ ಬಂಜೆತನ ತಪಾಸಣಾ ಶಿಬಿರ

ಶಿವಮೊಗ್ಗ : ಐಲೆಟ್ಸ್ ಡಯಾಬಿಟಿಸ್ ಆಸ್ಪತ್ರೆ, ಬೆಂಗಳೂರಿನ ಗರ್ಭಗುಡಿ ಐವಿಎಫ್ ಸೆಂಟರ್, ಮಣಿಪಾಲ್ ಆಸ್ಪತ್ರೆಗಳ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಐಲೆಟ್ಸ್ ಆಸ್ಪತ್ರೆಯಲ್ಲಿ ಜು.೧೪ರಂದು ಬೆ.೧೦ರಿಂದ ಮಧ್ಯಾಹ್ನ ೨ರ ವರೆಗೆ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರೀತಮ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಬಂಜೆತನ ಎನ್ನುವುದು ಸಾಮಾನ್ಯವಾಗಿದೆ. ಏರುತ್ತಿದ್ದ ಜನಸಂಖ್ಯಾ ಸ್ಫೋಟ ಇಂದು ಇಳಿಮುಖವಾಗುತ್ತಿದೆ. ಶತಮಾನಕ್ಕೊಮ್ಮೆ ಪ್ರಕೃತಿಯೇ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಈಗಾಗಲೇ ಜಗತ್ತಿನ ಹಲವು ದೇಶಗಳಲ್ಲಿ ಜನಸಂಖ್ಯೆ ಇಳಿಮುಖವಾಗಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ ಎಂದರು.

ಬಂಜೆತನ ಎನ್ನುವುದು ಆಹಾರದ ಕ್ರಮ, ತಡವಾದ ಮದುವೆ, ಮದ್ಯ ವ್ಯಸನ ಹೀಗೆ ಹಲವು ಕಾರಣಗಳಿಂದ ಆಗುತ್ತಿದೆ. ರಾಜ್ಯದಲ್ಲಿಯೂ ಕೂಡ ಈ ಸಮಸ್ಯೆ ಹೆಚ್ಚಾಗಿರುವುದರಿಂದ ಐವಿಎಫ್‌ಸೆಂಟರ್‌ಗಳು ಹೆಚ್ಚಾಗುತ್ತಿವೆ. ಶಿವಮೊಗ್ಗದಲ್ಲಿಯೂ ಇಂತಹ ಆಸ್ಪತ್ರೆಯ ಅವಶ್ಯಕತೆಯನ್ನು ಮನಗಂಡು ಈಗಾಗಲೇ ಹೆಸರು ಮಾಡಿರುವ ಗರ್ಭಗುಡಿ ಐವಿಎಫ್ ಸೆಂಟರ್‌ನ ಸಹಯೋಗದೊಂದಿಗೆ ನಾವು ಈ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ಆಸ್ಪತ್ರೆ ತೆರೆಯಲು ಉದ್ದೇಶಿಸಲಾಗಿದೆ ಎಂದರು.

ಐವಿಎಫ್ ಸೆಂಟರ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಂಜಯ್ ಮಾತನಾಡಿ, ಜು.೧೪ರಂದು ನಡೆಯುವ ತಪಾಸಣಾ ಶಿಬಿರದಲ್ಲಿ ನೊಂದಣೀ ಶುಲ್ಕವನ್ನು ನಾಲ್ಕು ಸಾವಿರದಿಂದ ಎರಡು ಸಾವಿರಕ್ಕೆ ಇಳಿಸಲಾಗಿದೆ. ಶಿಬಿರದಲ್ಲಿ ವೈದ್ಯಕೀಯ ಸಲಹೆ, ಸಮಾಲೋಚನೆ ಮತ್ತು ವೀರ್‍ಯವಿಶ್ಲೇಷಣೆ ಮಾಡಲಾಗುವುದು ಎಂದ ಅವರು, ಸುಪ್ರಸಿದ್ಧ ಸಂತಾನೋತ್ಪತ್ತಿ ತಜ್ಞರಾದ ಡಾ. ಆಶಾ ಎಸ್. ವಿಜಯ್ ತಂಡದವರು ಆಗಮಿಸಲಿದ್ದಾರೆ ಎಂದರು.

ಶಿಬಿರದಲ್ಲಿ ಪರೀಕ್ಷೆಯ ನಂತರ ಅಗತ್ಯವಿರುವ ದಂಪತಿಗಳಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುವುದು. ಉಚಿತ ವಸತಿ ಸೌಲಭ್ಯ ಇರುತ್ತದೆ. ಇದಕ್ಕಾಗಿ ಇರುವ ವಿವಿಧ ಪ್ಯಾಕೇಜ್‌ಗಳಲ್ಲಿ ಭಾರೀ ರಿಯಾಯಿತಿ ನೀಡಲಾಗುತ್ತದೆ. ಇದರ ಸೌಲಭ್ಯವನ್ನು ಶಿವಮೊಗ್ಗ ಅಲ್ಲದೆ ಸುತ್ತಮುತ್ತಲ ಜಿಲ್ಲೆಯ ದಂಪತಿಗಳು ಪಡೆಯಬಹುದಾಗಿದೆ ಎಂದರು. ವಿನಯ್ ಜಾನ್, ಕುಮಾರ್ ಇದ್ದರು.

Ad Widget

Related posts

ಕುವೆಂಪು ವಿವಿ ಅಧ್ಯಾಪಕೇತರ ನೌಕರರ ಸಂಘದ ಪ್ರತಿಭಟನೆ, ಎಚ್‌ಆರ್‌ಎಂಎಸ್ ವೇತನ ವ್ಯವಸ್ಥೆ ರದ್ಧತಿ ಕೋರಿ ಮುಖ್ಯಮಂತ್ರಿಗಳಿಗೆ ಮನವಿ

Malenadu Mirror Desk

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ: ಸೇವೆ ಮತ್ತು ಸಮರ್ಪಣೆ ಅಭಿಯಾನ

Malenadu Mirror Desk

ಗ್ಯಾರಂಟಿ ಯೋಜನೆಗಳ ಬಗ್ಗೆ ತಪ್ಪು ಸಂದೇಶ: ಗೀತಾ ಶಿವರಾಜಕುಮಾರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.