Malenadu Mitra
Uncategorized

ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್ ಗೆ ವಿಮಾನ :ನೂತನ ಮಾರ್ಗದಲ್ಲಿ ಸ್ಪೈಸ್‌ ಜೆಟ್‌ ಸಂಚಾರ

ಶಿವಮೊಗ್ಗ: ನಗರದ ಸೋಗಾನೆ ವಿಮಾನ ನಿಲ್ದಾಣದಿಂದ ಶಿವಮೊಗ್ಗ–ಚೆನ್ನೈ ಮಾರ್ಗ ಸೇರಿದಂತೆ ಶಿವಮೊಗ್ಗದಿಂದ ಹೈದರಾಬಾದ್‌ ಮಾರ್ಗವಾಗಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಇಂದಿನಿಂದ ವಿಮಾನ ಹಾರಾಟ ಆರಂಭಿಸಿದೆ.
ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದಲ್ಲಿ ಗುರುವಾರ ಸ್ಪೈಸ್ ಜೆಟ್’ ವಿಮಾನಯಾನ ಸಂಸ್ಥೆಯಿಂದ  ಆರಂಭಿಸಿರುವ ವಿಮಾನಯಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದ್ರು.

ವಾರದಲ್ಲಿ ಆರು ದಿನ ಮಾತ್ರ ಸಂಚಾರ.

ಶಿವಮೊಗ್ಗದ ಸೋಗಾನೆ ಏರ್ಪೋರ್ಟ್ ನಿಂದ 3ನೇ ವಿಮಾನಯಾನ ಸಂಸ್ಥೆಯಾಗಿ ಸ್ಪೈಸ್ ಜೆಟ್ ಕಾರ್ಯಾಚರಣೆ ಆರಂಭಿಸಿದ್ದು, ಮಂಗಳವಾರ ಹೊರತುಪಡಿಸಿ, ಉಳಿದ ಆರು ದಿನ ಸೇವೆ ಒದಗಿಸಲಿದೆ.
ಸ್ಪೈಸ್‌ ಜೆಟ್‌ ವಿಮಾನವು ಪ್ರತಿದಿನ ಬೆಳಗ್ಗೆ 10.40ಕ್ಕೆ ಚೆನ್ನೈನಿಂದ ಹೊರಟು, ಮಧ್ಯಾಹ್ನ 12.10ಕ್ಕೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 12.35ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.05ಕ್ಕೆ ಹೈದರಾಬಾದ್‌ ತಲುಪಲಿದೆ. ಮಧ್ಯಾಹ್ನ 2.40ಕ್ಕೆ ಹೈದರಾಬಾದ್‌ನಿಂದ ಹೊರಟು ಸಂಜೆ 4 ಗಂಟೆಗೆ ಶಿವಮೊಗ್ಗ ತಲುಪಲಿದೆ. ಸಂಜೆ 4.25ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5.55ಕ್ಕೆ ಚೆನ್ನೈ ತಲುಪಲಿದೆ.

ಚೆನ್ನೈ ನಿಂದ ಆಗಮಿಸಿದ ವಿಮಾನಕ್ಕೆ ವಾಟರ್ ಸೆಲ್ಯೂಟ್.

Oplus_131072


ಇನ್ನು ಯಾವುದೇ ವಿಮಾನ ನಿಲ್ದಾಣದಲ್ಲಿ ಮೊದಲ ಹಾರಾಟ ನಡೆಸುವ ಅಥವಾ ಆಗಮಿಸುವ ವಿಮಾನಕ್ಕೆ ವಾಟರ್ ಸೆಲ್ಯೂಟ್ ನೀಡುವುದು ಸಂಪ್ರದಾಯ.‌ ಅದೇ ರೀತಿ ಇಂದು ಬೆಳಿಗ್ಗೆ ಚೆನ್ನೈ ನಿಂದ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ ಸ್ಪೈಸ್ ಜೆಟ್ ವಿಮಾನಕ್ಕೆ ಸಹ ವಾಟರ್ ಸೆಲ್ಯೂಟ್ ನೀಡುವ ಮೂಲಕ ಸ್ವಾಗತ ನೀಡಲಾಯ್ತು.

ನೂತನ ವಿಮಾನ‌ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸ್ಪೈಸ್ ಜೆಟ್’ ವಿಮಾನಯಾನ ಸಂಸ್ಥೆಯಿಂದ ಮಧ್ಯ ಕರ್ನಾಟಕ ಭಾಗಕ್ಕೆ ಅನುಕೂಲವಾಗುವಂತೆ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಶಿವಮೊಗ್ಗದಿಂದ ಈವರೆಗೂ ಬೆಂಗಳೂರು, ಹೈದರಾಬಾದ್‌, ತಿರುಪತಿ, ಗೋವಾಗೆ ವಿಮಾನಗಳು ಸಂಚರಿಸುತ್ತಿವೆ. ಈಗ ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆ ಸೇವೆ ಆರಂಭಿಸಿದ್ದು,ಇದರಿಂದ ಶಿವಮೊಗ್ಗ ಜನತೆಗೆ ಒಳಿತಾಗಲಿದೆ ಎಂದರು. ಪ್ರಸ್ತುತ ಶಿವಮೊಗ್ಗದ ವಾಯು ಮಾರ್ಗದಿಂದ ಪ್ರಮುಖ ಸ್ಥಳಗಳಿಗೆ ಸುಮಾರು 12 ಸುತ್ತುಗಳಲ್ಲಿ ವಿಮಾನ ಹಾರಾಟ ನಡೆಯುತ್ತಿದೆ ಎಂದ ಅವರು, ವಿಮಾನಗಳ ರಾತ್ರಿ ಸಂಚಾರ (ನೈಟ್‌ ಲ್ಯಾಂಡಿಂಗ್‌)ಕ್ಕೆ ಈಗಾಗಲೇ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಈ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸುವ ಭರವಸೆ ಇದೆ ಎಂದರು.

Ad Widget

Related posts

ಊರ ದೇವಿ ಮಾರಮ್ಮನ ಜಾತ್ರೆ,ಸರ್ವರ ಹಬ್ಬ,ವದಂತಿಗಳಿಗೆ ಮನ್ನಣೆ ಬೇಡ :ದೇವಸ್ಥಾನ ಸಮಿತಿ

Malenadu Mirror Desk

ವಿಮಾನ ನಿಲ್ದಾಣ ವಿನ್ಯಾಸ ಬದಲಾಯಿಸದಿದ್ದರೆ ನ್ಯಾಯಾಲಯದ ಮೊರೆ : ಕಾಂಗ್ರೆಸ್

Malenadu Mirror Desk

ನಾನು ಮಂತ್ರಿಯಾಗಿರುವವರೆಗೆ ಪುತ್ರನ ಸ್ಪರ್ಧೆ ಇಲ್ಲ :ಕೆ.ಎಸ್. ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.