Malenadu Mitra
ಶಿವಮೊಗ್ಗಸಾಗರ

ಸಾಗರದಲ್ಲಿ ಭೀಕರ ಅಪಘಾತ- ಇಬ್ಬರು ಸಾವು

ಶಿವಮೊಗ್ಗ : ಕಾರು ಮತ್ತು ಆಟೋ ಡಿಕ್ಕಿಯಾಗಿ, ಇಬ್ಬರು ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೊಮ್ಮತ್ತಿ ಬಳಿ ಆಟೋ & ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪಿದ್ದಾರೆ.

ಆಟೋ ಚಾಲಕ(40) ಹಾಗೂ ಮಾಲತಿ(35) ಮೃತ ದುರ್ದೈವಿಗಳು.

ಅಪಘಾತದ ರಭಸಕ್ಕೆ ಆಟೋ ಚಾಲಕ ರಾಘವೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಮಾಲತಿ ಅವರನ್ನ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಕೃತಿಕಾ, ರಾಮಪ್ಪ ಮತ್ತು ಸಾನ್ವಿಕ ಎಂಬುವರು ಗಾಯಗೊಂಡಿದ್ದಾರೆ.
ಗಾಯಾಳುಗಳು ಸಾಗರ ತಾಲೂಕಿನ ಕಾರೆಹೊಂಡ ಗ್ರಾಮದವರು ಎಂದು ತಿಳಿದುಬಂದಿದೆ.
ಇನ್ನು ಅಫಘಾತದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.
ಸಾಗರ ಗ್ರಾಮಾಂತರ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

Related posts

ಅಮೃತ್ ನೋನಿ ಸಂಸ್ಥೆಗೆ ಕೇಂದ್ರದ ಪುರಸ್ಕಾರ, ಪ್ಲಾಂಟ್ ಜೀನೋಮ್ ಸೇವಿಯರ್ ಪ್ರಶಸ್ತಿಗೆ ಬಾಜನರಾದ ಶ್ರೀನಿವಾಸ್ ಮೂರ್ತಿ

Malenadu Mirror Desk

ದುಡಿಮೆಗೆ ತಕ್ಕ ಪ್ರತಿಫಲ ದೊರಕಿಸಲು ಶಾಸನ ಸಭೆಯಲ್ಲಿ ಪ್ರಸ್ತಾವನೆ : ಶಾಸಕ ಹರತಾಳು ಹಾಲಪ್ಪ

Malenadu Mirror Desk

ನಾಪತ್ತೆಯಾಗಿದ್ದ ಗಿರಿರಾಜ್ ಸಿಕ್ಕಿದ್ದು ಹೇಗೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.