Malenadu Mitra
ಜಿಲ್ಲೆಶಿವಮೊಗ್ಗ

ಹಗಲಲ್ಲೇ ಆನೆ ಹಿಂಡು ಸಂಚಾರ : ಮತ್ತೆ ಕಾಡಾನೆ ಹಾವಳಿ ಪ್ರಾರಂಭ

ಶಿವಮೊಗ್ಗ : ತಾಲೂಕಿನ ವೀರಗಾರನ ಬೈರನಕೊಪ್ಪ ಬಳಿ ವಿದ್ಯುತ್ ಸ್ಪರ್ಶಿಸಿ, ಆನೆ ಮೃತಪಟ್ಟ ಬಳಿಕ ಕಾಡಾನೆ ಹಾವಳಿ ಕೊಂಚ ಕಡಿಮೆಯಾಯ್ತು ಎನ್ನುವ ಹೊತ್ತಿನಲ್ಲೇ ಕಾಡಾನೆ ಉಪಟಳ ಮತ್ತೆ ಪ್ರಾರಂಭವಾಗಿದೆ.
ಶೆಟ್ಟಿಹಳ್ಳಿ ಅಭ್ಯಯಾರಣ್ಯ ವ್ಯಾಪ್ತಿಯಲ್ಲಿ ಶಿವಮೊಗ್ಗ ತಾಲೂಕಿನ ಹಲವು ಗ್ರಾಮದಲ್ಲಿ ನಿನ್ನೆ ರಾತ್ರಿ ಕಾಡಾನೆಗಳು ದಾಳಿ ಮಾಡಿದ್ದು, ಬೆಳೆ ನಾಶ ಮಾಡಿವೆ.
ತಾಲೂಕಿನ ಆಡಿನಕೊಟ್ಟಿಗೆ, ಕೂಡಿ, ತಮ್ಮಡಿಹಳ್ಳಿ ಹಾಗೂ ಚೌಡಿಕಟ್ಟೆ ಭಾಗದಲ್ಲಿ ಕಾಡಾನೆಗಳು ದಾಳಿ ಮಾಡಿದ್ದು, ಅಡಿಕೆ ಗಿಡಗಳನ್ನು ಮುರಿದು, ಕಿತ್ತು ಬಿಸಾಡಿವೆ.


2-3 ಆನೆಗಳು ಗುಂಪಾಗಿದ್ದು, ಜೋಳ ಹಾಗೂ ಭತ್ತದ ಗದ್ದೆಯಲ್ಲಿ ಹಗಲು ವೇಳೆಯಲ್ಲಿ ಆನೆಗಳು ಓಡಾಡುವುದನ್ನು ರೈತರು ವಿಡಿಯೋ ಸಹ ಮಾಡಿದ್ದಾರೆ.
ಆಡಿನಕೊಟ್ಟಿಗೆಯ ಗಿರೀಶ್, ಹೊನ್ನಪ್ಪ, ಸಂತೋಷ್ ಎಂಬುವರ ಜಮೀನಿನಲ್ಲಿ ಆನೆಗಳು ದಾಳಿ ಮಾಡಿದ್ದು, ಬೆಳೆಯನ್ನು ಹಾಳು ಮಾಡಿವೆ.
ಇನ್ನು ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಬಗ್ಗೆ ರೈತರು, ಅರಣ್ಯ ಇಲಾಖೆಗೆ ದೂರು ಸಲ್ಲಿಸುತ್ತಿದ್ದರೂ, ಇಲಾಖೆಯು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ವಿದ್ಯುತ್ ಸ್ಪರ್ಶಿಸಿ ಆನೆಯೊಂದು ಮೃತಪಟ್ಟಿದ್ದರೂ, ಸಮಸ್ಯೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ರೈತರು ದೂರಿದ್ದಾರೆ.

Ad Widget

Related posts

ಕೋವಿಡ್ ಕೇರ್ ಸೆಂಟರ್ ಹೆಚ್ಚಿಸಿ: ಶ್ರೀಕಾಂತ್

Malenadu Mirror Desk

ತ್ಯಾಜ್ಯ ನಿರ್ಮೂಲನೆಗೆ ಪಾಕ ಶಾಲೆಯೇ ಪಾಠ ಶಾಲೆ ಆಗಲಿ

Malenadu Mirror Desk

ಹರತಾಳು ಕೆರೆ ಜೀರ್ಣೋದ್ದಾರಕ್ಕೆ ನಿರ್ಧಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.