ಶಿವಮೊಗ್ಗ: ಡಯೆಟ್ನ ಹಿರಿಯ ಉಪನ್ಯಾಸಕರಿಂದ ಪದವಿಪೂರ್ವ ಶಿಕ್ಷಣ ಇಲಾಖೆ ಮಾಹಿತಿ ಸಂಗ್ರಹಿಸಿ, ಪರಿಶೀಲನೆ ಮಾಡುವಂತೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಂಘದಿಂದ ಶುಕ್ರವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಉಪನ್ಯಾಸಕರುಗಳು, ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸಲ್ಲಿಸಿರುವ ಮನವಿಯಲ್ಲಿ ಅವೈಜ್ಞಾನಿಕವಾದ ಸುತ್ತೋಲೆಯನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಸಂಘಟನೆವತಿಯಿಂದ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಡಯೆಟ್ ಉಪನ್ಯಾಸಕರುಗಳು ಪದವಿಪೂರ್ವ ಉಪನ್ಯಾಸಕರ ಕಾರ್ಯಚಟುವಟಿಕೆ ಪರಿಶೀಲನೆ ಮಾಡುವುದು ಅವೈಜ್ಞಾನಿಕವಾಗಿದೆ. ಡಯೆಟ್ನಲ್ಲಿ ಪದವಿ, ಬಿಇಡಿ ಮತ್ತು ಕೆಇಎಸ್ ಮಾಡಿದ ಉಪನ್ಯಾಸಕರು ಇರುತ್ತಾರೆ. ಅವರ ಅಧ್ಯಯನ ಮತ್ತು ಪಾಠ ಪ್ರವಚನಗಳು ಪ್ರೌಢಶಿಕ್ಷಣ ಮಟ್ಟಕ್ಕೆ ಸೀಮಿತವಾಗಿರುತ್ತವೆ. ಸ್ನಾತಕೋತ್ತರ ಪದವಿ ನೆಟ್, ಸ್ಲೆಟ್, ಎಂಫಿಲ್ ಮತ್ತು ಪಿಹೆಚ್ಡಿ ಪದವಿ ಹೊಂದಿರುವುದಿಲ್ಲ. ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಗ್ರೂಪ್ ಎ ಮತ್ತು ಬಿ ವೃಂದದವರಾಗಿದು, ಕೆಳಗಿನ ಹಂತದವರು ಮೇಲಿನ ಹಂತದವರನ್ನು ಪರೀಕ್ಷೆಗೆ ಒಳಪಡಿಸುವುದು ನ್ಯಾಯ ಸಮ್ಮತವಾದ ತೀರ್ಮಾನವಲ್ಲ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.
ಪದವಿ ಪೂರ್ವ ಶಿಕ್ಷಣವು ಶಾಲಾ ಶಿಕ್ಷಣದ ವಿಸ್ತರಣೆ ಅಲ್ಲ. ಡಯೆಟ್ ಉಪನ್ಯಾಸಕರಿಗೆ ಪದವಿ ಪೂರ್ವ ಶಿಕ್ಷಣದ ಆಳ ಅರಿವು ಮತ್ತು ಅಧ್ಯಯನ ಇರುವುದಿಲ್ಲ. ಪ್ರೌಢಶಾಲೆಯಿಂದ ಬಡ್ತಿ ಹೊಂದಿ ಡಯೆಟ್ನ ಪ್ರಶಿಕ್ಷಕ ಹುದ್ದೆಗೆ ಬಂದಿರುತ್ತಾರೆ. ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಶಿಕ್ಷಕರಿಗೆ ಮಾತ್ರ ತರಬೇತಿ ನೀಡುವ ಅರ್ಹತೆ ಹೊಂದಿರುತ್ತಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯಗಳ ಬಗ್ಗೆ ಆಳವಾದ ಅರಿವು ಮತ್ತು ಪೂರ್ಣ ದೃಷ್ಟಿಕೋನವೇ ಅವರಿಗೆ ಇರುವುದಿಲ್ಲ. ಇಂತಹ ಉಪನ್ಯಾಸಕರು ಪದವಿಪೂರ್ವ ಶಿಕ್ಷಣ ಇಲಾಖೆಯ ಪಠ್ಯದ ಮೌಲ್ಯವನ್ನು ಪರಿಶೀಲನೆ ಮಾಡುವುದು ಸಾಧ್ಯವೇ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
ಕಡಿಮೆ ವಿದ್ಯಾರ್ಹತೆ ಹೊಂದಿರುವ ಮತ್ತು ಕಡಿಮೆ ಶ್ರೇಣಿಯ ಉಪನ್ಯಾಸಕರು ಮೇಲಿನ ಶ್ರೇಣಿಯವರನ್ನು ಮೌಲ್ಯ ಮಾಪನ ಮಾಡುವುದು ಸಮಂಜಸವಲ್ಲ. ಆದ್ದರಿಂದ ಎರಡೂ ಇಲಾಖೆಗಳು ಜಂಟಿಯಾಗಿ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಸಂಘಟನೆಗಳು ಆಗ್ರಹಿಸಿವೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ್ದ ನೂರಾರು ಉಪನ್ಯಾಸಕರುಗಳು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ವೇಳೆ ಶಿವಮೊಗ್ಗ ಜಿಲ್ಲಾ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಂಡರೀನಾಥ್, ಉಪಾಧ್ಯಕ್ಷ ವೈ.ಎಸ್. ನಾಯಕ್, ಖಜಾಂಚಿ ಅರುಣ್ ಕುಮಾರ್, ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ಪರಮೇಶ್ವರಪ್ಪ ಜಿ, ಅಧ್ಯಕ್ಷ ಯೋಗೀಶ್ ಎಸ್., ಉಪಾಧ್ಯಕ್ಷ ಮಂಜುನಾಥ ಬಣಕಾರ್, ಹಾಲಪ್ಪ ಎಂ ಸಂಕೂರು, ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಆರ್.ಕೆ, ಕಾರ್ಯದರ್ಶಿ ಮಹಮದ್ ನಜತ್ ಉಲ್ಲಾ, ರಾಜ್ಯ ಸಂಘದ ಪ್ರತಿನಿಧಿ ಜಿ.ಎಫ್,ಕುಟ್ರಿ, ಖಜಾಂಚಿ ದಿನಕರ್ ಹೆಚ್.ಎಂ,ಸಂಘಟನಾ ಕಾರ್ಯದರ್ಶಿ ಕುಬೇರ್ ನಾಯ್ಕ ಸೇರಿದಂತೆ ಜಿಲ್ಲೆಯ ಉಪನ್ಯಾಸಕ ವರ್ಗ ಹಾಜರಿದ್ದರು.