Malenadu Mitra
ರಾಜ್ಯಶಿವಮೊಗ್ಗ

ಬೆಡ್ ಬ್ಲಾಕ್ ದಂಧೆ ಹಿಂದೆ ಮುಸ್ಲಿಂ ಸಂಘಟನೆ: ಈಶ್ವರಪ್ಪ

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆ ಮುಸ್ಲಿಂ ಸಂಘಟನೆಯದು ಎಂಬ ಅನುಮಾನವಿದ್ದು, ಅದು ಎಂತಹ ಸಂಘಟನೆಯೇ ಆದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮ್ಲಜನಕ ಪೂರೈಕೆ, ವೆಂಟಿಲೇಟರ್ ಹಾಗೂ ವ್ಯಾಕ್ಸಿನ್ ವಿಚಾರದಲ್ಲಿ ರಾಜ್ಯ ಸರಕಾರ ಸಮರ್ಪಕ ಕೆಲಸ ಮಾಡುತ್ತಿದೆ. ಇದಕ್ಕೆ ಕೆಟ್ಟ ಹೆಸರು ತರಲು ದುಷ್ಟ ಶಕ್ತಿಗಳು ಯತ್ನಿಸುತ್ತಿದೆ ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಆಸ್ಪತ್ರೆ ಬೆಡ್ ಬ್ಲಾಕಿಂಗ್ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ ಹಾಗೂ ರವಿಸುಬ್ರಹ್ಮಣ್ಯ ಅವರು ಪತ್ತೆ ಹಚ್ಚಿದ್ದಾರೆ ಅವರನ್ನು ಅಭಿನಂದಿಸುತ್ತೇನೆ. ಪ್ರಕರಣದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರಪ್ಪ ಹೇಳಿದರು.

Ad Widget

Related posts

ಸಾಗರಕ್ಕೂ ಬಂತು ಆಣೆ ಪ್ರಮಾಣ ರಾಜಕಾರಣ , ಬೇಳೂರು ಸವಾಲು ಸ್ವೀಕರಿಸಿದ ಹಾಲಪ್ಪ, ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ದಿನ ನಿಗದಿ

Malenadu Mirror Desk

ಮಾನವ ಸಂಪನ್ಮೂಲ ಸರಬರಾಜು ಸಂಸ್ಥೆಗಳ ಆಡಳಿತ ವ್ಯವಸ್ಥೆ ಪರಿಶೀಲಿಸಿ : ಡಾ|| ಆರ್.ಸೆಲ್ವಮಣಿ

Malenadu Mirror Desk

ಬಿಜೆಪಿ ತೊರೆದ ಮತ್ತೊಬ್ಬ ಲಿಂಗಾಯತ ನಾಯಕ
ವಿಧಾನ ಪರಿಷತ್ ಹಾಗೂ ಬಿಜೆಪಿಗೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.