Malenadu Mitra
ರಾಜ್ಯಶಿವಮೊಗ್ಗ

ಹಣ ಕಟ್ಟದಿದ್ದರೆ ಹೊಸಬರಿಗೆ ಆಶ್ರಯಮನೆ

ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದಲ್ಲಿ 1836 ಜಿ ಪ್ಲಸ್ 2 ಮಾದರಿ ಮನೆಗಳ ನಿರ್ಮಾಣ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ವಂತಿಗೆ ಹಣವನ್ನು ಪಾವತಿ ಮಾಡಲು ಜುಲೈ ಅಂತ್ಯದವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯೋಜನೆಯಡಿ ಆಯ್ಕೆಯಾಗಿರುವ 2847 ಫಲಾನುಭವಿಗಳು ಇನ್ನೂ ವಂತಿಗೆ ಹಣವನ್ನು ಪಾವತಿಸಿರುವುದಿಲ್ಲ. ಜುಲೈ 1ರಿಂದ ಸೆಪ್ಟಂಬರ್ 30ರವರೆಗೆ ಆನ್‍ಲೈನ್‍ನಲ್ಲಿ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಈಗಾಗಲೇ ಆಯ್ಕೆಯಾಗಿದ್ದೂ, ವಂತಿಗೆ ಹಣವನ್ನು ನಿಗದಿತ ಅವಧಿಯ ಒಳಗಾಗಿ ಪಾವತಿಸದಿದ್ದರೆ ಅಂತಹ ಮನೆಗಳನ್ನು ಹೊಸ ಫಲಾನುಭವಿಗಳಿಗೆ ನೀಡಲಾಗುವುದು ಎಂದರು.

ಪ್ರಸ್ತುತ ಮನೆ ನಿರ್ಮಾಣ ಕಾರ್ಯಕ್ಕಾಗಿ ಟೆಂಡರ್ ಪ್ರಕ್ರಿಯೆ ಕಾರ್ಯ ನಡೆಯುತ್ತಿದೆ. ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಕಳುಹಿಸಿದ ತಕ್ಷಣ ನಿರ್ಮಾಣ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 50 ಸಾವಿರ ರೂ. ಹಾಗೂ ಇತರ ಸಾಮಾನ್ಯ ಫಲಾನುಭವಿಗಳಿಗೆ 80ಸಾವಿರ ರೂ. ನಿಗದಿಪಡಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1.5ಲಕ್ಷ ರೂ ಹಾಗೂ ವಾಜಪೇಯಿ ವಸತಿ ಯೋಜನೆಯಡಿ 1.2 ಲಕ್ಷ ರೂ. ಸಹಾಯಧನ ಒದಗಿಸಲಾಗುವುದು. ಇನ್ನುಳಿದಂತೆ ಬಾಕಿ ಮೊತ್ತಕ್ಕೆ ಬ್ಯಾಂಕ್ ಸಾಲ ಮತ್ತಿತರ ನೆರವು ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಶ್ರಯ ಯೋಜನೆಯಡಿ ಗೋವಿಂದಪುರದಲ್ಲಿ ಜಿ ಪ್ಲಸ್ 2 ಮಾದರಿಯಲ್ಲಿ 3ಸಾವಿರ ಮನೆ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೆ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಪ್ರಸ್ತುತ ಪ್ರತಿ ಮನೆ ನಿರ್ಮಾಣಕ್ಕೆ 7.70ಲಕ್ಷ ರೂ. ವೆಚ್ಚ ತಗಲುವ ಅಂದಾಜು ಮಾಡಲಾಗಿದೆ. ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪ ಎರಡು ಯೋಜನೆಗಳಲ್ಲಿ ಒಟ್ಟು 5838 ಫಲಾನುಭವಿಗಳು ಆಯ್ಕೆಯಾಗಿದ್ದು, ಇದರಲ್ಲಿ 2991 ಫಲಾನುಭವಿಗಳಿಂದ ವಂತಿಗೆ ಹಣವನ್ನು ಸ್ವೀಕರಿಸಲಾಗಿದೆ ಎಂದರು.

ಮೇಯರ್ ಸುನಿತಾ ಅಣ್ಣಪ್ಪ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಉಪಸ್ಥಿತರಿದ್ದರು.

Ad Widget

Related posts

ಶರಾವತಿ ಮುಳುಗಡೆ ಸಂತ್ರಸ್ಥರ ಬೃಹತ್ ಪ್ರತಿಭಟನೆ

Malenadu Mirror Desk

ಡಾ.ಶಿವರಾಮಕೃಷ್ಣ ವಿಚಾರದಲ್ಲಿ ಇದೆಂತಾ ಕುಚೋದ್ಯ ?

Malenadu Mirror Desk

ಬಡವರ ಸಂಗಾತಿ ಡಾ. ಈಶ್ವರಪ್ಪ ನಿಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.