Malenadu Mitra
ರಾಜ್ಯಶಿವಮೊಗ್ಗ

ಕುವೆಂಪು ವಿವಿ ಕುಲಸಚಿವ ಎತ್ತಂಗಡಿ, ಪಾಟೀಲ್ ಜಾಗಕ್ಕೆ ಅನುರಾಧ ವರ್ಗಾವಣೆ

ಶಿವಮೊಗ್ಗ, ಕುವೆಂಪು ವಿವಿ ಕುಲಸಚಿವ ಎಸ್.ಎಸ್.ಪಾಟೀಲ್ ಅವರನ್ನು ಮತ್ತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ಸರಕಾರ ಅವರ ಜಾಗಕ್ಕೆ ಶಿವಮೊಗ್ಗ ಎಡಿಸಿಯಾಗಿದ್ದ ಅನುರಾಧಾ ಅವರನ್ನು ವರ್ಗಾವಣೆಮಾಡಲಾಗಿದೆ.
ಕಳೆದ ಮೂರು ವರ್ಷಗಳಿಂದ ಶಿವಮೊಗ್ಗ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಅನುರಾಧಾ ಅವರು ಹಿರಿಯ ಶ್ರೇಣಿ ಕೆ.ಎ.ಎಸ್.ಅಧಿಕಾರಿಯಾಗಿದ್ದು, ಕುವೆಂಪು ವಿವಿ ಆಡಳಿತ ವಿಭಾಗದ ಕುಲಸಚಿವರಾಗಿ ವರ್ಗಾವಣೆಯಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನಾ ನಿರ್ದೇಶಕರಾಗಿದ್ದ ನಾಗೇಂದ್ರ ಹೊನ್ನಳ್ಳಿ ಅವರು ನೂತನ ಎಡಿಸಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಎರಡೂ ಆದೇಶಗಳನ್ನು ಸರಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಸೋಮವಾರ ಹೊರಡಿಸಿದ್ದಾರೆ.

ಕುವೆಂಪು ವಿವಿ ಕುಲಪತಿ ಪ್ರೊ.ವೀರಭದ್ರಪ್ಪ ಹಾಗೂ ಪ್ರೊ.ಎಸ್.ಎಸ್.ಪಾಟೀಲ್ ಅವರ ನಡುವೆ ಭಿನ್ನಾಭಿಪ್ರಾಯವಿದ್ದು ಇತ್ತಿಚೆಗಷ್ಟೆ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಒಂದೇ ದಿನದಲ್ಲಿ ಪಾಟೀಲ್ ಅವರು ತಮ್ಮ ವರ್ಗಾವಣೆ ಆದೇಶವನ್ನು ರದ್ದುಮಾಡಿಸಿಕೊಂಡು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Ad Widget

Related posts

ಶಿವಮೊಗ್ಗದಲ್ಲಿ 8ಸಾವು, 447 ಸೋಂಕು

Malenadu Mirror Desk

ವಾಣಿಜ್ಯ ವೃತ್ತಿ ಕ್ಷೇತ್ರದಲ್ಲಿ ಅಪಾರ ಅವಕಾಶ, ಡಿವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಸಿಎ ಕಾರ್ಯಾಗಾರ

Malenadu Mirror Desk

ಪತ್ರಕರ್ತರು ಸಮಾಜಮುಖಿ ಪಥದಲ್ಲಿ ಸಾಗಬೇಕು: ಗೋಪಾಲ್ ಯಡಗೆರೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.