Malenadu Mitra
ರಾಜ್ಯಶಿವಮೊಗ್ಗ

ಮಲೆನಾಡಿನಲ್ಲಿ ಸಂಭ್ರಮದ ಗೌರಿಹಬ್ಬ

ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಾಗಿರುವ ದೀವರ ಸಮುದಾಯದಲ್ಲಿ ಗೌರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮೂರು ಮತ್ತು ಐದು ದಿನಗಳ ಕಾಲ ಗೌರಿ ಹಬ್ಬ ಆಚರಿಸುವ ಸಂಭ್ರಮವೇ ಬೇರೆ.
ಊರೊಳಗಿನ ಕೆರೆ ಅಥವಾ ಬಾವಿಯ ಕಟ್ಟೆಯಲ್ಲಿ ಸುತ್ತಲ ಮನೆಗಳ ಹೆಣ್ಣುಮಕ್ಕಳು ನೆರೆದು ಗೌರಿ ತರುತ್ತಾರೆ. ತವರು ಮನೆಗೆ ಬರುವ ಹೆಣ್ಣುಮಕ್ಕಳು ಎರಡು ದಿನ ಮೊದಲೇ ಹಬ್ಬಕ್ಕೆ ಅಣಿಮಾಡುತ್ತಾರೆ. ಆಧುನಿಕ ಭರಾಟೆಯಲ್ಲಿ ಮೂಲ ಸಂಪ್ರದಾಯಗಳು ಮಾಯವಾಗುತ್ತಿದ್ದರೂ, ಮಲೆನಾಡಿನಲ್ಲಿ ಇನ್ನೂ ತಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳಲಾಗಿದೆ.

ಆಕರ್ಷಕ ಮಂಟಪ

ಗೌರಿ ಕೂರಿಸುವ ಮಂಟಪವನ್ನು ಬಾಳೆ ಮರದಿಂದ ಮಾಡಲಾಗುತ್ತದೆ. ಇದಕ್ಕೆ ಅರಣ್ಯದಲ್ಲಿ ಈ ಅವಧಿಯಲ್ಲಿ ಸಿಗುವ ಹೂವು, ಕಂಗನಹಳ್ಳಿ, ಕಾಕದಂಡೆ, ಮದ್ದರಸಿನ ಕಾಯಿ ಹೀಗೆ ಅನೇಕ ಕಾಡಿನ ಉತ್ಪನ್ನದಿಂದ ಮಂಟಪ ಅಲಂಕರಿಸುವ ಮಲೆನಾಡಿಗರು ತಮಗೆ ಕಾಡಿನೊಂದಿಗೆ ಇರುವ ಅವಿನಾಭಾವ ಸಂಬAಧವನ್ನು ಇಲ್ಲಿ ಕಾಪಿಟ್ಟುಕೊಂಡಿದ್ದಾರೆ.
ಪ್ರಕೃತಿ ಆರಾಧಕರಾದ ಮಲೆನಾಡಿನಲ್ಲಿ ಆಚರಿಸುವ ಎಲ್ಲ ಹಬ್ಬಗಳಿಗೂ ಭೂಮಿ ಮತ್ತು ಕಾಡಿನೊಂದಿಗೇ ಮಿಳಿತಗೊಂಡಿವೆ.
ಮೂರು ದಿನಗಳ ಕಾಲ ಗೌರಿ ಪೂಜಿಸುವ ಜನರು ಮೂರನೇ ದಿನ ರಾತ್ರಿ ಗೌರಿಯನ್ನು ಅದೇ ಕೆರೆ,ಬಾವಿಯ ನೀರಿನಲ್ಲಿ ಬೀಳ್ಕೊಟ್ಟು ಬರುತ್ತಾರೆ. ಕೊರೊನ ಹಾಗೂ ಬೆಲೆ ಏರಿಕೆಯ ಸಂಕಷ್ಟದಲ್ಲಿಯೂ ಗೌರಿ ಹಬ್ಬ ಸಂಭ್ರಮದಿAದಲೇ ಆರಂಭವಾಗಿದ್ದು, ಮೂರು ದಿನ ಆಚರಿಸುವರು ಶನಿವಾರ ತವರಿಗೆ ಬಂದ ಗೌರಮ್ಮನನ್ನು ಗಂಡನ ಮನೆಗೆ ಕಳಿಸಿಕೊಡಲಿದ್ದಾರೆ.
ಮಲೆನಾಡಿನ ಮನೆಗಳಲ್ಲಿ ಆಕರ್ಷಕ ಗೌರಿ ಮಂಟಪಕ್ಕೆ ವಿದ್ಯುದಲಂಕಾರ ಮಾಡಿ ಆಧುನಿಕ ಲೇಪ ಮಾಡಿರುವುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ.

Ad Widget

Related posts

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬ್ರಹತ್ ಮಾನವ ಸರಪಳಿ ರಚನೆ ಯಶಸ್ವಿ

Malenadu Mirror Desk

ಸೊರಬದಲ್ಲಿ ತಲೆ ಎತ್ತಲಿದೆ ಮಾದರಿ ಈಡಿಗ ಭವನ

Malenadu Mirror Desk

ಮಾಚಿದೇವ ಸರ್ವಕಾಲಕ್ಕೂ ಆದರ್ಶಪ್ರಾಯರು: ಸುಧಾಕರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.