Malenadu Mitra
ರಾಜ್ಯಶಿವಮೊಗ್ಗ

ಆವಿಷ್ಕಾರ, ಬೆಳವಣಿಗೆಗಳನ್ನು ಜನರ ಒಳಿತಿಗೆ ಬಳಸಬೇಕು: ಪ್ರಥಮ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಇಸ್ರೋದ ಮಾಜಿ ಅಧ್ಯಕ್ಷ ಆರ್. ಕಿರಣ್‌ಕುಮಾರ್

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರ, ಬೆಳವಣಿಗೆಗಳನ್ನು ಜನರ ಒಳಿತಿಗೆ ಬಳಸಬೇಕು. ಆಗ ಮಾತ್ರ ಜನರಲ್ಲಿ ಹೊಸ ಅರಿವು, ಜ್ಞಾನ ಮೂಡಲು ಸಾಧ್ಯ ಎಂದು ಇಸ್ರೋದ ಮಾಜಿ ಅಧ್ಯಕ್ಷ ಆರ್. ಕಿರಣ್‌ಕುಮಾರ್ ಹೇಳಿದರು.
ಶಿವಮೊಗ್ಗನಗರದಲ್ಲಿ ಬುಧವಾರ ಜರುಗಿದ ರಾಜ್ಯಮಟ್ಟದ ಒಂದು ದಿನದ ಪ್ರಥಮ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಮಾಜದ ಮತ್ತು ಸುತ್ತಮುತ್ತಲಿನ ಜನರ ಬದುಕು ಹಸನಾಗಬೇಕು. ಶಾಂತಿ- ಸೌಹೌರ್ದತೆ ನೆಲೆಸಬೇಕು. ಅನಾದಿ ಕಾಲದಿಂದಲೂ ಜೀವನ ಸುಧಾರಣೆಗೆ ಆಗಾಗ ಹೊಸ ವಿಧಾನಗಳನ್ನು ಮನುಷ್ಯ ಕಂಡುಹಿಡಿಯುತ್ತಲೇ ಬಂದಿದ್ದಾನೆ. ಅದರ ಮೂಲಕ ಉತ್ತಮ ಜೀವನಕ್ಕೆ ಅವಕಾಶ ಕಲ್ಪಿಸಿಕೊಂಡಿದ್ದಾನೆ ಮತ್ತು ಆಧುನೀಕರಣಕ್ಕೆ ಕಾಲಿಟ್ಟಿದ್ದಾನೆ. ಇದಕ್ಕೆಲ್ಲ ಆತನ ಜಾಣ್ಮೆ ಕಾರಣ. ಈಗಿನ ಹೊಸ ಆವಿಷ್ಕಾರ ಹೆಚ್ಚು ಪ್ರಮಾಣದಲ್ಲಿದೆ. ಹಳೆಯ ಆವಿಷ್ಕಾರಗಳೂ ಸಹ ಸಾಕಷ್ಟಿವೆಯಾದರೂ ಅವುಗಳನ್ನು ಬಳಸಿಕೊಂಡವರು ಕಡಿಮೆ ಎಂದರು.
ಹಿಂದಿನ ಆವಿಷ್ಕಾರಗಳ ಲಾಭ ಪಡೆದವರು ತಮ್ಮ ವೈಯಕ್ತಿಕ ಲಾಭಕ್ಕೆ ಹೆಚ್ಚು ಬಳಸಿಕೊಂಡರು. ಜನಸಾಮಾನ್ಯರಿಗೆ ಹೆಚ್ಚು ಲಾಭ ದಕ್ಕಲಿಲ್ಲ. ಕೆಲವು ಕಂಪನಿಗಳು ಮತ್ತು ಫಾರ್‍ಮಸ್ಯುಟಿಕಲ್‌ಗಳು ಈ ಜ್ಞಾನವನ್ನು ಬಳಸಿಕೊಂಡವು. ಕೆಲವು ವಿದೆಶೀಯರೂ ಸಹ ಇದನ್ನು ತಮ್ಮ ದೇಶಕ್ಕೆ ಸಾಗಿಸಿದರು. ಇದರಿಂದ ಜನರಲ್ಲಿ ಅರಿವು ಮೂಡಲಿಲ್ಲ ಎಂದರು.
ಆವಿಷ್ಕಾರದಿಂದ ಅಥವಾ ವಿಜ್ಞಾನದಿಂದ ಜಾಗೃತಿ ಮೂಡಬೇಕು. ಮೂಢನಂಬಿಕೆ ತೊಲಗಬೇಕು. ನಮ್ಮ ಜನರಲ್ಲಿ ಅಸಾಧಾರಣ ಬುದ್ಧಿಮತ್ತೆ ಇದೆ. ಅದಕ್ಕೆ ತಕ್ಕ ಜ್ಞಾನವನ್ನು ನಾವು ಕೊಟ್ಟಾಗ ಇನ್ನಷ್ಟು ಹೊಸತನಕ್ಕೆ ಇದು ದಾರಿಮಾಡುತ್ತದೆ. ತಾನು ಕಲಿಯುವುದಲ್ಲದೆ ಕಲಿಸಲು ಇದು ನೆರವಾಗುತ್ತದೆ. ಜನರಿಗೆ ತಪ್ಪು ಕ್ರಿಯೆಗಳ ಬಗ್ಗೆ ಹೆಚ್ಚು ಮಾಹಿತಿ ಕೊಡುವ ಅವಶ್ಯಕತೆ ಇದೆ. ಇಂದು ಇದು ಹೆಚ್ಚುತ್ತಿದೆ. ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದರು.

ವಿಜ್ಞಾನ ಗ್ರಾ ಮ
ಪ್ರಾಸ್ತಾವಿಕ ಮಾತನಾಡಿದ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್, ಈಗಾಗಲೇ ವಿಜ್ಞಾನ ಗ್ರಾ ಮ ವನ್ನು ಬೆಂಗಳೂರು ಸಮೀಪ ನಿರ್‍ಮಿಸಲಾಗುತ್ತಿದೆ. ತಮ್ಮ ಪರಿಷತ್ ಒಂದೇ ವರ್ಷದಲ್ಲಿ ಇಂತಹ ಕೆಲಸ ಕೈಗೊಂಡಿದೆ. ೬ ತಿಂಗಳಿನಿಂದ ವಿಜ್ಞಾನ ಗ್ರಾಮದ ಕೆಲಸ ನಡೆಯುತ್ತಿದೆ. ಇದಕ್ಕೆ ಈಗ ಅಲ್ಲಿನವರೊಬ್ಬರು ೧೦ ಎಕರೆ ಜಮೀನು ನೀಡಿದ್ದಾರೆ. ಸರಕಾರದಿಂದ ನಾವು ೧೦ ಎಕ್ರೆ ಜಮೀನು ಕೇಳಿದ್ದೇವೆ. ಸುಮಾರು ೫೧ ಕೋಟಿ ರೂ. ವೆಚ್ಚದ ಪ್ರಾಜೆಕ್ಟ್ ರೂಪಿಸಲಾಗಿದೆ. ಇದರಲ್ಲಿ ಸರಕಾರ ಶೇ.೨೦ರಷ್ಟನ್ನು ಭರಿಸಲಿದೆ. ಉಳಿದಿದ್ದನ್ನು ಜನರಿಂದ ವಂತಿಗೆ ಪಡೆಯಲಾಗುವುದು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರಕ್ಕೆ ಸಂಬಂಧಿಸಿ ಜಾಗ ಮೀಸಲಿಡಲಾಗಿದ್ದು, ಪ್ರಸ್ತಾವನೆ ಹಂತದಲ್ಲಿದೆ.ಡಾ. ಹುಲಿಕಲ್ ನಟರಾಜ್ ಅವರು ಯೋಜಿಸಿರುವ ವಿಜ್ಞಾನ ಗ್ರಾಮವನ್ನು ಶಿವಮೊಗ್ಗ ಜಿಲ್ಲೆಯಲ್ಲಿಯೇ ನಿರ್ಮಿಸುವ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರ್ಕಾರದೊಂದಿಗೆ ಸಮಾಲೋಚಿಸಲಾಗುವುದು ಎಂದು ಹೇಳಿದರು.

ಆಶಯ ಭಾಷಣವನ್ನು ಪರಿಷತ್ ಉಪಾಧ್ಯಕ್ಷ ಡಾ|| ಟಿ. ಟಿ. ಆಂಜಿನಪ್ಪ ನೆರವೇರಿಸಿದರು. ಸಮಾರಂಭದಲ್ಲಿ ವಿಶ್ವಾಸದ ಹೆಜ್ಜೆಗಳು ಮತ್ತು ಬ್ಯೂಟಿಫುಲ್ ಲೈಫ್ ಎಂಬ ಎರಡು ಕೃತಿಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ವಿಜ್ಞಾನಿ ಸಿರಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಆನ್‌ಲೈನ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಪರಿಷತ್‌ನ ೨೦೨೨ರ ದಿನಚರಿ ಬಿಡುಗಡೆಗೊಳಿಸಲಾಯಿತು. ವಿಜ್ಞಾನ ಗ್ರಾಮ ಯೋಜನೆಯ ಕುರಿತ ವಿಡಿಯೋ ಪ್ರದರ್ಶಿಸಲಾಯಿತು. ಪರಿಷತ್‌ನ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಯಿತು.
ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಸಾಹಿತಿ ಕುಂ. ವೀರಭದ್ರಪ್ಪ, ವೈಜ್ಞಾನಿಕ ಪರಿಷತ್‌ನ ಪದಾಧಿಕಾರಿಗಳು, ಜಿಲ್ಲಾ ಸಮಿತಿ ಸದಸ್ಯರು ಮತ್ತು ಪ್ರಶಸ್ತಿ ಪುರಸ್ಕೃತರು ಹಾಜರಿದ್ದರು.
ಪರಿಷತ್ ಜಿಲ್ಲಾಧ್ಯಕ್ಷ ರಾಜೇಂದ್ರ ಆವಿನಹಳ್ಳಿ ಸ್ವಾಗತಿಸಿದರು.


ಆಧುನಿಕ ಪ್ರಪಂಚವುವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗ ಎನಿಸಿದೆ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಜ್ಞಾನ ಹಾಗೂ ಮಾಹಿತಿಅತ್ಯಂತ ಅವಶ್ಯಕವೆನಿಸಿವೆ. ವೈಜ್ಞಾನಿಕ, ತಂತ್ರಜ್ಞಾನವೂ ಅದ್ಭುತ ಪ್ರಗತಿ ಸಾಧಿಸಿ ಮನು?ಶಕ್ತಿಶಾಲಿಯಾಗುವಂತೆಮಾಡಿದೆ.ಮಾನವ ಕಾಲದೊಡನೆ ಸ್ಪರ್ಧಿಸುತ್ತಾ ಅಂತರೀಕ್ಷವನ್ನೇ ಜಯಿಸಿದ್ದಾನೆ. ಭೂಮಿಯಾಚೆಗೂ ತಲುಪಿದ್ದಾನೆ. ಈವರೆಗೆ ಅಜ್ಞಾತವಾಗಿದ್ದ ಎ? ವಿ?ಯಗಳನ್ನು ಮತ್ತು ಪ್ರಕೃತಿಯಲ್ಲಿ ಅಡಗಿರಬಹುದಾದ ಸಮಸ್ತ ರಹಸ್ಯಗಳನ್ನು ಅನಾವರಣಗೊಳಿಸಲು ಶಕ್ತನಾಗಿದ್ದಾನೆ.
ಡಾ. ಎ.ಎಸ್.ಕಿರಣ್ ಕುಮಾರ್
ರಾಜ್ಯಮಟ್ಟದ ಪ್ರಥಮ “ವ್ಶೆಜ್ಞಾನಿಕ ಸಮ್ಮೇಳನ-2021ರ ಸರ್ವಾಧ್ಯಕ್ಷ, ವಿಜ್ಞಾನಿ

ಸಮಾಜದಲ್ಲಿ ಅನೇಕ ಮೂಢನಂಬಿಕೆಗೆ ಬಲಿಯಾಗಿ ಜೀವನವನ್ನೇ ಹಾಳುಮಾಡಿಕೊಳ್ಳುವುದನ್ನು ನಾವೆಲ್ಲರೂ ನೋಡಿದ್ದೇವೆ. ಸಮಾಜದ ಪ್ರತಿಯೊಬ್ಬರಲ್ಲಿಯೂ ವೈಜ್ಞಾನಿಕ ಜಾಗೃತಿ ಮೂಡಿಸಬೇಕಿರುವುದು ಇಂದಿನ ಅವಶ್ಯಕವಾಗಿದೆ. ಆರೋಗ್ಯ ತುರ್ತು ಸಂದರ್ಭಗಳಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಕರೊನಾ ಸೇರಿದಂತೆ ಯಾವುದೇ ರೋಗಗಳ ಬಗ್ಗೆ ಭಯ, ತಪ್ಪು ಕಲ್ಪನೆ ಬೇಡ. ವೈಜ್ಞಾನಿಕ ಜಾಗೃತಿ ಮುಖ್ಯ.
ಡಾ. ಟಿ.ಎಚ್.ಆಂಜಿನಪ್ಪ, ವೈದ್ಯ

Ad Widget

Related posts

ಶಿವಮೊಗ್ಗದಲ್ಲಿ 343 ಮಂದಿಗೆ ಸೋಂಕು

Malenadu Mirror Desk

ಬೆಳಗಲು ಗ್ರಾಮದ ಕತ್ತಲ ಬದುಕು,ಸರಕಾರಿ ಸೌಲಭ್ಯಗಳೇ ಕಾಣದ ಕುಗ್ರಾಮ

Malenadu Mirror Desk

ವಿಕೃತಿ ತೊಡೆಯಲು ಸಾಮಾಜಿಕರಣ ಅಗತ್ಯ : ಡಿಡಿಪಿಐ ಬಸವರಾಜಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.