Malenadu Mitra
ರಾಜ್ಯಶಿವಮೊಗ್ಗ

ದೇವಸ್ಥಾನ ಸ್ವತಂತ್ರವಾದರೆ ಡಿಕೆಶಿಗೆ ಏಕೆ ಉರಿ: ಈಶ್ವರಪ್ಪ ಕಿಡಿ

ದೇವಸ್ಥಾನಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಡುತ್ತಾರೆ ಅಂತ ಹೇಳುವ ಮೊದಲು ಡಿಕೆಶಿ ಅವರು ಜಿಲ್ಲಾಧಿಕಾರಿ ಅವರಿಗೆ ಅರ್ಜಿ ಹಾಕಿಕೊಂಡು ಮುಸಲ್ಮಾನ ಅಥವಾ ಕ್ರಿಶ್ಚಿಯನ್ ಆಗಿ ಮತಾಂತರವಾದರೆ ರಗಳೆ ಇಲ್ಲ. ದೇವಸ್ಥಾನಗಳಿಗೆ ಸ್ವತಂತ್ರ ಕೊಟ್ಟರೆ ಇವರಿಗೆ ಏಕೆ ಉರಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ ಚರ್ಚ್‌ಗಳಿಗೆ, ಮಸೀದಿಗಳಿಗೆ ಸ್ವಾತಂತ್ರ್ಯ ಇದೆ. ದೇವಸ್ಥಾನಗಳಿಗೆ ಸ್ವಾತಂತ್ರ್ಯ ಕೊಟ್ಟ ತಕ್ಷಣ ಡಿಕೆಶಿ ಏಕೆ ಬೇಸರ ಮಾಡಿಕೊಂಡರು ಎಂಬುದು ನನಗೆ ಗೊತ್ತಿಲ್ಲ. ಗೋಹತ್ಯೆ ನಿಷೇಧ, ಮತಾಂತರ ವಿಷಯ ಬಂದಾಗ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಡಿಕೆಶಿ ಅವರು ಕೇವಲ ಮುಸಲ್ಮಾನರನ್ನು, ಕ್ರಿಶ್ಚಿಯನ್ನರನ್ನ ತೃಪ್ತಿಪಡಿಸುವ ಕೆಲಸ ಮಾಡ್ತಿದ್ದಾರೆ. ಹಿಂದುಗಳಿಗೆ ತೊಂದರೆ ಆದ್ರೂ ಪರವಾಗಿಲ್ಲ ಅಂತ ಯೋಚನೆ ಮಾಡ್ತಿದ್ದಾರೆ ಎಂದರು.
ಡಿಕೆಶಿ ಮತಾಂತರವಾಗಲಿ
ಗೋ ಹತ್ಯೆ ಮಾಡುವ ವ್ಯಕ್ತಿಗಳ ಬಗ್ಗೆ ಕ್ರಮ ಕೈಗೊಳ್ಳಿ ಅಂದ್ರೂ ಕೈಗೊಳ್ಳಲಿಲ್ಲ. ಗೋಹತ್ಯೆ ನಿಲ್ಲಿಸುವವರನ್ನು ಜೈಲಿಗೆ ಕಳುಹಿಸಿದರು. ಡಿಕೆಶಿ ಅವರು ಇಲ್ಲಿಯೂ ರಾಜಕಾರಣ ತಂದ್ರೆ ನಾನು ಏನು ಮಾಡೋಕೆ ಆಗಲ್ಲ. ಅವರಿಗೆ ದೇವಸ್ಥಾನ ಅಭಿವೃದ್ಧಿ ಆಗುವುದು ಬೇಕಿಲ್ಲ. ಗೋಹತ್ಯೆ ಮಾಡಿದರೆ, ನಮ್ಮ ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಅವರಿಗೆ ನೋವು ಇಲ್ಲ. ಈಗಾಗಿ ಡಿಕೆಶಿ ಮುಸಲ್ಮಾನ್ ಇಲ್ಲವೇ, ಕ್ರಿಶ್ಚಿಯನ್ ಆಗುವುದು ಒಳ್ಳೆಯದು.
ದೇವಸ್ಥಾನಕ್ಕೆ ಕೈ ಹಾಕಿದರೆ ಸರ್ಕಾರ ಭಸ್ಮವಾಗುತ್ತೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಕಾಂಗ್ರೆಸ್ ಭಸ್ಮವಾಗಿದೆಯಾ, ಬಿಜೆಪಿ ಭಸ್ಮವಾಗಿದೆಯಾ? ಗೋಹತ್ಯೆ ಮಾಡಿದ್ದಕೋಸ್ಕರ ಕಾಂಗ್ರೆಸ್ ಭಸ್ಮ ಆಗಿದ್ದು. ಮತಾಂತರ ನಿಷೇಧ ಕಾಯ್ದೆ ವಿರೋಧ ಮಾಡ್ತಿದ್ದಾರೆ. ಅದಕ್ಕೆ ಭಸ್ಮ ಆಗುತ್ತಿದೆ. ದೇಶ ಭಕ್ತರು, ಧರ್ಮ ಭಕ್ತರು ಬಿಜೆಪಿಯಲ್ಲಿ ಇರುತ್ತಾರೆ. ರಾಷ್ಟ್ರ ಭಕ್ತಿ, ಧರ್ಮ ಭಕ್ತಿಯನ್ನು ನಮಗೆ ಆರ್‌ಎಸ್‌ಎಸ್ ಹೇಳಿಕೊಟ್ಟಿದೆ. ನಾವೆಲ್ಲರೂ ಆರ್‌ಎಸ್‌ಎಸ್ ಬೆಂಬಲಿಗರೇ ಎಂದರು.
ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿ, ಚುನಾವಣೆ ಅಂದ ಮೇಲೆ ಕಾಂಗ್ರೆಸ್‌ನವರು ಬದುಕಿರಬೇಕಲ್ಲ. ನಮಗೆ ವಿರೋಧ ಪಕ್ಷವೇ ಇಲ್ಲ ಅಂತಾದ್ರೆ ಕಥೆ ಏನು. ಡೆಮಾಕ್ರಸಿಯಲ್ಲಿ ವಿರೋಧ ಪಕ್ಷ ಇರಬೇಕು. ಹಾಗಾಗಿ ಕಾಂಗ್ರೆಸ್ ಸ್ವಲ್ಪ ಸ್ಥಾನ ತೆಗೆದುಕೊಳ್ಳುವುದಕ್ಕೆ ಜನ ಬಿಟ್ಟಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ಎಲ್ಲಿ ನಾವು ಎಡವಿದ್ದೇನೆ ಎಂದು ಗಮನಿಸಿ, ತಿದ್ದಿಕೊಳ್ಳುವ ಪ್ರಯತ್ನ ಮಾಡ್ತೀವಿ ಎಂದರು.

Ad Widget

Related posts

ಶಿವಮೊಗ್ಗದಲ್ಲಿ ಅಪರಾಧ ಹೆಚ್ಚಳ : ಪ್ರಸನ್ನಕುಮಾರ್ ಕಳವಳ

Malenadu Mirror Desk

ಆನೆ ದಾಳಿಗೆ ಕೃಷಿ ಕಾರ್ಮಿಕ ಬಲಿ

Malenadu Mirror Desk

ಬೆಂಗಳೂರಲ್ಲಿ ಜಲಪಾತ ಸೃಷ್ಟಿ, ಎಲ್ಲಿ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.