Malenadu Mitra
ರಾಜ್ಯಸೊರಬ

ಜೆ.ಪಿ.ನಾರಾಯಣ ಸ್ವಾಮಿ ಕೊಡುಗೆ ಅನನ್ಯ: ಜಿ.ಡಿ.ನಾಯ್ಕ್

ಶಿಕ್ಷಣ ಸೇರಿದಂತೆ ಸಾಮಾಜಿಕ ಕ್ಷೇತ್ರಕ್ಕೆ ಜೆ.ಪಿ.ನಾರಾಯಣ ಸ್ವಾಮಿ ಅವರ ಕೊಡುಗೆ ಅನನ್ಯವಾದುದ್ದೆಂದು ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಜಿ.ಡಿ.ನಾಯ್ಕ್ ಹೇಳಿದರು.
ಸೊರಬ ಪಟ್ಟಣದ ಹೊಸಪೇಟೆ ಹಕ್ಕಲು ಬಡಾವಣೆಯ ರಾಜೀವ ನಗರದ ವೇಣುಗೋಪಾಲ್ ಅವರ ಮನೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ದಿ. ಜೆ.ಪಿ.ನಾರಾಯಣ ಸ್ವಾಮಿ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಡಿಗ ಸಮಾಜದಲ್ಲಿ ಜನಿಸಿ ಬದುಕನ್ನು ಸಾರ್ಥಕವಾಗಿಸಿಕೊಳ್ಳುವ ಜತೆಗೆ ಬಡವರ, ವೃದ್ಧರ ಏಳಿಗೆ ಸೇರಿದಂತೆ ಸಮಾಜವನ್ನು ಮೇಲೆತ್ತುವ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದರು.
ಗೌರವಾಧ್ಯಕ್ಷ ಡಾ.ಹೆಚ್.ಇ.ಜ್ಞಾನೇಶ್ ಮಾತನಾಡಿ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಿದವರು ದಾನದ ಗುಣ ಬೆಳೆಸಿಕೊಂಡಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ. ಜಾತಿ ಸಂಘಟನೆಗಳು ಕುದುರೆ ಓಟದಲ್ಲಿ ತೊಡಗಿದ್ದು, ಈಡಿಗ ಸಮಾಜದವರು ಸಂಘಟನೆಗೆ ಒತ್ತು ನೀಡುವ ಮೂಲಕ ಸಮಾಜ ಪರಿವರ್ತನೆ ಮಾಡಬೇಕು. ಜೆಪಿಎನ್ ಅವರ ಮನೋಶಕ್ತಿಗೆ ರೂಪ ಕೊಡುವ ನಿಟ್ಟಿನಲ್ಲಿ ಸಂಘಟನೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳೋಣ ಎಂದರು.
ಗೌರಾವಾಧ್ಯಕ್ಷ ವೈ.ಜಿ.ಪುಟ್ಟಸ್ವಾಮಿ ಮಾತನಾಡಿ, ಈಡಿಗ ಜನಾಂಗಕ್ಕೆ ಜೆ.ಪಿ ನಾರಾಯಣ ಸ್ವಾಮಿ ಅವರ ಕೊಡುಗೆ ಮಹತ್ವದ್ದು. ಅವರ ಚಿಂತನೆ, ಪರಿಶ್ರಮದಿಂದ ಈಡಿಗ ಸಮಾಜ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಸಂಚಾಲಕ ಎಸ್.ಎಂ.ನೀಲೇಶ್ ನಿರೂಪಿಸಿ, ಮಂಜಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ವೇಣುಗೋಪಾಲ್, ನಾಗರಾಜ್ ಬಿ.ನಾಯ್ಕ್, ಶಸಿ ರಾಯನ್, ಯಶೋಧರ್, ಸಚಿನ್, ಶಿವಪ್ಪ, ಭೀಮಪ್ಪ ಇತರರಿದ್ದರು.

Ad Widget

Related posts

ಈಶ್ವರಪ್ಪ ವಿರುದ್ಧದ ಆಯನೂರು ಹೇಳಿಕೆಯ ಹಿಂದಿನ ಮರ್ಮ ಏನು ?,
ಸೌಹಾರ್ದ ಶಿವಮೊಗ್ಗ ಘೋಷಣೆಯೊಂದಿಗೆ ಕಣಕ್ಕಿಳಿಯಲು ಮಂಜಣ್ಣ ತಾಲೀಮು

Malenadu Mirror Desk

ವೀರಶೈವ, ಲಿಂಗಾಯತ ಒಂದೇ: ಡಾ.ಮಹಾಂತ ಸ್ವಾಮೀಜಿ

Malenadu Mirror Desk

ಸಿ.ಎಂ.ತವರಿನ ನಾಲ್ವರಲ್ಲಿ ಬ್ರಿಟನ್ ವೈರಸ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.