Malenadu Mitra
ರಾಜ್ಯಶಿವಮೊಗ್ಗ

ಶಿವಮೊಗ್ಗದ ಬೇಡಿಕೆ ಪೂರೈಸಲಿರುವ ವಿಐಎಸ್‍ಎಲ್ ಆಮ್ಲಜನಕ ಘಟಕ

ಕೋವಿಡ್ ದೆಸೆಯಿಂದ ಐತಿಹಾಸಿಕ ವಿಐಎಸ್‍ಎಲ್ ಕಾರ್ಖಾನೆಗೆ ಮರುಜೀವ ಬಂದಿದ್ದು, ಮುಂದಿನ ವಾರದಲ್ಲಿ ಮೆಡಿಕಲ್ ಆಮ್ಲಜನಕ ಉತ್ಪಾದನೆ ಆರಂಭವಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಅವರು, ಕೋವಿಡ್ ಸಾಂಕ್ರಾಮಿಕ ರೋಗ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಮುಖ್ಯಮಂತ್ರಿ ಆದೇಶದಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಾವೆಲ್ಲ ಕುರಿತು ಮಾತನಾಡಿದ್ದೇವೆ. ಅಲ್ಲಿನ ತಯಾರಿಯನ್ನು ಗಮನಿಸಿದರೆ ಭಾನುವಾರದ ಹೊತ್ತಿಗೆ ಉತ್ಪಾದನೆ ಆರಂಭವಾಗಬಹುದು. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಗುರುವಾರ ಸ್ಥಳ ಪರಿಶೀಲನೆ ಮಾಡುವರು ಎಂದು ತಿಳಿಸಿದ್ದಾರೆ.
ಯಂತ್ರಗಳನ್ನು ದುರಸ್ತಿ ಮಾಡಲಾಗಿದೆ ಈ ಯೂನಿಟ್ ನಡೆಸಲು ತಿಂಗಳಿಗೆ 10-12 ಲಕ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ದಿನಕ್ಕೆ ಸುಮಾರು 2 ಲಕ್ಷ ರೂ. ವಿದ್ಯುತ್ ಬಿಲ್ ಬರಬಹುದು. ಎಂ.ಎಸ್.ಪಿ.ಎಲ್‍ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅವರು ಆಕ್ಷಿಜನ್ ಉತ್ಪಾದನೆ ಮಾಡಿದರೆ, ವಿಐಎಸ್‍ಎಲ್ ಕಾರ್ಮಿಕರು ಸಿಲೆಂಡರ್ ಭರ್ತಿಮಾಡಲಿದ್ದಾರೆ. ಈ ಯೋಜನೆಯಿಂದ ಶಿವಮೊಗ್ಗ ಜಿಲ್ಲೆಯ ಮೆಡಿಕಲ್ ಆಮ್ಲಜನಕದ ಕೊರತೆ ನೀಗಿಸಬಹುದು ಮತ್ತು ನೆರೆಯ ಜಿಲ್ಲೆಗಳಿಗೆ ಸಹಕರಿಸಬಹುದು ಎಂದು ಸಂಸದ ರಾಘವೇಂದ್ರ ಅವರು ತಿಳಿಸಿದ್ದಾರೆ.

Ad Widget

Related posts

ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಗೃಹಸಚಿವ ಜ್ಞಾನೇಂದ್ರ

Malenadu Mirror Desk

ಕಿಮ್ಮನೆ ಜಯರಾಂ ಮನೆ ಮೇಲೆ ಐಟಿ ದಾಳಿ

Malenadu Mirror Desk

ಮಲೆನಾಡಲ್ಲಿ ಮಳೆಯ ಸಂಭ್ರಮ, ಜೋಗದಲ್ಲಿ ಜಲ ಚಿತ್ತಾರ, ಪ್ರವಾಸಿಗರ ಹರ್ಷ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.