Malenadu Mitra
ರಾಜ್ಯಶಿವಮೊಗ್ಗ

ಸಾಗುವಾನಿ ಸೈಜುಗಳ ಅಕ್ರಮ ಸಾಗಾಟ: ಪ್ರಕರಣ ದಾಖಲು

ಶಿವಮೊಗ್ಗನಗರದ ಕಲ್ಲಪ್ಪನ ಕೇರಿಯಲ್ಲಿ ಅಕ್ರಮವಾಗಿ ಸಾಗುವಾನಿ ಸೈಜುಗಳನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳನ್ನು ಶಂಕರ ವಲಯ ಸಿಬ್ಬಂದಿಗಳು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಆಯನೂರಿನ ಲಾಡಿರ್‍ಕೇರಿ ನಿವಾಸಿ ಸಯ್ಯದ್ ಉಸ್ಮಾನ್, ಆಯನೂರಿನ ಸಾಲುಮನೆ ನಿವಾಸಿ ಸುಬೇರ್ ಉಲ್ಲಾ ಹಾಗೂ ಜಿಯಾಉಲ್ಲಾ ಮತ್ತು ಇತರರ ಪೈಕಿ ಆರೋಪಿ ಜಿಯಾಉಲ್ಲಾ ಮತ್ತು ಇತರರು ತಪ್ಪಿಸಿಕೊಂಡಿರುತ್ತಾರೆ. ಆದರೆ ಮೊದಲ ಇಬ್ಬರು ಆರೋಪಿಗಳನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ಆರೋಪಿಗಳಿಂದ ಸಾಗುವನಿ ಸೈಜು ಮತ್ತು ಮಾರುತಿ ಓಮಿನಿಯನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆ ವೇಳೆ ವಲಯ ಅರಣ್ಯಾಧಿಕಾರಿಗಳಾದ ಗಿರೀಶ್ ಸಂಕ್ರಿ, ಉಪ ವಲಯ ಅರಣ್ಯಾಧಿಕಾರಿಗಳಾದ ಅಬ್ದುಲ್ ಮಜೀದ್, ಉಮೇಶ್ ನಾಯ್ಕ್, ಅರಣ್ಯ ರಕ್ಷಕರಾದ ಅವಿನಾಶ್.ಜಿ, ಆನಂದ.ಜೆ, ನೀಲಮ್ಮ ದಾದ್ಮಿ, ಚೆಲುವಮಣಿ, ಮಂಜುನಾಥ.ಬಿ.ಬಿ ಇದ್ದರು.

Ad Widget

Related posts

ಭವಿಷ್ಯವಿಲ್ಲದಲ್ಲಿ ಸುರಿಸಿದ ಬೆವರಿಗೆ ಬೆಲೆ ಇಲ್ಲ, ಎರಡು ದಶಕಗಳ ಜೆಡಿಎಸ್ ಬಾಂಧವ್ಯ ಕಡಿದುಕೊಳ್ಳುವೆ: ಎಂ.ಶ್ರೀಕಾಂತ್

Malenadu Mirror Desk

ಮಾಚಿದೇವ ಸರ್ವಕಾಲಕ್ಕೂ ಆದರ್ಶಪ್ರಾಯರು: ಸುಧಾಕರ್

Malenadu Mirror Desk

ಜನರ ಹಣ ಜನರಿಗೆ ಕೊಡುವ ಸಿದ್ಧಾಂತ ಕಾಂಗ್ರೆಸ್‌ದು, ಭರವಸೆ ಮಾತ್ರವಲ್ಲ, ಗ್ಯಾರಂಟಿ ಕಾರ್ಡ್ ಕೊಡುತ್ತೇವೆ: ಸುರ್ಜೇವಾಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.