Malenadu Mitra
ರಾಜ್ಯಶಿವಮೊಗ್ಗ

ಕಾರು ಅಪಘಾತ: ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕರಿಗೆ ಗಾಯ

ಜೆಡಿಎಸ್ ನಾಯಕಿ ಹಾಗೂ ಮಾಜಿ ಶಾಸಕಿ ಶಾರದಾಪೂರ್ಯನಾಯ್ಕ ಕಾರು ಅಪಘಾತವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಕ್ಷದ ಸಭೆಗೆ ಬೆಂಗಳೂರಿಗೆ ಹೋಗುತ್ತಿದ್ದ ಶಾರದಮ್ಮ ಅವರ ಕಾರು ನೆಲಮಂಗಲ ಬಳಿ ಪಲ್ಟಿಯಾಯಿತು. ಅಪಘಾತದಲ್ಲಿ ಅವರ ಎಡಗಾಲು ಮೂಳೆ ಮುರಿತ ಕಂಡುಬಂದಿದ್ದು, ಅವರನ್ನು ಬೆಂಗಳೂರಿನ ರಾಂಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ರವಿ ಅವರಿಗೂ ಗಾಯಗಳಾಗಿದ್ದು, ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಗೆ ಹಾಜರಾಗಲು ಶಾರದಮ್ಮ ಅವರು ಶಿವಮೊಗ್ಗದಿಂದ ಹೊರಟಿದ್ದರು ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿರುವ ಕಾರು
Ad Widget

Related posts

ಸಿದ್ದರಾಮಯ್ಯ ಹಗಲುಗನಸು ಬಿಡಲಿ

Malenadu Mirror Desk

ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಮೀಸಲಿಡಬೇಕು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Malenadu Mirror Desk

ವಿಕ್ರಂಗೌಡ ಎನ್ಕೌಂಟರ್‌ ಹಿಂದಿನ ಸತ್ಯ-ಮಿಥ್ಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.