Malenadu Mitra
ರಾಜ್ಯಶಿಕಾರಿಪುರ

ಸರಕಾರ ಒಪಿಎಸ್ ಜಾರಿ ಮಾಡುವ ಮಾತು ತಪ್ಪಬಾರದು: ಆಯನೂರು ಮಂಜುನಾಥ್ ಹೇಳಿಕೆ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಒಂಟಿ ಪೋಷಕರಾಗಿರುವ ಸರ್ಕಾರಿ ಪುರುಷ ನೌಕರರಿಗೂ ಶಿಶುಪಾಲನಾ ರಜೆ ಮಂಜೂರು ಮಾಡಿರುವುದು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನೆಯ ಉದ್ದೇಶದಿಂದ ತಮ್ಮ ಇಡೀ ಸೇವಾಅವಧಿಯಲ್ಲಿ ಗರಿಷ್ಠ ೬ ತಿಂಗಳವರೆಗೆ ಅಂದರೆ ೧೮೦ ದಿನಗಳ ಕಾಲ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲಾಗಿತ್ತು. ಆದರೆ ಈ ಆದೇಶ ಪುರುಷರಿಗೆ ಅನ್ವಯಿಸುತ್ತಿರಲಿಲ್ಲ. ಅಕಸ್ಮಾತ್ ತಾಯಿ ಮರಣ ಹೊಂದಿದಲ್ಲಿ ಅದರ ಜವಾಬ್ದಾರಿಯನ್ನು ತಂದೆಯೇ ಹೊರಬೇಕಿತ್ತು.ಶಿಶುಪಾಲನಾ ರಜೆ ಎನ್ನುವುದು ಲಿಂಗಭೇದ ಇಲ್ಲದೆ ಇರಬೇಕು. ಇಂತಹ ಸಂದರ್ಭದಲ್ಲಿ ಪುರುಷರಿಗೂ ಸಹ ರಜೆ ಸೌಲಭ್ಯ ವಿಸ್ತರಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಸರಿಯಾಗಿದೆ ಎಂದರು.

ಹಾಗೆಯೇ ಸರ್ಕಾರಿ ನೌಕರರ ಕೆಲವು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಹೊಂದಿದೆ. ಆದರೆ ಪಿಂಚಣಿಗೆ ಸಂಬಂಧಿಸಿದಂತೆ ಎನ್‌ಪಿಎಸ್ ಮತ್ತು ಒಪಿಎಸ್ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಭರವಸೆಯೂ ಈಡೇರಿಲ್ಲ. ಸರ್ಕಾರವೇನೋ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸುವ ಬಗ್ಗೆ ಭರವಸೆ ನೀಡಿದೆ. ಇದು ಕೇವಲ ಭರವಸೆ ಆಗಬಾರದು. ಹೊಸ ಸರ್ಕಾರ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ವಿದ್ಯುತ್ ದರ ಏರಿಕೆ ಮಾಡಿರುವುದರಿಂದ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಲಿದೆ. ಅಲ್ಲದೆ ಉತ್ತರಕರ್ನಟಕದ ಹಲವು ಭಾಗಗಳಲ್ಲಿ ಕೆಲವು ಸಣ್ಣ ಕೈಗಾರಿಕಾ ಉದ್ಯಮಿಗಳು ಈ ರಾಜ್ಯವನ್ನೇ ಬಿಟ್ಟುಹೋಗುವುದಾಗಿ ಹೇಳಿದ್ದಾರೆ. ಇದರಿಂದ ಕನ್ನಡಿಗರು ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ. ಆದ್ದರಿಂದ ರಾಜ್ಯ ಸರ್ಕಾರ ಈಗ ಏರಿಸಿರುವ ವಿದ್ಯುತ್ ದರವನ್ನು ಮರುಪರಿಶೀಲನೆಗೆ ಒಳಪಡಿಸಬೇಕು. ಕೈಗಾರಿಕಾಸ್ನೇಹಿ ದರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಶಾಸಕರೆಂಬ ಎಚ್ಚರವಿರಲಿ
ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದು ಸರಿ ಇದೆ. ಆದರೆ ಪ್ರತಿಭಟನೆಯ ದಾರಿ ಸರಿ ಇರಲಿಲ್ಲ. ಚನ್ನಬಸಪ್ಪನವರು ತಾವು ಶಾಸಕರು ಎಂಬುದನ್ನೇ ಮರೆತಂತಿದೆ. ಕಾರ್ಯಕರ್ತರನ್ನು ಪ್ರಚೋದಿಸಿ ಕಲ್ಲು ತೂರಾಟಕ್ಕೆ ಕಾರಣರಾಗಿದ್ದಾರೆ. ಶಾಸನ ಮಾಡುವ ಅವರೇ ಶಾಂತಿ ಭಂಗಗೊಳಿಸುತ್ತಾರೆಂದರೆ ಅದು ತಪ್ಪಾಗುತ್ತದೆ. ಬಹುಶಃ ಪ್ರತಿಭಟನೆಯಂತಹ ಸಮಯದಲ್ಲಿ ಇಂತಹಕಲ್ಲು ತೂರಾಟದಂತಹ ಪ್ರಕರಣ ನಡೆದಿರುವುದು ಇದೇ ಮೊದಲು ಎಂದು ಆಯನೂರು ಮಂಜುನಾಥ್ ಹೇಳಿದರು.
ಈ ಗಲಾಟೆ ಮುಂದೆ ಶಿವಮೊಗ್ಗ ಶಾಂತಿಯುತವಾಗಿ ಇರುತ್ತದೆಯೇ ಎಂಬ ಬಗ್ಗೆಯೇ ಅನುಮಾನ ಬರುತ್ತದೆ. ಆದ್ದರಿಂದ ಇನ್ನಾದರೂ ಚನ್ನಬಸಪ್ಪ ಅವರು ತಾವು ಶಾಸಕರೆಂಬ ಎಚ್ಚರಿಕೆ ಇರಲಿ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಿ ಎಂದು ಕಿವಿಮಾತು ಹೇಳಿದರು.

Ad Widget

Related posts

ಮೆಗ್ಗಾನ್‌ನಲ್ಲಿ ಮುರುಘಾ ಶರಣರಿಗೆ ಯಶಸ್ವಿ ಆಂಜಿಯೋಗ್ರಾಂ

Malenadu Mirror Desk

ಈಶ್ವರಪ್ಪರ ರಾಜಕಾರಣಕ್ಕೆ ಹಿಂದೂಗಳ ಬಲಿಯಾಗಬೇಕಾ : ಕಾಂಗ್ರೆಸ್ ವಕ್ತಾರ ಕೆಬಿಪಿ ಪ್ರಶ್ನೆ

Malenadu Mirror Desk

ನ. 4,5 ರಂದು ವಿಐಎಸ್ ಎಲ್ ಶತಮಾನೋತ್ಸವ ಮೈಸೂರು ಯುವರಾಜ, ನಿರ್ಮಲಾ ಸೀತಾರಾಮನ್, ಜ್ಯೋತಿರಾದಿತ್ಯ ಸಿಂಧ್ಯಾ, ಸಿದ್ದರಾಮಯ್ಯ, ಡಿಕೆಶಿ, ಮಠಾಧೀಶರ ಆಗಮನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.