Malenadu Mitra
ಜಿಲ್ಲೆಶಿವಮೊಗ್ಗ

ಶಿವಮೊಗ್ಗ ಬಿಜೆಪಿಗೆ ನೂತನ ಸಾರಥಿ : ಎನ್.ಕೆ.ಜಗದೀಶ್ ಆಯ್ಕೆ.

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸಂಬಂಧ ರಾಜ್ಯದಲ್ಲಿ ಚರ್ಚೆ ಕಾವೇರಿರುವುದರ ನಡುವೆಯೇ ಬಿಜೆಪಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರು ಸಹ ಬದಲಾಗಿದ್ದಾರೆ.
ಈ ಹಿಂದೆ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಎನ್.ಕೆ.ಜಗದೀಶ್ ಅವರು ಶಿವಮೊಗ್ಗ ಜಿಲ್ಲಾ ಬಿಜೆಪಿಯ ನೂತನ‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಜಿಲ್ಲಾಧ್ಯಕ್ಷರಾಗಿ ಎನ್.ಕೆ.ಜಗದೀಶ್ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ರುದ್ರೇಗೌಡ್ರು ಆಯ್ಕೆಯಾಗಿದ್ದಾರೆ.
ರಾಜ್ಯ ಚುನಾವಣಾಧಿಕಾರಿ ಆದೇಶದ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ಸಿ.ಆರ್.ಪ್ರೇಮ್ ಕುಮಾರ್ ಅವರು, ಚುನಾವಣಾ ಪ್ರಕ್ರಿಯೆ ನಡೆಸಿ ಜಿಲ್ಲಾ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರತಿನಿಧಿಯ ಆಯ್ಕೆಯನ್ನು ಘೋಷಿಸಿದ್ದಾರೆ.

ಅದೇ ರೀತಿ ಜಿಲ್ಲಾ ಬಿಜೆಪಿಯ 10 ಮಂಡಲಗಳ ಅಧ್ಯಕ್ಷರನ್ನು ಸಹ ನೇಮಕ ಮಾಡಲಾಗಿದೆ. ತೀರ್ಥಹಳ್ಳಿಗೆ ನವೀನ್ ಹೆದ್ದೂರು, ಹೊಸನಗರ – ಕೆ.ವಿ.ಸುಬ್ರಹ್ಮಣ್ಯ,  ಸಾಗರ ನಗರ – ಕೆ.ಆರ್.ಗಣೇಶ್ ಪ್ರಸಾದ್, ಸಾಗರ ಗ್ರಾಮಾಂತರ- ದೇವೇದ್ರ ಯಲಕುಂದ್ಲಿ,  ಸೊರಬ- ಪ್ರಕಾಶ್ ಅಗಸನಹಳ್ಳಿ, ಶಿಕಾರಿಪುರ -ಹನುಮಂತಪ್ಪ.ಎಸ್, ಭದ್ರಾವತಿ – ಜಿ.ಧರ್ಮಪ್ರಸಾದ್, ಹೊಳೆಹೊನ್ನೂರು – ಮಲ್ಲೇಶಪ್ಪ.ಎಂ., ಶಿವಮೊಗ್ಗ ಗ್ರಾಮಾಂತರ ಎಸ್.ಈ.ಸುರೇಶ್ ಹಾಗೂ ಶಿವಮೊಗ್ಗ ನಗರಕ್ಕೆ ಡಿ.ಮೋಹನ್ ರೆಡ್ಡಿ ಅವರನ್ನು ನೇಮಕ ಮಾಡಿ, ಅದೇಶಿಸಲಾಗಿದೆ.

Ad Widget

Related posts

ಬಸ್ಸು -ಕಾರು ಡಿಕ್ಕಿ ಇಬ್ಬರು ಗಂಭೀರ

Malenadu Mirror Desk

ನಿವೃತ್ತ ಅಧಿಕಾರಿಗಳಿಗೆ ಅವಕಾಶ:ಯುವ ವಿದ್ಯಾವಂತರಿಗೆ ಅನ್ಯಾಯ

Malenadu Mirror Desk

ಪ್ರೊ. ಸಿ. ಎಂ. ತ್ಯಾಗರಾಜ್ ಅಧಿಕಾರ ಸ್ವೀಕಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.