Malenadu Mitra
ರಾಜ್ಯಶಿವಮೊಗ್ಗ

ಬೇಲಿಕಳ್ಳಿ ಬೀಜ ತಿಂದ 12 ಮಕ್ಕಳು ಅಸ್ವಸ್ಥ

ಶಿವಮೊಗ್ಗ: ಬೇಲಿ ಕಳ್ಳಿ ಬೀಜ ತಿಂದು ೧೨ ಮಕ್ಕಳು ಅಸ್ವಸ್ಥಗೊಂಡು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದು, ಸೂಕ್ತ ಚಿಕಿತ್ಸೆ ಬಳಿಕ ಮಕ್ಕಳು ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಭದ್ರಾವತಿ ತಾಲೂಕು ಸಂಜೀವಿನಿ ನಗರದ ೮ ಹಾಗೂ ಶಿಕಾರಿಪುರ ತಾಲೂಕು ಹೆರಿಗೆ ಗ್ರಾಮಗದ ೪ ಮಕ್ಕಳು ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳು ತಮ್ಮ ಊರಿನಲ್ಲಿ ಬೇಲಿಕಳ್ಳಿ ಗಿಡದ(ಜತ್ರೋಪ) ಬೀಜವನ್ನು ಸೇವಿಸಿದ್ದರಿಂದ ವಾಂತಿ ಬೇದಿ ಮಾಡಿಕೊಂಡು ಬಳಲಿದ್ದರು. ತಕ್ಷಣ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲರೂ ೮ ರಿಂದ ೧೨ ವರ್ಷದ ಮಕ್ಕಳಾಗಿದ್ದಾರೆ. ಚಿಕಿತ್ಸೆ ಬಳಿಕ ಎಲ್ಲರೂ ಚೇತರಿಸಿಕೊಂಡಿದ್ದಾರೆ.

ಬೇರೆ ಬೇರೆ ಭಾಗದ ಮಕ್ಕಳು ಒಂದೇ ಕಾರಣಕ್ಕೆ ಅಸ್ಪಸ್ಥರಾಗಿದ್ದಾರೆ. ಮಕ್ಕಳು ಅರಿವಿಲ್ಲದೆ ಕಳ್ಳಿ ಬೇಲಿ ಗಿಡದ ಬೀಜ ಸೇವಿಸಿದ್ದಾರೆ. ಈ ಬೀಜದಲ್ಲಿ ವಿಷಕಾರಿ ಅಂಶವಿದ್ದು, ವಾಂತಿಬೇಧಿ ಜತೆ ಉಸಿರಾಟದ ತೊಂದರೆಯೂ ಆಗಬಹುದು. ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವುನೋವುಗಳು ಸಂಭವಿಸಿದ ಉದಾಹರಣೆಗಳೂ ಇವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಮಕ್ಕಳು ಚೇತರಿಸಿಕೊಂಡಿದ್ದಾರೆ.
ಡಾ, ತಿಮ್ಮಪ್ಪ , ವೈದ್ಯಕೀಯ ಅಧೀಕ್ಷಕರು
ಮೆಗ್ಗಾನ್‌ ಬೋಧನಾ ಆಸ್ಪತ್ರೆ

Ad Widget

Related posts

ಜೆಡಿಎಸ್‌ಗೆ ಮತ್ತೆ ಎಂ. ಶ್ರೀಕಾಂತ್ ಅಧ್ಯಕ್ಷ

Malenadu Mirror Desk

ಕಾಂಗ್ರೆಸ್‌ನತ್ತ ಆಯನೂರು ಮಂಜುನಾಥ್ ?, ಈಶ್ವರಪ್ಪ ಎದುರು ಸ್ಪರ್ಧೆ

Malenadu Mirror Desk

ಮೇ 15 ರಿಂದ ಭದ್ರಾ ನಾಲೆಗಳಿಗೆ ನೀರು ಬಂದ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.