Malenadu Mitra
ಜಿಲ್ಲೆಭಧ್ರಾವತಿಶಿವಮೊಗ್ಗ

ಬಾರಂದೂರು ಬಳಿ ಭೀಕರ ಅಪಘಾತ- ಮೆಡಿಕಲ್ ವಿದ್ಯಾರ್ಥಿನಿ ಸಾವು

ಶಿವಮೊಗ್ಗ: ಭದ್ರಾವತಿಯ ಬಾರಂದೂರು ಕ್ರಾಸ್ ಬಳಿ ಭೀಕರ ಅಫಘಾತ ನಡೆದಿದ್ದು, ಮೆಡಿಕಲ್ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಭದ್ರಾವತಿ ತಾಲೂಕಿನ ಬಾರಂದೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಟ್ರಾಕ್ಟರ್ ನಡುವೆ ಅಪಘಾತ ನಡೆದಿದ್ದು, ಓರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ತರೀಕೆರೆ ಮೂಲದ ಕೃತಿ(21) ಮೃತ ದುರ್ದೈವಿ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪದ ಅಮೃತಪುರದ ಕೃತಿ, ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದಳು. ಇಂದು ಶಿವಮೊಗ್ಗದಿಂದ ಊರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಉಳಿದಂತೆ ಕಾರಿನಲ್ಲಿದ್ದ ಮೂವರು ಹಾಗೂ ಟ್ರಾಕ್ಟರ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಟ್ರಾಕ್ಟರ್ ಕೂಡ ಪಲ್ಟಿಯಾಗಿದ್ದು, ಕಾರು ಸಹ ಜಖಂಗೊಂಡಿದೆ.
ಈ ಸಂಬಂಧ ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Related posts

ಬೆಂಕಿ ಅವಘಡ ಮೂವರು ಸಾವು,ಒಬ್ಬರು ಗಂಭೀರ, ತೀರ್ಥಹಳ್ಳಿ ತಾಲೂಕಲ್ಲಿ ಹೃದಯ ವಿದ್ರಾವಕ ಘಟನೆ

Malenadu Mirror Desk

ಜೆಡಿಎಸ್ ಸೇರಿದ ಮಾಜಿ ಶಾಸಕ ಪ್ರಸನ್ನಕುಮಾರ್

Malenadu Mirror Desk

ಬಿಪಿಎಲ್ ಕಾರ್ಡ್ಗೆ ಕಲ್ಲೂರು ಮೇಘರಾಜ್ ಆಗ್ರಹ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.