Malenadu Mitra
ಶಿವಮೊಗ್ಗ

ಶಾಲೆಯ ಸ್ವರೂಪ ಬದಲಿಸಿದ್ದ ಶಿಕ್ಷಕಿಗೆ ಗ್ರಾಮಸ್ಥರ ಅಭಿಮಾನದ ಬೀಳ್ಕೋಡುಗೆ

ಶಿವಮೊಗ್ಗ: ತಾಲೂಕಿನ ಪುರದಾಳು ಗ್ರಾ.ಪಂ ವ್ಯಾಪ್ತಿಯ ಹನುಮಂತಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಶುಕ್ರವಾರ ನಿವೃತ್ತರಾದ ವತ್ಸಲಾ ಕುಮಾರಿ ಅವರಿಗೆ ಗ್ರಾಮಸ್ಥರು ಆತ್ಮೀಯ ಬೀಳ್ಕೋಡುಗೆ ನೀಡಿ, ಗೌರವಿಸಿದ್ದಾರೆ.
ನಿವೃತ್ತರಾದ ಶಿಕ್ಷಕಿ ವತ್ಸಲಾರಿಗೆ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು.

ಸರ್ಕಾರಿ ಶಾಲೆಯ ಸ್ವರೂಪ ಬದಲಿಸಿದ್ದ ಶಿಕ್ಷಕಿ:

ಹನುಮಂತಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕರ್ತವ್ಯಕ್ಕೆ ನಿಯೋಜನೆ ಆದ ದಿನದಿಂದಲೂ ಶಿಕ್ಷಕಿ ವತ್ಸಲಾ ಅವರು ಗುಣಮಟ್ಟದ ಶೈಕ್ಷಣಿಕ ಚಟುವಟಿಕೆ ಜೊತೆಗೆ ಮಕ್ಕಳು, ಪೋಷಕರು ಹಾಗೂ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಪಣತೊಟ್ಟಿದ್ದ ಶಿಕ್ಷಕಿ ವತ್ಸಲಾ ಅವರು, ಹಳೆ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳು ಮತ್ತು ಪುರದಾಳು ಗ್ರಾಮ ಪಂಚಾಯತ್ ಜೊತೆ ಸಮನ್ವಯ ಸಾಧಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಮುಖ್ಯವಾಗಿ ರೌಂಡ್ ಟೇಬಲ್ ಶಿವಮೊಗ್ಗ ಅವರ ಮೂಲಕ ಶಾಲಾ ಕಾಂಪೌಂಡ್ ನಿರ್ಮಾಣ, ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಧ್ವಜದ ಕಟ್ಟೆ ನಿರ್ಮಾಣ, ಸುಣ್ಣ- ಬಣ್ಣ ಬಳಿಸುವ ಮೂಲಕ ಶಾಲೆಯ ಸಮಗ್ರ ಅಭಿವೃದ್ಧಿಗೆ ಶಿಕ್ಷಕಿ ಕಾರಣವಾಗಿದ್ದರು.


ಚಿಕ್ಕಮಗಳೂರು ಜಿಲ್ಲೆಯ ಮೆಣಸೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದ ವತ್ಸಲಾ ಅವರು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ 13 ಶಾಲೆಗಳಲ್ಲಿ 36 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಶುಕ್ರವಾರ ನಿವೃತ್ತರಾಗಿದ್ದು, ಈ ಹಿನ್ನೆಲೆಯಲ್ಲಿ ಸನ್ಮಾನಿಸಿ, ಬೀಳ್ಕೋಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಪ್ರದೀಪ್ ಹೆಬ್ಬೂರು, ಮಾನಸ ಜಿ. ಸತೀಶ್, ಹಳೆ ವಿದ್ಯಾರ್ಥಿಗಳಾದ ಪ್ರಶಾಂತ್, ದತ್ತರಾಜ್, ನವೀನ್, ಮಂಜುನಾಥ್, ಮೋಹನ್, ನಿತೀನ್, ನಿತ್ಯಾನಂದ, ಹರ್ಷ, ಸಚಿನ್ ಹಾಗೂ ಇತರರಿದ್ದರು.

Ad Widget

Related posts

ಯಶಸ್ಸಿನ ಮೆಟ್ಟಿಲು ಹತ್ತುವುದು ಸವಾಲು :ಕೆ.ಎ.ದಯಾನಂದ ಅವರ “ಹಾದಿಗಲ್ಲು” ಕೃತಿಯ ಬಿಡುಗಡೆಗೊಳಿಸಿ ಪ್ರೊ. ಚೆನ್ನಿ ಹೇಳಿಕೆ

Malenadu Mirror Desk

ಬುಲ್ಡೋಜರ್ ಕಾರ್ಯಾಚರಣೆ : 3 ಸಾವಿರ ಹಾಫ್ ಹೆಲ್ಮೆಟ್ ನಾಶ

Malenadu Mirror Desk

ಡಾ. ಪ್ರಸನ್ನಕುಮಾರ್ ಗೆ ಪ್ರತಿಷ್ಠಿತ ವಿಜ್ಹನ್ ಪ್ರಶಸ್ತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.