Malenadu Mitra
ರಾಜ್ಯಶಿವಮೊಗ್ಗಸಾಹಿತ್ಯ

ಸಾಹಿತ್ಯ ಸಮ್ಮೇಳನ ನಿರ್ಣಯ ಏನ್ ಗೊತ್ತಾ ?

ಮೂರು ದಿನಗಳಿಂದ ನಗರದ ಸಾಹಿತ್ಯ ಗ್ರಾಮದಲ್ಲಿ ನಡೆದ ೧೫ ನೇ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳವಾರ ಸಮಾಪನಗೊಂಡಿತು.
ಸಮ್ಮೇಳನದ ಅಂತಿಮ ದಿನದಂದು ಐದು ಪ್ರಮುಖ ನಿರ್ಣಯಗಳನ್ನು ಕೈಗೊಂಡು ಸರಕಾರಕ್ಕೆ ಶಿಫಾರಸು ಮಾಡಲು ನಿರ್ಣಯಿಸಲಾಯಿತು.
ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕಡ್ಡಾಯಗೊಳಿಸಬೇಕು. ಉನ್ನತ ವ್ಯಾಸಂಗ ಮತ್ತು ಸರ್ಕಾರಿ ನೌಕರಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ಹೆಚ್ಚಿಸಬೇಕು.
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲ ಸೌಕರ್ಯಹೆಚ್ಚಿಸಬೇಕು. ಪ್ರತಿಗ್ರಾಮ ಪಂಚಾಯಿತಿಯಲ್ಲೂ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಕನ್ನಡ ಭವನ ನಿರ್ಮಿಸಬೇಕು. ಕನ್ನಡ ಭಾ?ಯ ಅಭಿವೃದ್ಧಿಗೆ ರಾಜ್ಯಸರ್ಕಾರ ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ಣಯ ಕೈಗೊಂಡಿದೆ. ನಿರ್ಣಯಗಳನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಎಂದುಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ ತಿಳಿಸಿದರು.
ಕರ್ನಾಟಕರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷಎಚ್.ಎಂ.ಚಂದ್ರಶೇಖರಪ್ಪಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ. ವಿಜಯಾದೇವಿ ಅವರಂತಹ ವಿದ್ವಾಂಸರು ವಿಧಾನ ಪರಿಷತ್‌ನಲ್ಲಿ ಕೆಲಸ ಮಾಡುವಂತಾಗಬೇಕು. ವಿಧಾನ ಪರಿಷತ್ ಪರಿಣತರಿಂದ ಕೂಡಿದ ಸಭೆಯಾಗಿ ಜನರ ಸಮಸ್ಯೆಗಳಿಗೆ ಪರಿಹರಿಸುವ ದಿಸೆಯತ್ತ ಗಮನ ಹರಿಸಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಭಾಗವನ್ನು ಬೇರೆ ರಾಜ್ಯದವರು ತಮ್ಮದು ಎಂದು ಪ್ರತಿಪಾದಿಸುತ್ತಿದ್ದರೂ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಆದರೆ ಕೆಲ ಸಮಾಜದ ಜನರು ಜಾತಿ ಮೀಸಲಾತಿಗೆ ಹೋರಾಟ ಮಾಡುತ್ತಿದ್ದಾರೆ. ಮೊದಲು ಕನ್ನಡಿಗರಾಗಿ ರಾಜ್ಯದ ಭೂಭಾಗದ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಬೇಕಿದೆ. ಬೆಳಗಾವಿ ವಿಧಾನಸೌಧಕಟ್ಟಡ ನಿರುಪಯುಕ್ತವಾಗಿದ್ದು, ಅಲ್ಲಿಯೂ ನಿರಂತರವಾಗಿ ವಿಧಾನ ಮಂಡಲದ ಅಧಿವೇಶನ ನಡೆಸಬೇಕು ಹಾಗೂ ರಾಜ್ಯದಎಲ್ಲರೂ ಒಟ್ಟಾಗಿ ಬೆಳಗಾವಿಯಲ್ಲಿ ಸೇರಿ ಬೆಳಗಾವಿ ನಮ್ಮದು, ಎಂದಿಗೂ ಬಿಟ್ಟುಕೊಡುವುದಿಲ್ಲ ಎಂಬ ಸಂದೇಶ ಸಾರಬೇಕು ಎಂದು ತಿಳಿಸಿದರು.
ಸಾಹಿತಿ ವಿಜಯಾ ಶ್ರೀಧರ್, ಸಾಹಿತಿ ಜಯಪ್ರಕಾಶ ಮಾವಿನಕುಳಿ, ಜಿಲ್ಲಾ ೧೫ ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಡಾ.ವಿಜಯಾದೇವಿ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿದರು.
ಪ್ರಮುಖರಾದ ಸುನೀತಾರಾವ್, ಬಿ.ಡಿ.ಭೂಕಾಂತ್, ರುದ್ರಮುನಿ ಸಜ್ಜನ್, ಜಿ.ಪಿ.ಸಂಪತ್‌ಕುಮಾರ್, ಎಂ.ಎನ್.ಸುಂದರ್‌ರಾಜ್, ಚನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಿಗನೂಡು, ಗೋಪಜ್ಜಿ ನಾಗಪ್ಪ, ಮಧುಗಣಪತಿರಾವ್ ಮಡೆನೂರು, ಕೆ.ಬಸವನಗೌಡರು, ತಿರುಮಲ ಮಾವಿನಕುಳಿ, ಅಪೇಕ್ಷಾ ಮಂಜುನಾಥ್ ಮತ್ತಿತರರು ಹಾಜರಿದ್ದರು.

Ad Widget

Related posts

ಉತ್ತಮ ಕೆಲಸಕ್ಕೆ ಮಾಧ್ಯಮಗಳಿಂದ ಸಹಕಾರ: ಲಕ್ಷ್ಮೀಪ್ರಸಾದ್
ಪ್ರೆಸ್ ಟ್ರಸ್ಟ್,ಪತ್ರಕರ್ತರ ಸಂಘದ ಚಹಾಕೂಟದಲ್ಲಿ ನಿರ್ಗಮಿತ ಎಸ್ಪಿ ಅಭಿಮತ

Malenadu Mirror Desk

ಡಾ.ಸರ್ಜಿ ಹೆಸರಲ್ಲಿ ಸ್ವೀಟ್ ಗಿಫ್ಟ್ ರವಾನೆ: ಆರೋಪಿ ಅಂದರ್

Malenadu Mirror Desk

ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್ ಸರಕಾರ: ಈಶ್ವರಪ್ಪ ಆರೋಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.