Malenadu Mitra
ರಾಜ್ಯಶಿವಮೊಗ್ಗ

ವಿಐಎಸ್‌ಎಲ್ ಪುನರುಜ್ಜೀವನಕ್ಕೆ ಸಚಿವರಿಗೆ ಮನವಿ

ಭದ್ರಾವತಿಯ ವಿ.ಐ.ಎಸ್.ಎಲ್. ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಹಾಗೂ ಜಿಲ್ಲೆಯ ವಿವಿಧ ಆದ್ಯತಾ ಕ್ಷೇತ್ರಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಮೂಲಕ ಹೆಚ್ಚಿನ ಯುವಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾiನ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ದೆಹಲಿಯಲ್ಲಿ ನಿರ್ಮಲಾ ಸೀತಾರಾiನ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಅವರು, ಪ್ರಸ್ತುತ ಭದ್ರಾವತಿಯಲ್ಲಿ ಸ್ಥಗಿತಗೊಂಡಿರುವ ಕಾರ್ಖಾನೆಯು ಹೆಚ್ಚಿನ ಮೌಲ್ಯವುಳ್ಳ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಈ ಕೈಗಾರಿಕೆಯನ್ನು ಲಾಭದಾಯಕವಾಗಿ ನಡೆಸಲು ಇನ್ನಷ್ಟು ಅತ್ಯಾಧುನಿಕವಾದ ಯಂತ್ರೋಪಕರಣಗಳು ಸೇರಿದಂತೆ ವಿವಿಧ ಅವಶ್ಯಕ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದು ಮನವಿ ಮಾಡಿದರು.
ಮಧ್ಯಮ ಹಾಗೂ ದೀರ್ಘಕಾಲದ ಅವಧಿಯಲ್ಲಿ, ಉಕ್ಕು ಉತ್ಪಾದನೆಯ ಪ್ರಕ್ರಿಯೆಯನ್ನು ಆಧುನಿಕ ವ್ಯವಸ್ಥೆಗೆ ಪೂರಕವಾಗಿ ನವೀಕರಿಸಿ, ಸಿಂಟರ್ ಪ್ಲಾಂಟ್, ಕೋಕ್ ಓವನ್ ಹಾಗೂ ಆಧುನೀಕರಿಸಿದ ಸ್ಟೀಲ್ ಕರಗುವ ಘಟಕದ (SಒS) ಸೌಲಭ್ಯಗಳನ್ನು ನೀಡುವುದರ ಮೂಲಕ ಪ್ರತಿಸ್ಪರ್ಧಿಗಳಲ್ಲಿ ಲಭ್ಯವಿರುವ ಮಟ್ಟಕ್ಕೆ ವಿ.ಐ.ಎಸ್.ಎಲ್. ಘಟಕವನ್ನು ಕೊಂಡೊಯ್ಯುವ ಅಗತ್ಯವಿದೆ. ಖಾಸಗೀ ಬಂಡವಾಳಗಾರರನ್ನು ಆಕರ್ಷಿಸಿ ವಿ.ಐ.ಎಸ್.ಎಲ್ ಅನ್ನು ಪುನರ್ ಆರಂಭ ಮಾಡಲು ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿಕೊಂಡಿದ್ದು, ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದವರು ತಿಳಿಸಿದ್ದಾರೆ.
ಅಂತೆಯೇ ಜಿಲ್ಲೆಯಲ್ಲಿ ಎಲ್.ಇ.ಡಿ. ಬಲ್ಬ್, ಟೆಕ್ಸ್‌ಟೈಲ್ ಪಾರ್ಕ್, ಆಹಾರ ಸಂಸ್ಕರಣಾ ಘಟಕಗಳು ಮತ್ತು ಇ.ಎಸ್.ಡಿ.ಎಂ. (ಇಟeಛಿಣಡಿoಟಿiಛಿs Sಥಿsಣem ಆesigಟಿ & ಒಚಿಟಿuಜಿಚಿಛಿಣuಡಿiಟಿg) ಕೈಗಾರಿಕಾ ಕೇಂದ್ರಗಳ ಮುಖಾಂತರ ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡಲಮನವಿ ಮಾಡಿಕೊಳ್ಳಲಾಗಿದೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

Ad Widget

Related posts

ಕೋವಿಡ್ ಬಗ್ಗೆ ಮುಂಜಾಗರೂಕತಾ ಕ್ರಮ ಅಗತ್ಯ: ಸಚಿವ ಕೆ.ಕೆ.ಎಸ್. ಈಶ್ವರಪ್ಪ

Malenadu Mirror Desk

ಸರಳವಾಗಿ ಡಾ. ಅಂಬೇಡ್ಕರ್, ಜಗಜೀವನರಾಮ್ ಜಯಂತಿ

Malenadu Mirror Desk

ಕರುಳು ಕುಡಿ ರಕ್ಷಿಸಿ ಜೀವತೆತ್ತ ತಂದೆ, ಭೂಪಾಳಂ ಕುಟುಂಬಕ್ಕೆ ಸೇರಿದ ಬಂಗಲೆಯಲ್ಲಿ ಬೆಂಕಿ ಆಕಸ್ಮಿಕ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.