Malenadu Mitra
ರಾಜ್ಯಶಿವಮೊಗ್ಗ

ಕುವೆಂಪು ವಿವಿ ಬೋಧಕೇತರ ಸಿಬ್ಬಂದಿಗೆ ವೇತನ ನಿಗದೀಕರಣ ಸೌಲಭ್ಯ

ಎರಡು ದಶಕಗಳಿಂದ ಕಗ್ಗಂಟಾಗಿದ್ದ ಸಮಸ್ಯೆಗೆ ಐತಿಹಾಸಿಕ ಪರಿಹಾರ!

: ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ವಿಶ್ವವಿದ್ಯಾಲಯದ ಸುಮಾರು 73ಕ್ಕೂ ಹೆಚ್ಚು ಭೋಧಕೇತರ ನೌಕರರ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ವೇತನ ನಿಗದೀಕರಣ ಸೌಲಭ್ಯದ ಆದೇಶವನ್ನು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅರ್ಹ ಫಲಾನುಭವಿಗಳಿಗೆ ನೀಡುವುದರೊಂದಿಗೆ ಕಗ್ಗಂಟಾಗಿದ್ದ ಸಮಸ್ಯೆ ಸುಖಾಂತ್ಯ ಕಂಡಿದೆ.

ಕಿರಿಯ ಸಹಾಯಕರಿಂದ ಮೊದಲ್ಗೊಂಡು ಸಹಾಯಕ ಕುಲಸಚಿವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯದ ಭೋಧಕೇತರ
ಸಿಬ್ಬಂದಿ‌ ವೇತನ ನಿಗದೀಕರಣದ ಆದೇಶ ಸ್ವೀಕರಿಸುವ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಕುಲಸಚಿವೆ ಜಿ. ಅನುರಾಧ, ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್, ಬಳ್ಳೇಕೆರೆ ಸಂತೋಷ್, ರಾಮಲಿಂಗಪ್ಪ, ರಮೇಶ್ ಬಾಬು, ಮತ್ತು ಪ್ರೊ. ಕಿರಣ್ ದೇಸಾಯಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

100ಕ್ಕೂ ಹೆಚ್ಚು ಮಂದಿ ಭೋಧಕೇತರ ಸಿಬ್ಬಂದಿಗೆ ಈ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಮುಂಬಡ್ತಿ ಮತ್ತು ವೇತನ ನಿಗದೀಕರಣದ ಆರ್ಥಿಕ ಸೌಲಭ್ಯ ದೊರಕಲಿದ್ದು, ನೌಕರರಲ್ಲಿ ಸಂತಸ ಮನೆಮಾಡಿದೆ.

“ಕಳೆದ ಆಗಸ್ಟ್ ತಿಂಗಳಲ್ಲಿ ಸಾಂಕೇತಿಕವಾಗಿ ಎಂಟು ನೌಕರರಿಗೆ ವೇತನ ನಿಗದೀಕರಣದ ಆದೇಶ ನೀಡುವುದರೊಂದಿಗೆ ಆರಂಭವಾದ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಇನ್ನುಳಿದಂತೆ ಪ್ರಭಾರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 20 ಮಂದಿ ಸಿಬ್ಬಂದಿಗೆ ಹಾಗೂ ವಿವಿಧ ಹಂತಗಳಲ್ಲಿ ಖಾಲಿ ಉಳಿದಿರುವ ರಿಕ್ತ ಸ್ಥಾನಗಳಿಗೆ ತಿಂಗಳಾಂತ್ಯದೊಳಗೆ ಮುಂಬಡ್ತಿ‌ ನೀಡಿ ವೇತನ ನಿಗದೀಕರಣದ ಆದೇಶ ನೀಡಲಾಗುವುದು” ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಪ್ರತಿಕ್ರಿಯಿಸಿದರು.

ಜೇಷ್ಠತಾ ಪಟ್ಟಿ ಅಂತಿಮಗೊಂಡ ನಂತರ ಯಾವುದೇ ನೌಕರರೂ ಸೇವಾ ಸೌಲಭ್ಯದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ, ಸರ್ಕಾರದ ಡಿಪಿಎಆರ್ ಇಲಾಖೆಯ ತಜ್ಞರನ್ನು ಆಹ್ವಾನಿಸಿ ಮತ್ತೊಮ್ಮೆ ಪಟ್ಟಿಯನ್ನು ಪರಾಮರ್ಶಿಸಿ, ಅದರ ಆಧಾರದ ಮೇಲೆ ಮುಂಬಡ್ತಿ ನೀಡಲಾಗಿತ್ತು. ಇದೀಗ, ವೇತನ ನಿಗದೀಕರಣದ ಸೌಲಭ್ಯವನ್ನು ನೀಡುವುದರೊಂದಿಗೆ ಬಹುವರ್ಷಗಳ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ. ಎಂದು ಕುಲಸಚಿವೆ ಜಿ. ಅನುರಾಧ ಈ ಸಂದರ್ಭದಲ್ಲಿ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ವೇತನ ನಿಗದೀಕರಣದ ಸೌಲಭ್ಯವನ್ನು ಅರ್ಹ ನೌಕರರಿಗೆ ನೀಡಿರುವುದಕ್ಕೆ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್, ಬಳ್ಳೆಕೆರೆ ಸಂತೋಷ್, ರಾಮಲಿಂಗಪ್ಪ, ರಮೇಶ್ ಬಾಬು, ಪ್ರೊ. ಕಿರಣ್ ದೇಸಾಯಿ, ನಿರಂಜನ್ ಮೂರ್ತಿ, ಮಂಜುನಾಥ್, ನಾಗರಾಜ್ ಹಾಗೂ ಇತರೆ ಸಿಂಡಿಕೇಟ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

.

Ad Widget

Related posts

ವಿಎಸ್‍ಐಎಲ್ ಆಮ್ಲಜನಕ ಘಟಕಕ್ಕೆ ಶೆಟ್ಟರ್ ಭೇಟಿ

Malenadu Mirror Desk

ಗುರುವಿನ ಮಗ ಪಕ್ಷಕ್ಕೆ ಬಂದದ್ದು ಭಾಗ್ಯ ,ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಡಿಕೆಶಿ ಹೇಳಿಕೆ

Malenadu Mirror Desk

ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಗ್ರಾಮಾಂತರದಲ್ಲಿ ಕೃಷಿ ಭೂಮಿ, ಶಿವಮೊಗ್ಗ ನಗರದಲ್ಲಿ ವಾಸದ ಮನೆಗಳಿಗೆ ನುಗ್ಗಿದ ನೀರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.