Malenadu Mitra
ರಾಜ್ಯಶಿವಮೊಗ್ಗಹೊಸನಗರ

ಶರಾವತಿ ಹಿನ್ನೀರು ಹಬ್ಬ, ನೃತ್ಯ, ಆಹಾರ ಮೇಳದ ಆಕರ್ಷಣೆ

ಮಲೆನಾಡಿನ ಸಂಸ್ಕೃತಿ ಬಿಂಬಿಸುವ ಹಿನ್ನೀರ ಹಬ್ಬ ಹೊಸನಗರ ತಾಲೂಕು ಪಟಗುಪ್ಪಾ ಸೇತುವೆ ಸಮೀಪದ ಶರಾವತಿ ಹಿನ್ನೀರು ದಡದಲ್ಲಿ ಮಾ.೪ ರಂದು ನಡೆಯಲಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ಸವಕ್ಕೆ ಚಾಲನೆ ನೀಡುವರು. ಸಂಜೆ ೫.೩೦ ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಉದ್ಘಾಟಿಸುವರು. ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಇಂಧನ ಸಚಿವ ಸುನೀಲ್ ಕುಮಾರ್, ಕೆಪಿಸಿ ಎಂ.ಡಿ. ಶ್ರೀಕರ್, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ.ಜಿ.ಡಿ.ನಾರಾಯಣಪ್ಪ ಆಗಮಿಸುವರು.
ಹಿನ್ನೀರ ಹಬ್ಬದಲ್ಲಿ ಬಳೆಕೋಲಾಟ, ಸಾಂಸ್ಕೃತಿಕ ಸಂಭ್ರಮ, ಸಂಗೀತ ಸಂಜೆ,ಆಹಾರ ಮೇಳ, ನೃತ್ಯವೈಭವ ಕಾರ್ಯಕ್ರಮಗಳು ನಡೆಯಲಿವೆ. ಶಕ್ತಿ ನದಿ ಶರಾವತಿಗೆ ಆರತಿಯೂ ನಡೆಯಲಿದೆ. ಮಲೆನಾಡಿನ ರೈತ ಸಮುದಾಯಕ್ಕೆ ಹಿನ್ನೀರ ಹಬ್ಬವೊಂದು ರಸದೌತಣ ನೀಡುವ ಕಾರ್ಯಕ್ರಮವಾಗಿದೆ ಕಾರ್ಯಕ್ರಮದ ಯಶಸ್ಸಿಗೆ ಸಂಚಾಲನಾ ಸಮಿತಿ ಸದಸ್ಯರು ಸಕಲ ಸಿದ್ದತೆ ನಡೆಸಿದ್ದಾರೆ.

Ad Widget

Related posts

ವಿಮಾನ ನಿಲ್ದಾಣಕ್ಕೆ ಎಸ್.ಬಂಗಾರಪ್ಪ ಹೆಸರಿಡಲು ಮನವಿ

Malenadu Mirror Desk

ಕೊರೊನ ವ್ಯಾಕ್ಸಿನ್ ಬಗ್ಗೆ ತಪ್ಪು ಕಲ್ಪನೆ ಬೇಡ

Malenadu Mirror Desk

ಲಕ್ಷ ಲಕ್ಷ ಕಂಠಗಳ ಕನ್ನಡ ಗೀತಗಾಯನಕ್ಕೆ ಧ್ವನಿಗೂಡಿಸಿದ ಕುವೆಂಪು ವಿವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.