Malenadu Mitra
ರಾಜ್ಯ ಶಿವಮೊಗ್ಗ

ವಿಧಾನಸಭಾ ಚುನಾವಣೆ :ಮಾದರಿ ನೀತಿ ಸಂಹಿತೆ ಜಾರಿ
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಮಾಹಿತಿ

ಶಿವಮೊಗ್ಗ,ಮಾ.29: ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸಿದ್ದು, ಬುಧವಾರದಿಂದಲೇ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತಿಯನ್ನು ಕಟುನಿಟ್ಟಿನಿಂದ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಆರ್ ತಿಳಿಸಿದರು.
ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಒಟ್ಟು 14,58,680 ಮತದಾರರು ನೋಂದಾಯಿಸಿಕೊAಡಿದ್ದಾರೆ. 722080 ಪುರುಷ, 736574 ಮಹಿಳೆ, 14773 ಪಿಡಬ್ಲು÷?ಯಡಿ(ಪರ್ಸನ್ಸ್ ವಿತ್ ಡಿಸ್‌ಎಬಿಲಿಟಿ) 26 ಇತರೆ ಮತದಾರರಿದ್ದಾರೆ ಎಂದರು.


ಮತಗಟ್ಟೆಗಳು


ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 247 ಮತಗಟ್ಟೆಗಳು, ಭದ್ರಾವತಿ-112 ರಲ್ಲಿ 253 ಮತಗಟ್ಟೆಗಳು, ಶಿವಮೊಗ್ಗ-113 ರಲ್ಲಿ 282 ಮತಗಟ್ಟೆಗಳು, ತೀರ್ಥಹಳ್ಳಿ-114 ರಲ್ಲಿ 258, ಶಿಕಾರಿಪುರ-115 ರಲ್ಲಿ 232, ಸೊರಬ-116 ರಲ್ಲಿ 239, ಸಾಗರ-117 ರಲ್ಲಿ 264 ಒಟ್ಟು 1775 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚುನಾವಣಾಧಿಕಾರಿಗಳು :
ಶಿವಮೊಗ್ಗ ಗ್ರಾಮಾಂತರ -111 ರ ಚುನಾವಣಾಧಿಕಾರಿ ಕೊಟ್ರೇಶ್ ಹೆಚ್, ಸೂಡಾ ಆಯುಕ್ತರು, ಶಿವಮೊಗ್ಗ ಮೊ.ಸಂ: 9611079416. ಭದ್ರಾವತಿ-112 ರವಿಚಂದ್ರ ನಾಯ್ಕ್ ಶಿವಮೊಗ್ಗ ಉಪವಿಭಾಗಾಧಿಕಾರಿ ಮೊ.ಸಂ: 9916821123. ಶಿವಮೊಗ್ಗ-113 ಶಿವಾನಂದ ಪಿ ಸಾಗರ, ಉಪ ಆಯುಕ್ತರು, ಮಹಾನಗರಪಾಲಿಕೆ ಶಿವಮೊಗ್ಗ ಮೊ.ಸಂ: 9480241088. ತೀರ್ಥಹಳ್ಳಿ-114 ಮಲ್ಲಪ್ಪ ಕೆ ತೊದಲಬಾಗಿ, ಉಪ ಕಾರ್ಯದರ್ಶಿ-1, ಜಿ.ಪಂ ಶಿವಮೊಗ್ಗ ಮೊ.ಸಂ: 9480876010. ಶಿಕಾರಿಪುರ-115 ನಾಗೇಶ್ ಎ ರಾಯ್ಕರ್, ಉಪ ಕಾರ್ಯದರ್ಶಿ-2, ಜಿ.ಪಂ, ಶಿವಮೊಗ್ಗ ಮೊ.ಸಂ: 9480876001. ಸೊರಬ-116 ಪ್ರವೀಣ್ ಜೈನ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಶಿವಮೊಗ್ಗ ಮೊ.ಸಂ: 7353324771. ಸಾಗರ-117 ಪಲ್ಲವಿ ಸಾತೇನಹಳ್ಳಿ, ಸಾಗರ ಉಪವಿಭಾಗಾಧಿಕಾರಿ, ಮೊ.ಸಂ: 9480760602.


ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಮತ ಎಣಿಕೆ ಸ್ಥಳ :


ಶಿವಮೊಗ್ಗ ಗ್ರಾಮಾಂತರ -111 ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹೆಚ್ ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಶಿವಮೊಗ್ಗ. ಭದ್ರಾವತಿ-112 ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜು ಭದ್ರಾವತಿ. ಶಿವಮೊಗ್ಗ-113 ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಶಿವಮೊಗ್ಗ. ತೀರ್ಥಹಳ್ಳಿ-114 ಯುಆರ್ ಅನಂತಮೂರ್ತಿ ಕಾಲೇಜು ತೀರ್ಥಹಳ್ಳಿ. ಶಿಕಾರಿಪುರ-115 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ. ಸೊರಬ-116 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ. ಸಾಗರ-117 ಸರ್ಕಾರಿ ಪದವಿಪೂರ್ವ ಕಾಲೇಜು ಸಾಗರ. ಮತ ಎಣಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದರ್ ಹಾಜರಿದ್ದರು.


ಒಟ್ಟು 14,58,680 ಮತದಾರರು

722080 ಪುರುಷ,

736574 ಮಹಿಳೆ,

14773 ಪರ್ಸನ್ಸ್ ವಿತ್ ಡಿಸ್‌ಎಬಿಲಿಟಿ,

26 ಇತರೆ ಮತದಾರರಿದ್ದಾರೆ.

ಒಟ್ಟು 1775 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.


2023 ರ ವಿಧಾನ ಸಭಾ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ಬಳಸಿ ನಿರ್ವಹಿಸಲಾಗುವುದು.

ಜಿಲ್ಲೆಯಲ್ಲಿ 3350 ಬ್ಯಾಲೆಟ್ ಯೂನಿಟ್, 2352 ಕಂಟ್ರೋಲ್ ಯುನಿಟ್ ಹಾಗೂ 2417 ವಿವಿ ಪ್ಯಾಟ್ ಲಭ್ಯವಿದೆ.

ಜಿಲ್ಲೆಯಲ್ಲಿ ಮತದಾನದಂದು ಚುನಾವಣಾ ಕಾರ್ಯ ನಿರ್ವಹಿಸಲು 8520 ಅಧಿಕಾರಿ,ಸಿಬ್ಬಂದಿಗಳ ಅವಶ್ಯಕತೆ ಇದೆ.

ಉಮೇದುವಾರಿಕೆ ಸಲ್ಲಿಕೆಯ ಅವಧಿಯವರೆಗೆ ಅಂದರೆ ಏಪ್ರಿಲ್ 20 ರವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಹಾಗೂ ನಮೂನೆ 8 ರಲ್ಲಿ ತಿದ್ದುಪಡಿಗೆ ಅವಕಾಶವಿರುತ್ತದೆ.

ಜಿಲ್ಲೆಯಲ್ಲಿ 36 ಕಡೆ 7 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಚುನಾವಣೆಗೆ 6 ಸಿಆರ್‌ಪಿಎಫ್ ತಂಡಗಳು ಬರಲಿವೆ. ಸ್ಟ್ರಾಂಗ್ ರೂಂ, ಮತ ಎಣಿಕೆ ಕೇಂದ್ರಗಳಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ 55 ಜನರಿಗೆ ಗಡೀಪಾರು ಆದೇಶ ಮತ್ತು ಕಳೆದ 5-6 ತಿಂಗಳಿAದ 6 ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆಗೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ವಹಿಸಲಾಗಿದೆ

  • ಜಿ.ಕೆ.ಮಿಥುನ್ ಕುಮಾರ್, ಎಸ್‌ಪಿ
Ad Widget

Related posts

ವಿವಾಹ ಪೂರ್ವ ಸಂಬಂಧ: ಶಿಶು,ಬಾಣಂತಿ ಸಾವು

Malenadu Mirror Desk

ಯಡಿಯೂರಪ್ಪರಿಗೆ ಬಿಜೆಪಿಯಲ್ಲಿ ಭೀಷ್ಮನಿಗಾದ ಪರಿಸ್ಥಿತಿ : ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್

Malenadu Mirror Desk

ಕನಸು ಕಟ್ಟುವ ಮುನ್ನವೇ ಕರೆದುಕೊಂಡ ಕ್ರೂರ ವಿಧಿ, ಊರಿಗೇ ಬೆಳಕುಕೊಡುತಿದ್ದವ ಕತ್ತಲೆಗೆ ಸರಿದದ್ದು ಸರಿಯೇ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.