Malenadu Mitra
ರಾಜ್ಯ ಶಿವಮೊಗ್ಗ

ರಕ್ತದಲ್ಲಿ ಬರೆದುಕೊಡುವೆ, ಬಿಜೆಪಿ ಆಪರೇಷನ್ ಕಮಲ ಯಶ ಕಾಣುವುದಿಲ್ಲ: ಬೇಳೂರು

ಶಿವಮೊಗ್ಗ: ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಮುಂತಾದವರಿಗೆ ಬಿಜೆಪಿಯಲ್ಲಿ ಅಸ್ತಿತ್ವನೇ ಇಲ್ಲ. ಇವರೆಲ್ಲ ಸೇರಿ ಏನಾದ್ರೂ ಪಿತೂರಿ ಮಾಡಬೇಕೆಂದು ಹೊರಟಿದ್ದಾರೆ. ಇವರುಗಳು ತಮ್ಮ ಅಸ್ತಿತ್ವ ಹಾಗೂ ಪಕ್ಷದಲ್ಲಿ ನಾಯಕತ್ವ ಉಳಿಸಿಕೊಳ್ಳುವುದಕ್ಕಾಗಿ ಇಷ್ಟೆಲ್ಲ ಪಿತೂರಿ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಆಪರೇಷನ್ ಕಮಲದ ಬಗ್ಗೆ ಯಾವುದೇ ಚಿಂತನೆ ಇಲ್ಲ. ಆದರೆ ಕುಮಾರಸ್ವಾಮಿಗೆ ಇದೆ. ಅವರು ಮೋದಿ ಹಾಗೂ ಅಮಿತ್ ಶಾರನ್ನು ಭೇಟಿ ಮಾಡಿ ಏನಾದ್ರೂ ಕರ್ನಾಟಕದಲ್ಲಿ ಚೇಂಚ್ ಮಾಡೋಣ ಸಾರ್ ಅಂತ ಹೇಳಿ ಬಂದಿದ್ದಾರೆ. ಕುಮಾರಸ್ವಾಮಿ ಅವರು ಒಂದೂವರೆ ವರ್ಷ ಕಾಂಗ್ರೆಸ್‌ನಿಂದ ಡಿ ಕೆ ಶಿವಕುಮಾರ್ ಅವರಿಂದ ಅಧಿಕಾರ ಪಡೆದುಕೊಂಡಿದ್ದರು. ಈಗ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ದ ಒಂದು ಸಣ್ಣ ಷಡ್ಯಂತ್ರ ನಡೆಯುತ್ತಿದೆ. ಈಗ ಕೆಲವು ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ನಮ್ಮ ಶಾಸಕರು ಯಾರೂ ಪಕ್ಷ ತೊರೆಯಲ್ಲ. ಈಗಾಗಲೇ ೧೭ ಜನ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿ ನೋವು ಅನುಭವಿಸಿದ್ದಾರೆ. ಅವರಲ್ಲಿ ಅರ್ಧ ಜನರನ್ನು ಸೇರಿಸಿಕೊಳ್ಳಬಹುದು. ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ. ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನೀಡುತ್ತಿದೆ. ರಕ್ತದಲ್ಲಿ ಬರೆದುಕೊಡುತ್ತೇನೆ ನಮ್ಮ ಸರ್ಕಾರ ಬೀಳಲ್ಲ ಬಿಜೆಪಿಯವರ ಆಪರೇಷನ್ ಕಮಲ ಈ ಬಾರಿ ಯಶಸ್ವಿ ಆಗಲ್ಲ ಎಂದು ಹೇಳಿದರು.
ನಾನೂ ಎಂಪಿ ಟಿಕೆಟ್ ಆಕಾಂಕ್ಷಿ:
ನನಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಬೇಕು. ನಾನು ಸಂಸತ್ ಚುನಾವಣೆಗೆ ಆಕಾಂಕ್ಷಿಯಾಗಿದ್ದೇನೆ. ನಾನ್ಯಾಕೆ ಎಂಪಿ ಆಗಬಾರದು. ಯಡಿಯೂರಪ್ಪ ಅವರ ಮಗ ರಾಘವೇಂದ್ರ ಅವರನ್ನು ಎದುರಿಸುವ ಶಕ್ತಿ ನನಗೆ ಇದೆ. ಈಗಾಗಲೇ ಗೀತಾ ಶಿವರಾಜ್ ಕುಮಾರ್ ಸಂಸತ್ ಚುನಾವಣೆಗೆ ಆಸಕ್ತಿ ತೋರಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಗೊತ್ತಿಲ್ಲ. ಅವರೇನು ನನಗೆ ಬಂದು ಹೇಳಿಲ್ಲ. ಅವರು ಜಿಲ್ಲೆಯಲ್ಲಿ ಬಂದು ಎಲ್ಲೂ ಓಡಾಡಿದ್ದು ಕಂಡಿಲ್ಲ ಎಂದರು.
ನಾನು ಮೂರು ಸಲ ಶಾಸಕನಾಗಿದ್ದೇನೆ. ಕೇವಲ ಮುಖ್ಯಮಂತ್ರಿಗಳ ಮಕ್ಕಳಿಗೆ ಯಾಕೆ ಅಧಿಕಾರ ಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೋ ಇಲ್ವೋ ಗೊತ್ತಿಲ್ಲ. ಅವರು ಬಂದ್ರೆ ಶಿರಸಿ ಶಾಸಕ ಭೀಮಣ್ಣ ನಾಯ್ಕರನ್ನ ಕರ್ಕೊಂಡು ಬರ್ತಾರೆ. ಅವರು ನಮಗೆ ಕರೆಯಲ್ಲ ನಾವು ಹೋಗಲ್ಲ. ನಾನು ಸಾಮಾನ್ಯ ವ್ಯಕ್ತಿ. ನನ್ನ ಸಾಮರ್ಥ್ಯ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯ ಇಲ್ಲ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಜತೆ ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ಇದ್ದಾರೆ. ನಾನು ಕೇವಲ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ನಾನು ಕೂಡ ನಾಯಕನಿದ್ದೇನೆ. ನನಗೆ ಸರ್ಕಾರ ಮತ್ತು ಯಾವುದೇ ಮಂತ್ರಿಗಳ ಮೇಲೆ ಅಸಮಾಧಾನ ಇಲ್ಲ ಎಂದು ಹೇಳಿದರು.
ಆಪರೇಷನ್ ಕಮಲ ಮಾಡುವುದು ಬಿಜೆಪಿ ಅವರ ಹುಚ್ಚು ಕನಸು. ಕರ್ನಾಟಕದ ಜನತೆ ನಮಗೆ ೧೩೬ ಸೀಟು ಕೊಟ್ಟು ಬಹುಮತ ನೀಡಿದ್ದಾರೆ. ಬಿಜೆಪಿ ಹಾಗೆ ನಮಗೆ ಕಡಿಮೆ ಸೀಟಗಳು ಬಂದಿಲ್ಲ. ಬಿಜೆಪಿ ಅವರ ಯೋಗ್ಯತೆಗೆ ಯಡಿಯೂರಪ್ಪ ನಾಯಕತ್ವದಲ್ಲಿದ್ದಾಗ ೧೦೪-೧೧೦ ಸೀಟು ಮಾತ್ರ ಬಂದಿದ್ದವು. ಅದಕ್ಕಿಂತ ಮೇಲೆ ಇವರು ಏಳಲಿಲ್ಲ. ಕರ್ನಾಟಕ ಜನ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಆಪರೇಷನ್ ಕಮಲ ಬಿಜೆಪಿ ಕೈಯಲ್ಲಿ ಆಗಲ್ಲ. ಆಪರೇಷನ್ ಕಮಲ ಮಾಡುವ ನಾಯಕರು ಬಿಜೆಪಿಯಲ್ಲಿ ಇಲ್ಲ. ಇವರಿಗೆ ಇನ್ನೂ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಿಕೊಳ್ಳಲು ಆಗಿಲ್ಲ. ಇನ್ನು ಅಪರೇಷನ್ ಕಮಲ ಮಾಡುತ್ತಾರೆಯೇ ಎಂದು ಕಿಡಿಕಾರಿದರು.

Ad Widget

Related posts

ಗೋಮಾಳ, ಕಂದಾಯ ಭೂಮಿಯಲ್ಲಿ ಈಚಲು,ತೆಂಗು, ತಾಳೆ ಮರನೆಡಿ, ಈಡಿಗ ಸಮುದಾಯಕ್ಕೆ ಶಿವಮೊಗ್ಗದಲ್ಲಿ ಅನ್ಯಾಯ: ಪ್ರಣವಾನಂದ ಸ್ವಾಮೀಜಿ ಹೇಳಿಕೆ

Malenadu Mirror Desk

ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ

Malenadu Mirror Desk

ವಿಶೇಷ ಈಜು, ಲಾನ್‌ಟೆನ್ನಿಸ್ ಮತ್ತು ಸ್ಕೇಟಿಂಗ್ ತರಬೇತಿ ಬೇಸಿಗೆ ಶಿಬಿರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.