Malenadu Mitra
ರಾಜ್ಯ ಸಾಗರ

ಶಾಸಕ ಹಾಲಪ್ಪ ಹರತಾಳು ಅವರು ತಮ್ಮ ಮಾತು ಮುರಿಯುವ ಮೂಲಕ ಪರಿಸರನಾಶಕ್ಕೆ ಕಾರಣವಾಗಿದ್ದಾರೆ

ಸಾಗರ : ರಾಷ್ಟ್ರೀಯ ಹೆದ್ದಾರಿ 206 ಬಿ.ಎಚ್.ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆ ಬಲಭಾಗದ ಮರಗಳನ್ನು ಕಡಿಯುವುದಿಲ್ಲ ಎಂದು ಭರವಸೆ ನೀಡಿದ್ದ ಶಾಸಕ ಹಾಲಪ್ಪ ಹರತಾಳು ಅವರು ತಮ್ಮ ಮಾತು ಮುರಿಯುವ ಮೂಲಕ ಪರಿಸರನಾಶಕ್ಕೆ ಕಾರಣವಾಗಿದ್ದಾರೆ ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಚಿದಂಬರ ರಾವ್ ಜಂಬೆ ದೂರಿದ್ದಾರೆ.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.22ರಂದು ಅಗಲೀಕರಣ ಹೆಸರಿನಲ್ಲಿ ಮರ ಕಡಿತಲೆ ಮಾಡುವುದನ್ನು ವಿರೋಧಿಸಿ ಪರಿಸರಾಸಕ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳಕ್ಕೆ ಬಂದ ಶಾಸಕರು ಮರ ಕಡಿಯುವ ಪ್ರಕ್ರಿಯೆ ನನಗೂ ನೋವುಂಟು ಮಾಡಿದೆ. ತಾಯಿ ಸಿಗಂದೂರು ದೇವಿಯ ಆಣೆಯಾಗಿ ರಸ್ತೆಯ ಬಲಭಾಗದ ಮರ ಕಡಿತಲೆ ಮಾಡದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು ಎಂದು ಹೇಳಿದರು.
ಜ.23ರಂದು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಹ ಶಾಸಕರು ರಸ್ತೆಯ ಬಲಭಾಗದ ಮರಗಳನ್ನು ಕಡಿತಲೆ ಮಾಡುವುದಿಲ್ಲ. ದೆಹಲಿಗೆ ಹೋಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚೆ ನಡೆಸಿ ಮರ ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ನಾವು ಶಾಸಕರ ಮಾತನ್ನು ನಂಬಿ ನಿರಾಳವಾಗಿದ್ದೇವು. ಆದರೆ ಜ. 30ರಂದು ಹೆದ್ದಾರಿಯ ಬಲಭಾಗದಲ್ಲಿ ತೆನೆಬಿಟ್ಟ ಬಸರಿ ಪಾರಂಪರಿಕಾ ಮಾವಿನ ಮರಗಳನ್ನು ಕಡಿತಲೆ ಮಾಡಿದ್ದು ನನಗೆ ಅತೀವ ನೋವು ಉಂಟು ಮಾಡಿದೆ. ಅಭಿವೃದ್ದಿಯೆಂದರೆ ಆರ್ಥಿಕ ಅಭಿವೃದ್ದಿಯೊಂದೆ ಎಂದು ಶಾಸಕರು ಭಾವಿಸಿದಂತೆ ಕಾಣುತ್ತದೆ. ಸಿಗಂದೂರು, ಜೋಗ ಅಭಿವೃದ್ದಿ ಮಾತ್ರ ಶಾಸಕರ ಗುರಿಯೇ ಎಂದು ಪ್ರಶ್ನಿಸಿದ ಅವರು, ಶಾಸಕರು ನಮಗೆ ದ್ರೋಹ, ಮೋಸ ಮಾಡಿದ್ದಾರೆ. ಇದರ ವಿರುದ್ದ ಜನರು ಪ್ರಶ್ನೆ ಮಾಡಬೇಕು. ಶಾಸಕರು ನೀಡಿದ ವಾಗ್ದಾನವನ್ನು ಸಹ ಮರೆತಿದ್ದಕ್ಕೆ ನಾವು ಯಾವ ರೀತಿ ಪ್ರತಿಭಟನೆ ಮಾಡಬೇಕು. ಅಧಿಕಾರ ಇದೆ ಎಂದು ಭಂಡತನ ಪ್ರದರ್ಶನ ಮಾಡಿದ್ದು ಎಷ್ಟು ಸರಿ ಎಂದರು.

ಪರಿಸರವಾದಿ ಅಖಿಲೇಶ್ ಚಿಪ್ಳಿ ಮಾತನಾಡಿ, ರಸ್ತೆಯ ಎಡಭಾಗದ ಮರಗಳನ್ನು ಕಡಿದು ಬಲಭಾಗದ ಮರ ಉಳಿಸುತ್ತೇವೆ. ಬೆಂಗಳೂರಿನ ಏಷ್ಯನ್ ಲ್ಯಾಂಡ್‌ಸ್ಕೇಪ್ ಸಂಸ್ಥೆ ಮರಗಳನ್ನು ಕಿತ್ತು ಮತ್ತೊಂದು ಕಡೆ ಸ್ಥಳಾಂತರ ಮಾಡುತ್ತದೆ ಎನ್ನುವ ಶಾಸಕರ ಹೇಳಿಕೆಯಲ್ಲೆ ಕೃತಮತೆಯಿಂದ ಕೂಡಿದ್ದಾಗಿದೆ. ೩೦೦-೪೦೦ ವರ್ಷಗಳ ಇತಿಹಾಸ ಇರುವ ಬೃಹತ್ ಮರಗಳನ್ನು ಅಗಲೀಕರಣ ಹೆಸರಿನಲ್ಲಿ ರಾತ್ರೋರಾತ್ರಿ ಕಡಿತಲೆ ಮಾಡಲಾಗಿದೆ. ಭಾನುವಾರದ ದಿನ ಯಾರೂ ಗಮನಿಸುವುದಿಲ್ಲ ಎಂದು ಮರ ಕಡಿತಲೆ ಮಾಡಿದ್ದಾರೆ. ಟಿಂಬರ್ ಮಾಫಿಯಾದ ಎದುರು ಶಾಸಕರು ಅಸಹಾಯಕರಾದಂತೆ ಕಾಣುತ್ತಿದೆ. ಪರಿಸರ ನಾಶ ಮಾಡುವ ಮೂಲಕ ಗುತ್ತಿಗೆ ಮಾಫಿಯ ವಿಜೃಂಭಿಸುತ್ತಿದೆ. ಜನಪ್ರತಿನಿಧಿಗಳ ಇಂತಹ ಹೊಂದಾಣಿಕೆ ರಾಜಕಾರಣ ಪರಿಸರನಾಶಕ್ಕೆ ಪ್ರಮುಖ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ವಿರುದ್ದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಟಿಯಲ್ಲಿ ಚಿತ್ರನಟ ಯೇಸುಪ್ರಕಾಶ್, ರಂಗಕರ್ಮಿಗಳಾದ ಮಂಜುನಾಥ್ ಜೇಡಿಕುಣಿ, ಉಮಾಮಹೇಶ್ವರ, ಡಿ. ದಿನೇಶ್ ಹಾಜರಿದ್ದರು.

ಶಾಸಕರು ನಮಗೆ ದ್ರೋಹ, ಮೋಸ ಮಾಡಿದ್ದಾರೆ. ಇದರ ವಿರುದ್ದ ಜನರು ಪ್ರಶ್ನೆ ಮಾಡಬೇಕು. ಶಾಸಕರು ನೀಡಿದ ವಾಗ್ದಾನವನ್ನು ಸಹ ಮರೆತಿದ್ದಕ್ಕೆ ನಾವು ಯಾವ ರೀತಿ ಪ್ರತಿಭಟನೆ ಮಾಡಬೇಕು. ಅಧಿಕಾರ ಇದೆ ಎಂದು ಭಂಡತನ ಪ್ರದರ್ಶನ ಮಾಡಿದ್ದು ಎಷ್ಟು ಸರಿ

ಚಿದಂಬರ ರಾವ್ ಜಂಬೆ

Ad Widget

Related posts

ತವರಿನತ್ತ ಧರ್ಮೇಗೌಡ ಪಾರ್ಥೀವ ಶರೀರ, ಅಂತಿಮ ನಮನ ಸಲ್ಲಿಸಲಿರುವ ಸಿಎಂ

Malenadu Mirror Desk

ಮೆಡಿಕಲ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ

Malenadu Mirror Desk

ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.