ಮಳೆಗಾಲದ ಒಲೆ, ಮಲೆನಾಡಿನ ಜೀವಸೆಲೆ, ಗೇರು, ಹಲಸಿನ ಬೀಜ, ಅಣಬೆ, ಏಡಿ,ಒಣಮೀನಿನ ಖಾದ್ಯಕ್ಕೆ ಹದಕೆಂಡ ಮಾಡುವುದೇ ಒಂದು ಸಂಭ್ರಮ
ಜ್ಯೋತಿಕುಮಾರಿ ಕೆ.ವಿ. ಉಪನ್ಯಾಸಕಿ,ಡಯೆಟ್ ,ಶಿವಮೊಗ್ಗ ಮಲೆನಾಡೆಂದರೆ ಶ್ರೀಮಂತ ಸಂಸ್ಕೃತಿಯ ಪ್ರತೀಕ. ಇಲ್ಲಿನ ಮಳೆಗಾಲವನ್ನು ಅನುಭವಿಸುವುದೇ ಒಂದು ಸಂಭ್ರಮ. ಈ ಮಳೆನಾಡಿನಲ್ಲಿ ಮಣ್ಣಿನ ಒಲೆಗೆ ಇನ್ನಿಲ್ಲದ ಮಹತ್ವ ಇದೆ. ಹೌದು. ಹೊರಗೆ ಜಡಿಮಳೆಯಲ್ಲಿ ತೋಯ್ದ ಕಾಯಕ್ಕೆ...

