Malenadu Mitra
ರಾಜ್ಯಶಿವಮೊಗ್ಗ

ಸೂಡಾ ಅಧ್ಯಕ್ಷರಾಗಿ ಮಧುಸೂದನ್‌ ಅಧಿಕಾರ ಸ್ವೀಕಾರ

ಶಿವಮೊಗ್ಗ : ರಾಜ್ಯ ಸರ್ಕಾರ ಮತ್ತು ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾವಿಟ್ಟು, ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆಗೆ ದಕ್ಕೆಯಾಗದಂತೆ ಶಿವಮೊಗ್ಗ- ಭದ್ರಾವತಿ ಅವಳಿನಗರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ( ಸೂಡಾ) ದ ನೂತನ ಅಧ್ಯಕ್ಷ ಸಿ.ಜಿ. ಮಧುಸೂದನ್ ಹೇಳಿದರು.
ನಗರದ ಸೂಡಾ ಕಚೇರಿಯಲ್ಲಿ ಶನಿವಾರ ಪಕ್ಷದ ಹಿರಿಯರು, ಕಾರ್ಯಕರ್ತರು ಹಾಗೂ ನೂರಾರು ಮಂದಿ ಎನ್ ಎಸ್ ಯು ಐ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಸೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
 ಚಿಕ್ಕ ವಯಸ್ಸಿನಲ್ಲಿಯೇ  ನಾನು ಎನ್ ಎಸ್ ಯು ಐ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಂದವನು. ಸೂಡಾ ಅಧ್ಯಕ್ಷ ಹುದ್ದೆ ನನಗೆ ಸುಲಭವಾಗಿ ಸಿಕ್ಕಿರಬಹುದು, ಆದರೆ ಇದರ ಹಿಂದೆ ದೊಡ್ಡ ಶ್ರಮವಿದೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಿಗೆ, ಕಷ್ಟಪಟ್ಟವರಿಗೆ, ಪಕ್ಷ ಸಂಘಟನೆಗೆ ದುಡಿದವರಿಗೆ ಯಾವತ್ತಿದ್ದರೂ ಪ್ರತಿಫಲ ಇದ್ದೇ ಎನ್ನುವುದಕ್ಕೆ ನಾನೇ ಸಾಕ್ಷಿ. ಹಾಗಾಗಿ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ನೀಡಿದ ಈ ಹುದ್ದೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಜನಮುಖಿ ಯಾಗಿ ಹಾಗೂ ಪಕ್ಷದ ಯುವಕರಿಗೆ ಸ್ಪೂರ್ತಿಯಾಗುವ ಹಾಗೆ ಬಳಸಿಕೊಳ್ಳುವೆ ಎಂದರು.
ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ ಮಾತನಾಡಿ, ನಾನು ಎನ್ ಎಸ್ ಯು ಐ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಕಾರಣವಾದವರು ಮಧುಸೂದನ್ ಅವರು. ಹಾಗಾಗಿ ಅವರಿಗೆ ಯಾವುದಾದರೂ ಹುದ್ದೆ ಸಿಕ್ಕಿಲ್ಲ ಎನ್ನುವ ಕೊರಗು ನನ್ನನ್ನು ತೀವ್ರವಾಗಿ ಕಾಡುತ್ತಿತ್ತು. ಈಗ ಅದು ಸಂಪೂರ್ಣ ಗೊಂಡಿದೆ. ತುಂಬಾ ಖುಷಿಯಾಗಿದೆ. ಪಕ್ಷದಲ್ಲಿ ದುಡಿದವರನ್ನು ವರಿಷ್ಠರು ಕಡೆಗಣಿಸಲಾರರು ಎಂಬುದಕ್ಕೆ ಇದು ಸಾಕ್ಷಿ ಎಂದರು.
ಜಿಲ್ಲಾಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಯುವಕರಿಗೆ ಆದ್ಯತೆ ಸಿಗಬೇಕು, ಅವರಿಗೂ ಅಧಿಕಾರ ಸಿಗಬೇಕೆಂಬುದು ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಆಶಯವಾಗಿತ್ತು. ಅದು ಶಿವಮೊಗ್ಗದಿಂದಲೇ ಪ್ರಾರಂಭವಾಗಿದೆ. ಚೇತನ್ ಗೌಡ, ಹೆಚ್.ಸಿ. ಯೋಗೇಶ್ ಅವರ ನಂತರವೀಗ ಮಧುಸೂದನ್ ಅವರಿಗೂ ಪ್ರಮುಖ ಹುದ್ದೆ ಸಿಕ್ಕಿದೆ. ಯುವಕರಿಗೆ ದೊಡ್ಡ ಸಂದೇಶ ನೀಡಿದೆ . ಈ ಬೆಳವಣಿಗೆ ಹೀಗೆಯೇ ಮುಂದುವರೆಯಲಿ, ಪಕ್ಷ ಸಂಘಟನೆ ತಳಮಟ್ಟದಿಂದ ಗಟ್ಟಿಯಾಗಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಖಾನ್ ಮಾತನಾಡಿ, ಯುವಶಕ್ತಿಗೆ ಅವಕಾಶ ಸಿಗಬೇಕಿದೆ. ಯಾಕೆಂದರೆ ಯುವಶಕ್ತಿಯೇ ಪಕ್ಷದ ದೊಡ್ಡ ಆಸ್ತಿಯಾಗಿದೆ. ಇದನ್ನು ಪಕ್ಷವು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಾಗೆಯೇ ಯಾವ ಶಕ್ತಿಯೂ ಕೂಡ ಸಿಕ್ಕ ಅವಕಾಶವನ್ನು ಪಕ್ಷ ಸಂಘಟನೆಗೆ ಬಳಕೆಮಾಡಿಕೊಳ್ಳಬೇಕಿದೆ ಎಂದರು.
ಭದ್ರಾವತಿ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಸಿ.ಎಂ. ಖಾದರ್ ಮಾತನಾಡಿ, ಪಕ್ಷಕ್ಕಾಗಿ ದುಡಿದವರನ್ನು, ಕಷ್ಟ ಪಟ್ಟವರನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಕೈ ಬಿಡಿವುದಿಲ್ಲ ಎನ್ನುವುದಕ್ಕೆ ಸಿ.ಜಿ.ಮಧುಸೂದನ್ ಅವರ ನೇಮಕವೇ ಸಾಕ್ಷಿ. ಈ ನೇಮಕ ಪಕ್ಷದ ಯುವ ಶಕ್ತಿಗೆ ದೊಡ್ಡ ಹುರುಪು ತಂದಿದೆ. ಇದರ ಹಿಂದೆ ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್ವರ್, ಯುವ ನಾಯಕರಾದ ಬಸವೇಶ್, ಗಣೇಶ್ ಅವರ ಶ್ರಮವಿದೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಯೋಗೇಶ್‌, ಪ್ರಮುಖರಾದ ಚಂದ್ರ ಭೂಪಾಲ್‌, ಕಲೀಂ ಪಾಶಾ, ಶಿವಕುಮಾರ್‌, ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಪಕ್ಷದ ಮುಖಂಡರಾದ ಎಸ್.ರವಿಕುಮಾರ್, ಬಿ. ಎಸ್.ಬಸವೇಶ್, ಧೀರರಾಜ್ ಹೊನ್ನವಿಲೆ, ಎಸ್.ಪಿ. ಶೇಷಾದ್ರಿ, ಎಂ.ಎಸ್.ಸಿದ್ದಪ್ಪ, ನೇತ್ರಾವತಿ ಗೌಡ, ತಂಗರಾಜ್, ಗಿರೀಶ್ ಬುಕ್ಲಾಪುರ,  ವೈ. ತಿಮ್ಮರಾಜು , ವೀರೇಶ್ ಕ್ಯಾತಿನಕೊಪ್ಪ, ಹಾಲೇಶ್, ಚರಣ್, ರವಿ ಸೇರಿದಂತೆ ಮತ್ತಿತರರು ಇದ್ದರು.

ಸಿಹಿ ಹಂಚಿ ಸಂಭ್ರಮಿಸಿದರು.


ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ದಿಂದ ಬೈಕ್ ರಾಲಿ ಮೂಲಕ ನೂತನ ಸೂಡಾ ಅಧ್ಯಕ್ಷ. ಸಿ.ಜಿ.ಮಧು ಸೂದನ್ ಅವರನ್ನು ಮೆರವಣಿಗೆಯಲ್ಲಿ ಕರೆ ದೋಯ್ಯಲಾಯಿತು. ಪಕ್ಷದ ಅನೇಕ ಮುಖಂಡರು ಮೆರವಣಿಗೆ ಯಲ್ಲಿದ್ದರು. ವಿಶೇಷವಾಗಿ ಎನ್ ಎಸ್ ಯು ಐ ಕಾರ್ಯಕರ್ತರು ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಾ, ಘೋಷಣೆ ಕೂಗುತ್ತಾ ಸಾಗಿದರು ಸೂಡಾ ಕಚೇರಿ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.


ಪಕ್ಷದ ನಾಯಕರು ಇಟ್ಟ ಭರವಸೆಯನ್ನು ಹುಸಿ ಮಾಡಲಾರೆ. ಅಧಿಕಾರ ದುರುಪಯೋಗ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವೆ. ನನಗೆ ದೊಡ್ಡ ಜವಾಬ್ದಾರಿ ಕೊಟ್ಟ ಎಲ್ಲರಿಗೆ ಕೃತಜ್ಞತೆ ಸಲ್ಲಿಸುವೆ.

–ಮಧುಸೂದನ್‌, ಸೂಡಾ ಅಧ್ಯಕ್ಷ

Ad Widget

Related posts

ಸುಳ್ಳು ಆರೋಪಗಳಿಗೆ ಹೆದರಬೇಕಿಲ್ಲ, ನಾನು ಧೈರ್ಯವಾಗಿದೀನಿ ನೀವೂ ಧೈರ್ಯವಾಗಿರಿ. ಮಠದ ಭಕ್ತರಿಗೆ ಮುರುಘಾ ಶ್ರೀ ಗಳಿಂದ ಸಾಂತ್ವನ.

Malenadu Mirror Desk

ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್ ಭೀಕರ ಹತ್ಯೆ.

Malenadu Mirror Desk

ಅಂಧಕಾರ ಕಳೆದು ಜ್ಞಾನದ ಬೆಳಕು ಬೆಳಗಬೇಕು
ಸಾರಗನಜೆಡ್ಡು ಕಾರ್ತಿಕೇಯ ಕ್ಷೇತ್ರದ ಕಾರ್ತಿಕ ದೀಪೋತ್ಸವದಲ್ಲಿ ಯೋಗೇಂದ್ರ ಶ್ರೀ ಆಶಯ  

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.