Malenadu Mitra
ರಾಜ್ಯಶಿವಮೊಗ್ಗಹೊಸನಗರ

ಅರಸಾಳು ಮಾಲ್ಗುಡಿ ಮ್ಯೂಸಿಯಂ ಪುನರಾರಂಭ

ಹೊಸನಗರ ತಾಲೂಕು ಅರಸಾಳು ರೈಲ್ವೆ ನಿಲ್ದಾಣದ ಮಾಲ್ಗುಡಿ ಮ್ಯೂಸಿಯಂ ಜುಲೈ 9 ರಿಂದ ಪುನರಾರಂಭವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ, ಕೋವಿಡ್ ಲಾಕ್ಡೌನ್ ಕಾರಣದಿಂದ ಮ್ಯೂಸಿಯಂ ಅನ್ನು ಬಂದ್ ಮಾಡಲಾಗಿತ್ತು. ಈಗ ಪುನಃ ಆರಂಭಿಸಿದ್ದು, ಪ್ರವಾಸಿಗರು ಮಂಗಳವಾರ ಹೊರತು ಪಡಿಸಿ ಉಳಿದ ದಿನಗಳಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ತನಕ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಖ್ಯಾತ ಕಾದಂಬರಿಕಾರ ಆರ್.ಕೆ.ನಾರಾಯಣ್ ಅವರ ಮಾಲ್ಗುಡೇಸ್ ಕಾದಂಬರಿ ಆಧಾರಿತ ಧಾರಾವಾಹಿಯ ಕೆಲವು ಎಪಿಸೋಡ್‍ಗಳನ್ನು ಅರಸಾಳಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈ ನೆನಪಿಗೆ ಮತ್ತು ಆರ್.ಕೆ.ನಾರಾಯಣ್ ಮತ್ತು ಧಾರಾವಾಹಿ ನಿರ್ಮಾಪಕ, ನಟ ಶಂಕರ್‍ನಾಗ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಮ್ಯೂಸಿಯಂ ಸ್ಥಾಪಿಸಲಾಗಿದೆ.


ಪ್ರವಾಸಿಗರು ಮ್ಯೂಸಿಯಂ ಭೇಟಿ ಸಂದರ್ಭ ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಬೇಕು ಎಂದು ಮೈಸೂರು ವಿಭಾಗೀಯ ಮ್ಯಾನೇಜರ್ ರಾಹುಲ್ ಅಗರ್‍ವಾಲ್ ತಿಳಿಸಿದ್ದಾರೆ.

Ad Widget

Related posts

ಹುತಾತ್ಮ ಪೊಲೀಸರಿಗೆ ಗೌರವ ನಮ್ಮೆಲ್ಲರ ಆದ್ಯ ಕರ್ತವ್ಯ

Malenadu Mirror Desk

ಜಿಎಸ್‌ಟಿ ತೊಂದರೆ: ವಾಣಿಜ್ಯೋದ್ಯಮಿಗಳ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.