Malenadu Mitra
ರಾಜ್ಯಶಿವಮೊಗ್ಗ

ಪ್ರಿಯದರ್ಶಿನಿ ಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಶಿವಮೊಗ್ಗ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
2019 -20, 2020 -21 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರಾದ ಕಾವ್ಯ ಆರ್,(624), ಆರ್. ಕಾವ್ಯಶ್ರೀ(623), ಕೃತಿಕಾ ಕೆ.(623) ಅಂಕ ಪಡೆದಿದ್ದಾರೆ. ಹಾಗೆಯೇ ಸ್ಪೂರ್ತಿ(615), ಶ್ರೀರಕ್ಷಾ(615), ಪ್ರಾರ್ಥನಾ(617), ತೇಜಸ್ವಿನಿ(611), ಅಪೂರ್ವ(611), ಸುಮಿತಾ(609) ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸನ್ಮಾನಿಸಿ ಮಾತನಾಡಿದ ಪ್ರಿಯದರ್ಶಿನಿ ಆಂಗ್ಲ ಶಾಲೆಯ ಕಾರ್ಯದರ್ಶಿ ಎನ್. ರಮೇಶ್, ನಮ್ಮ ಶಾಲೆಯ ಮಕ್ಕಳು ಇಡೀ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ. ಇದಕ್ಕೆ ಬಹುಮುಖ್ಯವಾದ ಕಾರಣ ಅವರ ಸಾಧನೆಯೇ ಆಗಿದೆ. ಜೊತೆಗೆ ನಮ್ಮ ಶಾಲೆಯ ಶಿಕ್ಷಕರು ಅತ್ಯುತ್ತಮವಾಗಿ ಪಾಠಗಳನ್ನು ಬೋಧಿಸುವುದರ ಮೂಲಕ ಈ ಸಾಧನೆ ಮಾಡಲಾಗಿದೆ. ಕಳೆದ 10 ವರ್ಷಗಳಿಂದ ನಮ್ಮ ಶಾಲೆಯಲ್ಲಿ ಶೇ. 100 ರಷ್ಟು ಫಲಿತಾಂಶ ಬರುತ್ತಿರುವುದು ಹೆಮ್ಮೆ ವಿಷಯವಾಗಿದೆ ಎಂದರು. ಪ್ರಾಂಶುಪಾಲ ವೀರೇಶ್, ಉಪ ಪ್ರಾಂಶುಪಾಲ ಪ್ರವೀಣ್ ಮುಂತಾದವರಿದ್ದರು.

ಪ್ರಿಯದರ್ಶಿನಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಉತ್ತಮವಾಗಿದೆ ಸಾಧನೆಯ ತಾಣ ಇದಾಗಿದೆ. ಮಕ್ಕಳು ಇದನ್ನು ಬಳಸಿಕೊಂಡು ಅತಿ ಹೆಚ್ಚು ಅಂಕ ಪಡೆಯಬೇಕು

ಶಾರದಾ ಭಟ್, ರತ್ನ
ಪೋಷಕರು

Ad Widget

Related posts

ಸಾಗರ ಕಾಂಗ್ರೆಸ್‌ನಲ್ಲಿ ಟಿಕೆಟ್ ಲಾಬಿ
ಗುನ್ನ ಪ್ರತಿ ಗುನ್ನಕ್ಕೆ ನಾಯಕರೇ ತಬ್ಬಿಬ್ಬು !

Malenadu Mirror Desk

ಕಾರು ಪಲ್ಟಿ- ಸ್ಥಳದಲ್ಲೇ ಲೋಕೋಪಯೋಗಿ ಇಲಾಖೆ ಅಧಿಕಾರಿ ಸಾವು.

Malenadu Mirror Desk

ಮತ್ತೆ ಏರಿದ ಕೊರೊನ, ಯಾವ ತಾಲೂಕಲ್ಲಿ ಎಷ್ಟು ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.