Malenadu Mitra
ರಾಜ್ಯಶಿವಮೊಗ್ಗ

ಸಾಹಿತ್ಯ ಬದಕು ರೂಪಿಸುತ್ತದೆ : ಸದಾಶಿವ ಸೊರಟೂರು

ಶಿವಮೊಗ್ಗ: ಸಾಹಿತ್ಯ ಬದಕು ರೂಪಿಸುತ್ತದೆ, ವಿವೇಕನ್ನು ವಿಸ್ತರಿಸುತ್ತದೆ ಎಂದು ಸಾಹಿತಿ ಸದಾಶಿವ ಸೊರಟೂರು ಹೇಳಿದರು.
ಅವರು ಸಹ್ಯಾದ್ರಿ ಕಲಾ ಕಾಲೇಜಿನ ಪಾಥ್‌ವೇಸ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ವೇದಿಕೆ, ಕನ್ನಡ ವಿಭಾಗ ಮತ್ತು ಸಮುದಾಯ, ಶಿವಮೊಗ್ಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ’ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮವನ್ನು ಕವಿತೆ ಓದುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ನಮ್ಮ ವಿದ್ಯಾರ್ಥಿಗಳು ತಲ್ಲಣಗಳ ಲೋಕದಲ್ಲಿದ್ದಾರೆ. ನಮ್ಮ ಮಕ್ಕಳು ವೇಗದ ಬದಕನ್ನು ಅಪ್ಪಿಕೊಳ್ಳುತ್ತಿದ್ದಾರೆ. ೩೦ ಸೆಕೆಂಡ್‌ನ ರೀಲ್ಸ್ ಗಳಿಗೆ ಸಿಕ್ಕಿ ಹಾಕಿ ಕೊಂಡಿದ್ದಾರೆ. ಅವರನ್ನು ಮತ್ತೆ ಸಾಹಿತ್ಯದ ಕಡೆ ಕರೆ ತರಬೇಕಾಗಿದೆ ಎಂದರು.
ವಿ.ವಿ ಗಳು ಕೂಡ ಸಾಹಿತ್ಯದ ಬಗ್ಗೆ ಒಲವು ತೋರುತ್ತಿಲ್ಲ. ಸಹ್ಯಾದ್ರಿ ಕಾಲೇಜ್‌ನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸ್ವಾಗತ. ತಮ್ಮ ಮೆಚ್ಚಿನ ಪುಸ್ತಕದ ಬಗ್ಗೆ ಮಾತನಾಡುವಾಗ ವಿದ್ಯಾರ್ಥಿಗಳಲ್ಲಿ ವಿಮರ್ಶಾ ಪ್ರಜ್ಞೆ ಮೂಡುತ್ತದೆ ಎಂದು ಅವರು ಸಹ್ಯಾದ್ರಿ ಕಾಲೇಜು ಸಾಹಿತ್ಯ ಕಲೆ ಸಂಸ್ಕೃತಿ ಗಳ ಉಗ್ರಾಣ ಎಂದರು.
ಕಾರ್ಯಕ್ರಮದ ಸಂಚಾಲಕ ಡಾ. ಪ್ರಕಾಶ್ ಮರ್ಗನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಪುಸ್ತಕಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಓದುವ ಸಂಸ್ಕೃತಿ ಬೆಳೆಯುತ್ತದೆ .ಮಕ್ಕಳನ್ನು ಓದಿನ ಧ್ಯಾನ ಕ್ಕೆ ಕರೆದು ಕೊಂಡು ಹೋಗುವುದು ಕಷ್ಟದ ಕೆಲಸ .ಇಂತಹ ಸವಾಲು ಗಳ ನಡುವೆ ಮಕ್ಕಳು ಪುಸ್ತಕ ಪ್ರೇಮ ಬೆಳಿಸಿ ಕೊಳ್ಳುತ್ತಿರುವುದು ಹರ್ಷ ತಂದಿದೆ ಎಂದರು.
ಪ್ರಾಂಶುಪಾಲ ಡಾ. ಸಿರಾಜ್ ಅಹಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುತ್ತವೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಹಿತ್ಯ ಕೃತಿಗಳನ್ನು ಓದಬೇಕು. ಓದು ಮರೆತರೆ ಬದುಕಿನ ಮೌಲ್ಯ ಗಳನ್ನೆ ಕಳೆದು ಕೊಳ್ಳುತ್ತೆವೆ,ಓದ ಸ್ವರ್ಗದ ದಾರಿ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹಾಲಮ್ಮ ಎಂ ಮಾತನಾಡಿ, ಒಂದು ಒಳ್ಳೆಯ ಪುಸ್ತಕ ಸಂವೇದನೆ ಯನ್ನು ನೀಡುತ್ತದೆ,ಜಡತ್ವದಿಂದ ಹೊರ ಬರಲು ಸಹಕಾರಿ ಯಾಗುತ್ತದೆ,ಆದರೆ ಇಂದು ಓದುಗರರಗಿಂತ ,ಬರಹಗಾರರೇ ಹೆಚ್ಚಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕೀರ್ತನ, ವೀಣಾ ಜಿ. ನಾಯ್ಕ, ರವಿಚಂದ್ರ ಸೇರಿದಂತೆ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಪ್ರಬಂಧ ಮಂಡಿಸಿದರು. ಸಂವಾದದಲ್ಲಿ ೧೧ ವಿದ್ಯಾರ್ಥಿಗಳು ಪಾಲ್ಗೊಂಡರು.
ವೇದಿಕೆಯಲ್ಲಿ ಸಮುದಾಯದ ಲಕ್ಷ್ಮೀನಾರಾಯಣ ರಾವ್,., ಡಾ.ಜಿ ಕೆ ಪ್ರೇಮ, ಡಾ.ವಸುಂಧರ ಮುಂತಾವರು ಉಪಸ್ಥಿತರಿದ್ದರು. ಶರಣ ಸ್ವಾಗತಿಸಿದರು ತಿಪ್ಪೇಶ್ ಅತಿಥಿಗಳ ಪರಿಚಯಿಸಿದರು, ಗೌರಿ ನಿರೂಪಿಸಿದರು.

Ad Widget

Related posts

ಗ್ರಾಮಪಂಚಾಯಿತಿ ಹಣ ಖರ್ಚಿನ ನಿಯಮ ಸಡಿಲ: ಸಚಿವ ಈಶ್ವರಪ್ಪ

Malenadu Mirror Desk

ಶಿವಮೊಗ್ಗದಲ್ಲಿ 1000 ತಲುಪಿದ ಕೊರೊನ ಸಾವು

Malenadu Mirror Desk

ಭರದ ಮತದಾನ, ಭರವಸೆಯಲ್ಲಿ ಅಭ್ಯರ್ಥಿಗಳು

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.