Malenadu Mitra
ರಾಜ್ಯಶಿವಮೊಗ್ಗ

ಸೇವೆ ಮುಗಿಸಿ ಬಂದ ಯೋಧರಿಗೆ ಅದ್ಧೂರಿ ಸ್ವಾಗತ


ಶಿವಮೊಗ್ಗ: ಭಾರತೀಯ ಸೇನೆಯಲ್ಲಿ ೨೪ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದ ಇಬ್ಬರು ಯೋಧರಿಗೆ ಕುಟುಂಬದವರು, ಸ್ನೇಹಿತರು, ಮಾಜಿ ಯೋಧರು ಅದ್ಧೂರಿ ಸ್ವಾಗತ ನೀಡುವ ಮೂಲಕ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು.

ರೈಲ್ವೆ ನಿಲ್ದಾಣದಲ್ಲಿ ಗುರುವಾರ ರಾತ್ರಿ ಬೆಂಗಳೂರು – ತಾಳಗುಪ್ಪ ರೈಲಿನಲ್ಲಿ ಇಬ್ಬರು ಯೋಧರು ತವರಿಗೆ ಮರಳಿದರು. ಯೋಧರು ರೈಲಿನಿಂದ ಇಳಿಯುತ್ತಿದ್ದಂತೆ ಕುಟುಂಬದವರು, ಸ್ನೇಹಿತರು ಘೋಷಣೆ ಕೂಗಿದರು. ಡೊಳ್ಳು ಬಾರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸ್ವಾಗತಿಸಿದರು. ಯೋಧರ ಸ್ವಾಗತಕ್ಕೆ ಸ್ನೇಹಿತರೊಂದಿಗೆ ಸಹ ಪ್ರಯಾಣಿಕರು ಸೇರಿಕೊಂಡು ಯೋಧರ ಜಯಘೋಷ ಕೂಗಿದರು. ಶಿವಮೊಗ್ಗದ ಸೀಗೆಹಟ್ಟಿಯ ವಿಜಯಕುಮಾರ್‌ ಮತ್ತು ವಿದ್ಯಾನಗರದ ಶಿವಾಜಿನಾಯ್ಕ್‌ ಈ ಗೌರವಕ್ಕೆ ಪಾತ್ರರಾದ ಯೋಧರಾಗಿದ್ದಾರೆ.

ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ.ಮಧುಸೂದನ್, ರಾಷ್ಟ್ರಭಕ್ತರ ಬಳಗದ ಕೆ.ಇ. ಕಾಂತೇಶ್ ,  ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವಕುಮಾರ್.ಡಿ.ಎಸ್, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಹಿರಿಯ ಪತ್ರಕರ್ತರಾದ ಜೇಸುದಾಸ್ ಪಿ, ಗಣೇಶ್ ನಾವುಡ, ಗಂಗಾಧರ್.ಎ, ಶಿವಮೊಗ್ಗ ನಾಗರಾಜ್, ರಘು, ನವೀನ್ ಪುರದಾಳ್, ಸಾವಂತ್, ಕೊಟ್ರೇಶ್, ಯುವಮುಖಂಡ ಹರೀಶ್‌, ಸೇರಿ ಹಲವರು ಇದ್ದರು.

Ad Widget

Related posts

ಸುರಿವ ಮಳೆಯಲ್ಲೇ ಸ್ವಾತಂತ್ರ್ಯ ನಡಿಗೆ ಆರತಿ ಬೆಳಗಿ ,ರಾಖಿ ಕಟ್ಟಿ ಮಧುಬಂಗಾರಪ್ಪರಿಗೆ ಶುಭ ಹಾರೈಸಿದ ಮಹಿಳೆಯರು, ವಿದ್ಯಾರ್ಥಿನಿಯರು

Malenadu Mirror Desk

ರೈತರಿಗೆ ಶಕ್ತಿ ತುಂಬುವ ಕೆಲಸ: ಸಂಸದ ಬಿ.ವೈ ರಾಘವೇಂದ್ರ

Malenadu Mirror Desk

ರಷ್ಯಾ ಯುದ್ಧದಾಹಕ್ಕೆ ಕರುನಾಡ ಕುಡಿ ಬಲಿ,ಹಾವೇರಿಯ ಮೆಡಿಕಲ್ ವಿದ್ಯಾರ್ಥಿ ನವೀನ್ ಸಾವು

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.