Malenadu Mitra
ರಾಜ್ಯಶಿವಮೊಗ್ಗ

ಹಾಲಪ್ಪ ವಿರುದ್ಧ ಮಾನ ನಷ್ಟ ಮೊಕದ್ದಮೆ

ಸಾಗರ: ಸರಕಾರಿ ಬಾವಿ ಮುಚ್ಚಿರುವೆ ಎಂದು ಅಪಪ್ರಚಾರ ಮಾಡುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಲಿದರು.
ತಮ್ಮ ನಿವಾಸದ ಮುಂಬಾಗ ಕರೆದ ಪತ್ರಿಕಾಗೋಷ್ಟಿಯಲ್ಲಿ ಬುಧವಾರ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ‌ ಸಂಸ್ಥೆಯವರು ಇಲ್ಲಿ ಗ್ರಂಥಾಲಯ ನಡೆಸುತಿದ್ದರು. ಅವರೇ ತೆಗೆಸಿದ್ದ ಬಾವಿ ಹಲವು ವರ್ಷಗಳಿಂದ ಜನಬಳಕೆಯಲ್ಲಿರಲಿಲ್ಲ. ಸಂಸ್ಥೆ ಕೋರಿಕೆಯಂತೆ ಬದಲಿಯಾಗಿ ಬೇರೆ ಕಡೆ ಬಾವಿ ತೆಗೆಸಿಕೊಟ್ಟು ನಿವೇಶನದಲ್ಲಿದ್ದ ಬಾವಿಯನ್ನು ನಗರಸಭೆಯವರು ಮುಚ್ಚಿದ್ದಾರೆ. ಆದರೆ ಹಾಲಪ್ಪ ಅವರು ಸರಕಾರಿ ಬಾವಿ ಮುಚ್ಚಲಾಗಿದೆ ಎಂದು ಅಪಪ್ರಚಾರ ಮಾಡುತಿದ್ದಾರೆ. ವಾಸ್ತು ಹೆಸರಲ್ಲಿ ಈ ರೀತಿ ಮಾಡಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುತಿದ್ದಾರೆ. ಈಗ ವಿವೇಕಾನಂದ ಸಂಸ್ಥೆಯವರೇ ಬಂದು ಅವರ ಕೋರಿಕೆಯಂತೆ ಬಾವಿ ಮುಚ್ಚಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಬೇಳೂರು ಸ್ಪಷ್ಟನೆ ನೀಡಿದರು.
ಹಾಲಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿದ್ದಾರೆ. ಚುನಾವಣೆ ಸಂದರ್ಭವಾದ್ದರಿಂದ ಹಾಲಪ್ಪ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಮಾನ ಹಾನಿ ಹೇಳಿಕೆ ನೀಡಿರುವ ಹಾಲಪ್ಪ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲಿಸುವೆ ಎಂದು ಬೇಳೂರು ಹೇಳಿದರು.
ಎಸ್ಐಆರ್ ಪ್ರಕ್ರಿಯೆ ಬಗ್ಗೆ ಬಿಜೆಪಿ ಇಡೀ ದೇಶದಲ್ಲಿ ಗೊಂದಲ ಮೂಡಿಸಿದೆ ಮತದಾರನ ಹಕ್ಕು ಕಸಿಯುವ ಕೆಲಸ ಮಾಡಲಾಗ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದ ಹಕ್ಕು ಪಡೆಯಲು ಇಷ್ಟು ದಾಖಲೆ ಕೊಡಬೇಕಾ ಎಂದು ಪ್ರಶ್ನಿಸಿದ ಅವರು, ಈ ದೇಶದ ಪ್ರಜೆಗೆ ಹಕ್ಕು ಕೊಡದೇ ಇರುವುದು ಈ ದೇಶದ ದುರಂತ. ನಮ್ಮ ರಾಷ್ಟ್ರೀಯ ನಾಯಕರು ದೆಹಲಿಯಲ್ಲಿ ಪ್ರತಿಭಟಿಸಿದ್ದಾರೆ. ಸಿಎಂ ನೇತೃತ್ವದಲ್ಲಿ ಕೂಡ ಹೋರಾಟ ಮಾಡಲಾಗಿದೆ ಎಂದರು.
ಫಾರಂ ನಂ-7 ಎಲ್ಲಿಂದ ಬಂತೋ ಗೊತ್ತಿಲ್ಲ. ಬಂಡಲ್ ಗಟ್ಟಲೇ ಬರುತ್ತಿದೆ. ಫಾರಂ ನಂ. 7 ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸಲಾಗಿದೆ ಎಸ್ಸಿ- ಎಸ್ಟಿ ಹಾಗೂ ಮುಸ್ಲಿಂ ವೋಟ್ ತೆಗೆಯಲು ದೇಶದಲ್ಲಿ ಕುತಂತ್ರ ಮಾಡಲಾಗಿದೆ. ದೇಶದಲ್ಲಿ ರಾಜಕೀಯ ಪ್ರಭಾವ ಬೆಳೆಸಲು ಕುತಂತ್ರ ನಡೆದಿದೆ. ನ್ಯಾಯಾಲಯ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದೆ ರಾಷ್ಟ್ರದ್ರೋಹದ ಕೆಲಸವನ್ನ ಕೇಂದ್ರ ಸರ್ಕಾರ ಮಾಡಿದೆ ಎಂದು ಬೇಳೂರು ಆರೋಪಿಸಿದರು.

ಹಣದ ದರ್ಬಾರು ಯಾರದ್ದು ?
ಹಣದ ದರ್ಬಾರಿನಿಂದ ಡಿ.ಕೆ. ಶಿವಕುಮಾರ್ ವರ್ತಿಸುತ್ತಿದ್ದಾರೆಂದು ಯಡಿಯೂರಪ್ಪ ಹೇಳಿದ್ದಾರೆ.
ಇವರು ಅಪ್ಪ- ಮಕ್ಕಳು ದುಡ್ಡು ಮಾಡಿಲ್ವಾ ಎಂದು ಪ್ರಶ್ನಿಸಿದ ಬೇಳೂರು, ಪಾಪ ಇವತ್ತು ಅವರು ಗಂಜಿ ಕುಡಿತಾ ಇರಬೇಕು ಅನ್ಸುತ್ತೇ. ಎಂದು ವ್ಯಂಗ್ಯವಾಡಿದರು.
ನಮ್ಮ ಸಿಎಂ ಡಿ.ಕೆ. ಶಿವಕುಮಾರ್ ಅವರು ಜನರ ಸೇವೆ ಮಾಡುವಂತಹವರು. ರಾಜ್ಯದ ಜನ ಅವರನ್ನ ಕನಕಪುರದ ಬಂಡೆ ಎಂದು ಕರೆಯುತ್ತಾರೆ. ಆ ಬಂಡೆಯನ್ನ ಕೆತ್ತಿ, ಮೂರ್ತಿ ಮಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿದ್ದಾರೆ ಸೌಮ್ಯ ಸ್ವಭಾವದ ಜನರ ಸೇವೆ ಮಾಡುವ ಮುಖ್ಯಮಂತ್ರಿಯಾಗಿದ್ದಾರೆ.. ನಾನು ಪ್ರಜಾ ಸೇವಕ‌ ಎಂದು ಅವರೇ ಹೇಳಿದ್ದಾರೆ. ಇದನ್ನು ಯಡಿಯೂರಪ್ಪ ಅರ್ಥಮಾಡಿಕೊಳ್ಳಲಿ ಎಂದು ಬೇಳೂರು ಹೇಳಿದರು.

ಗೊಬ್ಬರದ ದರದಂತೆ ಹಿಂಡಿ, ಬೂಸ ದರ ಕೂಡ ಏರಿಕೆಯಾಗಿದೆ. ಒಂದು ಲೀಟರ್ ನೀರಿಗೆ 20 ರೂ ಕೊಡ್ತೀರಿ. ರೈತರು ಕಷ್ಟ ಪಟ್ಟು ಗೋ ಸಾಕಣೆ‌ ಮಾಡಿ ಹಾಲು ಉತ್ಪಾದನೆ ಮಾಡ್ತಾರೆ. ಸಂಕಷ್ಟದಲ್ಲಿರುವ ಹಾಲು ಉತ್ಪಾದಕರ ನೆರವಿಗೆ ಸರಕಾರ ಬಂದಿದೆ.
–ಬೇಳೂರು ಗೋಪಾಲಕೃಷ್ಣ, ಶಾಸಕರು.


Ad Widget

Related posts

ಶಿವಮೊಗ್ಗದಲ್ಲಿ 20 ಸಾವು, 705ಮಂದಿ ಡಿಸ್ಚಾರ್ಜ್

Malenadu Mirror Desk

ಬಂಗಾರಪ್ಪ ಸ್ಮರಣೆ ಕಾರ್ಯಕ್ರಮ

Malenadu Mirror Desk

ಆಶ್ರಯ ಮನೆ ಕಾಮಗಾರಿ ಚುರುಕುಗೊಳಿಸಿ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.