Malenadu Mitra
ರಾಜ್ಯಶಿವಮೊಗ್ಗ

ಬರ್ತ್‌ಡೇ ಬಾಯ್ ಬೇಳೂರು, ವಿಶೇಷ ಏನೇನಿತ್ತು ಗೊತ್ತಾ ?

ಕಲರ್‌ಫುಲ್ ರಾಜಕಾರಣಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು. ರಾತ್ರಿಯಿಂದಲೇ ನೆರೆದಿದ್ದ ಅವರ ಅಭಿಮಾನಿಗಳು ತಮ್ಮ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು. ಬೆಳಗ್ಗೆ ಸಾಗರ ,ಹೊಸನಗರ ಸೇರಿದಂತೆ ತಾಲೂಕಿನ ಆಸ್ಪತ್ರೆಗಳಲ್ಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿದ ಅಭಿಮಾನಿಗಳು, ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಾಯಕನಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಮಾಜಿ ಶಾಸಕರು ವರದಳ್ಳಿಯ ಗೋ ಶಾಲೆಗೆ ಮೇವು ನೀಡುವ ಮೂಲಕ ತಮ್ಮ ಗೋ ಪ್ರೇಮ ಮೆರೆದರು.
ಕ್ಷೇತ್ರವ್ಯಾಪ್ತಿಯ ಅಭಿಮಾನಿಗಳು ದಿನವಿಡೀ ಬಂದು ತಮ್ಮ ನಾಯಕನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರ ಹಾಕಿ ಫೋಟಿ ಕ್ಲಿಕ್ಕಿಸಿಕೊಳ್ಳುತಿದ್ದುದು ಸಾಮಾನ್ಯವಾಗಿತ್ತು. ರಾಜ್ಯ ಕಾಂಗ್ರೆಸ್‌ನ ಹಲವು ಮುಖಂಡರು ಬೇಳೂರು ಅವರಿಗೆ ದೂರವಾಣಿ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಸಂಜೆ ಸಾಗರದ ಗಾಂಧಿ ಮೈದಾನದಲ್ಲಿ ಸರಿಗಮಪ ಖ್ಯಾತಿಯ ಕಲಾವಿದರಿಂದ ಏರ್ಪಡಿಸಿದ್ದ ಮ್ಯೂಜಿಕಲ್ ನೈಟ್‌ಗೆ ಮಳೆ ಅಡಚಣೆ ಮಾಡಿತಾದರೂ ಮಳೆ ನಿಂತ ಬಳಿಕ ಅಭಮಾನಿಗಳು ಸಂಗೀತ ಸಾಗರದಲ್ಲಿ ಮಿಂದೆದ್ದರು
ರಾಜಕೀಯವಾಗಿ ಮುಗಿಸಲಾಗಲ್ಲ:
ಮಹಿಳಾ ಕಾಂಗ್ರೆಸ್‌ವತಿಯಿಂದ ಆಯೋಜಿದ್ದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬೇಳೂರು,ರಾಜಕೀಯವಾಗಿ ನನ್ನನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸಾಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸುತ್ತೇನೆ. ಹಾಲಿ ಶಾಸಕರು ಏನೇ ಅಪಪ್ರಚಾರ ಮಾಡಿದರೂ, ಜನ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ವಿಭಿನ್ನ ರಾಜಕೀಯ ಪಕ್ಷದಲ್ಲಿದ್ದಾಗ ರಾಜಕಾರಣಿಗಳು ಒಬ್ಬರನ್ನೊಬ್ಬರು ಬಯ್ಯುವುದು ಸಾಮಾನ್ಯ. ಅದನ್ನೇ ಶಾಸಕರು ಬಳಸಿಕೊಂಡು ಅಪಪ್ರಚಾರ ಮಾಡ್ತಿದಾರೆ ಎಂದು ದೂರಿದರು.
ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಣ ಖರ್ಚು ಮಾಡಿ ಮಾಡುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು
ಕಾಂಗ್ರೇಸ್ ಗ್ರಾಮಾಂತರ ಘಟಕ ಅಧ್ಯಕ್ಷೆ ಸುಮಂಗಲ ರಾಮಕೃಷ್ಣ, ನಗರ ಘಟಕದ ಅಧ್ಯಕ್ಷೆ ಮಧುಮಾಲತಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಿತಾಕುಮಾರಿ, ನಗರಸಭಾ ಸದಸ್ಯರಾದ ಎನ್.ಲಲಿತಮ್ಮ, ಗಣಪತಿ ಮಂಡಗಳಲೆ, ಪ್ರಮುಖರಾದ ಪರಿಮಳ, ಉಷಾ ಎನ್. ವೀಣಾ ಪರಮೇಶ್ವರ್, ಸರಸ್ವತಿ ಕುಮಾರಸ್ವಾಮಿ ಮತ್ತಿತರರಿದ್ದರು.

ಅಭಿಮಾನಿಗಳ ಶುಭಾಶಯ ಸಂಭ್ರಮದ ಚಿತ್ರಾವಳಿ:

ವರದಳ್ಳಿಯ ಗೋ ಶಾಲೆಗೆ ಮೇವು
Ad Widget

Related posts

ನೂತನ ಶಿಕ್ಷಣ ನೀತಿಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಳ : ಸಚಿವ ಡಾ.ಅಶ್ವಥ್ ನಾರಾಯಣ

Malenadu Mirror Desk

ಜನರಿಗೆ ಉದ್ಯೋಗ, ನೆಮ್ಮದಿ ನೀಡುವುದು ನಮ್ಮ ಆದ್ಯತೆ
ವಾಣಿಜ್ಯ ಸಂಘದ ಸಂವಾದದಲ್ಲಿ ವಿಧಾನ ಸಭೆ ಚುನಾವಣೆ ಅಭ್ಯರ್ಥಿಗಳ ಅಭಯ

Malenadu Mirror Desk

ನಮಗೇ ಹೆಚ್ಚು ಜಯ, ಚೀಟಿ ಮೂಲಕ ಮೀಸಲು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.