Malenadu Mitra
ರಾಜ್ಯಶಿವಮೊಗ್ಗ

ಶಿವಮೊಗ್ಗದಲ್ಲಿ 12 ಸಾವು, ಸೋಂಕು ಎಷ್ಟು ಗೊತ್ತಾ ?

ಮಲೆನಾಡಿನಲ್ಲಿ ಕೊರೊನ ಅಟ್ಟಹಾಸ ಮುಂದುವರಿದಿದ್ದು, ಭಾನುವಾರ ಒಂದೇ ದಿನ ಶಿವಮೊಗ್ಗ ಜಿಲ್ಲೆಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ದಿನವೊಂದರಲ್ಲಿ ಇಷ್ಟು ಸಾವಾಗಿರುವುದು ಇದೇ ಮೊದಲಾಗಿದೆ. 765 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಲಾಕ್ ಡೌನ್ ನಡುವೆಯೇ ಕೊರೊನ ಅಬ್ಬರ ಮುಂದುವರಿದಿದೆ. ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 398ಕ್ಕೆ ಏರಿದೆ. ಶಿವಮೊಗ್ಗ ತಾಲೂಕಿನಲ್ಲಿ 179 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 128,ಶಿಕಾರಿಪುರ 74,ತೀರ್ಥಹಳ್ಳಿಯಲ್ಲಿ 83 ,ಸೊರಬ 129,ಸಾಗರ 89,ಹೊಸನಗರ 65 ಹಾಗೂ ಇತರೆ ಜಿಲ್ಲೆಗಳ 18 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ. 32 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 3170 ಸಕ್ರಿಯ ಪ್ರಕರಣಗಳಿವೆ. ಭಾನುವಾರ 422 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Ad Widget

Related posts

ಶಿಕಾರಿಪುರಕ್ಕೆ ಸರ್ಕಾರಿ ಬಸ್ ಬೇಕು

Malenadu Mirror Desk

ಶಿವಮೊಗ್ಗದಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಜನಾಶೀರ್ವಾದ ಯಾತ್ರೆ

Malenadu Mirror Desk

ಜಾಹಿರಾತು ತಾರತಮ್ಯ ಖಂಡಿಸಿ ಸಂಪಾದಕರ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.