Malenadu Mitra
ರಾಜ್ಯಶಿವಮೊಗ್ಗಸಾಗರ

ಶಿವಮೊಗ್ಗದಲ್ಲಿ ಕೊರೊನ ಬ್ಲಾಸ್ಟ್ ,1596 ಸೋಂಕಿತರು,10 ಸಾವು, 915 ಮಂದಿ ಗುಣಮುಖ

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಮಂಗಳವಾರ ಕೊರೊನ ಬ್ಲಾಸ್ಟ್ ಆಗಿದ್ದು, ಸೋಂಕಿತರ ಸಂಖ್ಯೆ ದಾಖಲೆಯ 1596ಕ್ಕೇರಿದೆ. ಒಂದೇ ದಿನ ಇಷ್ಟು ಪ್ರಮಾಣದ ಸೋಂಕು ವರದಿಯಾಗಿದ್ದು, ಇದೇ ಮೊದಲಾಗಿದೆ. 10,ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. 915 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 516ಕ್ಕೆ ಏರಿದೆ. ಶಿವಮೊಗ್ಗ ತಾಲೂಕಿನಲ್ಲಿ 484 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 290,ಶಿಕಾರಿಪುರ 158 , ತೀರ್ಥಹಳ್ಳಿಯಲ್ಲಿ 123 ,ಸೊರಬ 144,ಸಾಗರ 260,ಹೊಸನಗರ 95 ಹಾಗೂ ಇತರೆ ಜಿಲ್ಲೆಗಳ 42 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ. 81 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 6044 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಆಸ್ಪತ್ರೆಗಳಲ್ಲಿ ಒತ್ತಡ

ಜಿಲ್ಲೆಯಲ್ಲಿ ಕೊರೊನ ಪ್ರಕರಣಗಳು ಹೆಚ್ಚುತ್ತಿದ್ದಂತೆ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಈಗಾಗಲೇ ಬೆಡ್‍ಗಳು ಭರ್ತಿಯಾಗಿವೆ. ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆ ಕಡಿಮೆಯಾಗಿದ್ದು, ಸೇರುವವ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, ಇರುವ ಸಿಬ್ಬಂದಿಗಳಿಗೂ ಕೆಲಸದ ಒತ್ತಡ ಹೆಚ್ಚಾಗಿದೆ ಎನ್ನಲಾಗಿದೆ.

Ad Widget

Related posts

ಈಡಿಗರ ಸೊಸೈಟಿ ಕೇಶವಮೂರ್ತಿ ನಿಧನ

Malenadu Mirror Desk

ಚಡ್ಡಿ ಸುಟ್ಟರೆ ಕಾಂಗ್ರೆಸ್ ನಾಶ, ಏನಿದು ಈಶ್ವರಪ್ಪರ ವರಾತ , ಹಿರಿಯ ನಾಯಕರಾಗಿ ಸಿದ್ದರಾಮಯ್ಯ ವಿರುದ್ಧ ಬಳಸಿದ ಭಾಷೆ ಸರೀನಾ……..

Malenadu Mirror Desk

ಪುನೀತ್ ಸ್ಮರಣೆ: ಊರಿಗೇ ಊಟ ಹಾಕಿದ ಹಳ್ಳಿಗರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.