ಜನಸ್ವರಾಜ್ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.
15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಹೆಚ್ಚಿನ ಅಂತರದಲ್ಲಿ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಲುವ ಹತಾಷೆಯಿಂದ ಅಸಂಬದ್ದವಾಗಿ ಮಾತನಾಡುತ್ತಿರುವುದು ದುರದೃಷ್ಟಕರ.ಸಿದ್ದರಾಮಯ್ಯ ಹೇಳಿಕೆಯಲ್ಲಿ ರಾಜಕೀಯ ಮುಸ್ಸದ್ದಿತನವಿಲ್ಲ. 4 ಬಾರಿ ಮುಖ್ಯಮಂತ್ರಿ 2 ಬಾರಿ ಪ್ರಧಾನಿಯಾದ ಜನಾದೇಶ ಪಡೆದ ವಿಶ್ವಮಾನ್ಯ ನಾಯಕರಾದ ಮೋದಿಯರನ್ನು ಹೆಬ್ಬೆಟ್ಟಿನ ಪ್ರಧಾನಿ ಎನ್ನುತ್ತಾರೆ. ಜನಾದೇಶ ಯಾತ್ರೆಯನ್ನು ಜನ ಬರ್ಬಾತ್ ಯಾತ್ರೆ ಎಂದು ಲೇವಡಿಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ ಎಂದರು.
ಸಾಕ್ಷ್ಯಾದಾರವಿಲ್ಲದೆ ಬರಿ ಪ್ರಚಾರಕ್ಕಾಗಿ ಆಪಾದನೆ ಮಾಡುತ್ತಾರೆ ಯಾವುದಕ್ಕೂ ಸಾಕ್ಷಿ ಒದಗಿಸಲ್ಲ ಆಧಾರ ರಹಿತ ಆರೋಪವನ್ನು ಮಾಡಿ ಪ್ರಚಾರದ ಭ್ರಮೆಯಲ್ಲಿದ್ದಾರೆ, ಮುಂಬರುವ 5 ರಾಜ್ಯಗಳ ಚುನಾವಣೆಯಲ್ಲಿ 4 ರಲ್ಲಿ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣ ಪೂರ್ವ ಸಮೀಕ್ಷೆ ಹೇಳಿದೆ. ಪಂಜಾಬ್ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದು ಬಿಜೆಪಿ ತನ್ನ ಬಲ ವೃದ್ಧಿಸಲಿದೆ ಎಂದರು.
ಕೃಷಿ ಮಸೂದೆ ಹಿಂಪಡೆಯಲು ಚುನಾವಣೆ ಕಾರಣವಲ್ಲ. ರೈತರ ಹೆಸರಿನಲ್ಲಿ ದೇಶ ದ್ರೋಹಿಗಳ ಷಡ್ಯಂತ್ರಮಾಡಿ ಅರಾಜಕತೆಯನ್ನು ಸೃಷ್ಟಿ ಮಾಡಿ ದೇಶವನ್ನು ಒಡೆಯುವ ತುಕುಡೆ ಗ್ಯಾಂಗ್ ಗಳ ಚಿಂತನೆಗೆ ಬ್ರೇಕ್ ಹಾಕಲು ಮಸೂದೆ ಹಿಂಪೆದಿದ್ದಾರೆ. ಪ್ರಧಾನಿ ಕಾರ್ಯ ವೈಖರಿ ಬಗ್ಗೆ ಜನರಿಗೆ ವಿಸ್ವಾಸವಿದೆ. ದೇಶ ವಿರೋಧಿಗಳ ಕೈಗೆ ಭಾವನಾತ್ಮಕ ಅಸ್ತ್ರಗಳು ಸಿಗಬಾರದು ಎಂಬ ದೃಷ್ಟಿಯಿಂದ ದೇಶ ಹಿತಕ್ಕಾಗಿ ಮಸೂದೆಯನ್ನು ಹಿಂಪಡೆಯಲಾಗಿದೆ ಅಷ್ಟೆ. ಈ 3 ಮಸೂದೆಯಲ್ಲಿ ರೈತರಿಗೆ ಹಾನಿಯಾಗುವ ಯಾವುದೇ ಅಂಶವಿಲ್ಲ ಬದಲಿಗೆ ಅನುಕೂಲವಿದೆ ಎಂದರು.
ಇವತ್ತು ಫಸಲ್ ವಿಮಾ ಯೋಜನೆ ಸೇರಿದಂತೆ ರೈತರಿಗೆ ಬೆಂಬಲ ಬೆಲೆ ಸಹಾಯ ಧನ ನಿರಂತರ ವಿದ್ಯುತ್, ಬೆಳೆಗೆ ಒಳ್ಳೆಯ ಬೆಲೆ ಎಲ್ಲವನ್ನು ಕೇಂದ್ರ ಸರ್ಕಾರ ನೀಡಿದೆ ಗುಣಮಟ್ಟದ ವಿದ್ಯುತ್ ನೀಡಿದೆ, ರೈತರಿ ಕಾಯಕಲ್ಪವಾಗುವ ಯಾವುದೆ ಯೋಜನೆ ಯಿಂದ ಸರ್ಕಾರ ಹಿಂದೆ ಸರಿಯುವುದಿಲ್ಲ. ಬರೇ10ತಿಂಗಳಲ್ಲಿ 3 ಲಸಿಕೆ ಕಂಡುಹಿಡಿದು ಪ್ರಪಂಚದ ಯಾವುದೇ ದೇಶ ಮಾಡದ 100 ಕೋಟಿ ಜನರಿಗೆ ಲಸಿಕೆ ನೀಡಿದ ಸರ್ಕಾರ ನಮ್ಮದು. ರೈತರ ಮೇಲೆ ದೌರ್ಜನ್ಯ ಎಂದು ಪ್ರತಿಬಿಂಬಿಸಿ ಅರಾಜಕತೆ ಸೃಷ್ಟಿಸುವ ಹುನ್ನಾರವನ್ನು ದೇಶದ ಜನ ಅರಿತ್ತಿದ್ದಾರೆ. ಶಿವಮೊಗ್ಗ ಸೇರಿದಂತೆ 15 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದು ಎಂದರು.
ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಪ್ರಭಾರಿ ಗಿರೀಶ್ ಪಟೇಲ್, ಶಾಸಕ ಹರತಾಳು ಹಾಲಪ್ಪ, ಡಿ.ಎಸ್ ಅರುಣ್, ನಗರಾಧ್ಯಕ್ಷ ಜಗದೀಶ್, ಮೇಯರ್ ಸುನೀತಾ ಅಣ್ಣಪ್ಪ ಪ್ರಮುಕರಾದ ಶಿವರಾಜ್, ಧರ್ಮಪ್ರಸಾದ್, ಶ್ರೀನಾಥ್, ಸತೀಶ್, ಹೃಷಿಕೇಶ್ ಪೈ, ಅಣ್ಣಪ್ಪ,ಮಧುಶೂದನ್ ಮೊದಲಾದವರು ಇದ್ದರು.
ಸಾಕ್ಷ್ಯಾದಾರವಿಲ್ಲದೆ ಬರಿ ಪ್ರಚಾರಕ್ಕಾಗಿ ಆಪಾದನೆ ಮಾಡುತ್ತಾರೆ ಯಾವುದಕ್ಕೂ ಸಾಕ್ಷಿ ಒದಗಿಸಲ್ಲ ಆಧಾರ ರಹಿತ ಆರೋಪವನ್ನು ಮಾಡಿ ಪ್ರಚಾರದ ಭ್ರಮೆಯಲ್ಲಿದ್ದಾರೆ
– ಸಿ.ಟಿ ರವಿ, ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
–