Malenadu Mitra
ರಾಜ್ಯಶಿವಮೊಗ್ಗಹೊಸನಗರ

ಶಿವಮೊಗ್ಗದಲ್ಲಿ 1024 ಮಂದಿ ಡಿಸ್ಚಾರ್ಜ್ 8 ಸಾವು

ಶಿವಮೊಗ್ಗದಲ್ಲಿ ಕೊರೊನ ಆತಂಕ ಯಥಾಸ್ಥಿತಿಯಲ್ಲಿದ್ದು, ಶನಿವಾರ 8 ಮಂದಿ ಸೋಂಕಿತರು ನಿಧನರಾಗಿದ್ದಾರೆ. ಒಟ್ಟು 1024ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 607 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈವರೆಗೆ ಕೊರೊನದಿಂದ ಸಾವಿಗೀಡಾದವರ ಸಂಖ್ಯೆ 854ಕ್ಕೇರಿದೆ.
ಶಿವಮೊಗ್ಗ ತಾಲೂಕಿನಲ್ಲಿ 269, ಭದ್ರಾವತಿಯಲ್ಲಿ 155, ತೀರ್ಥಹಳ್ಳಿ 30, ಶಿಕಾರಿಪುರ 90, ಸಾಗರ 45, ಹೊಸನಗರ 33 ಹಾಗೂ ಸೊರಬದಲ್ಲಿ 54, ಇತರೆ ಜಿಲ್ಲೆಯ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 39 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 6573 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

Ad Widget

Related posts

ಶಿವಮೊಗ್ಗದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ ನಿಷೇದಾಜ್ಞೆ ಜಾರಿ, ನಗರದಲ್ಲಿ ಪ್ರಕ್ಷುಬ್ಧ ವಾತಾವರಣ

Malenadu Mirror Desk

ಪತ್ರಕರ್ತರು ಸಮಾಜಮುಖಿ ಪಥದಲ್ಲಿ ಸಾಗಬೇಕು: ಗೋಪಾಲ್ ಯಡಗೆರೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ

Malenadu Mirror Desk

ನಾಳೆ ರಂಗಮಂದಿರದಲ್ಲಿ ದತ್ತಿ ಉಪನ್ಯಾಸ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.